Advertisement

ನನ್ನನ್ನು ಪಾರು ಮಾಡಿ; ಇಲ್ಲದಿದ್ದರೆ ನನ್ನ ಕೊಲೆಯಾದೀತು: ಹದಿಯಾ

11:35 AM Oct 27, 2017 | udayavani editorial |

ತಿರುವನಂತಪುರ : ನನ್ನನ್ನು ಇಲ್ಲಿಂದ ಪಾರು ಮಾಡಿ, ಇಲ್ಲದಿದ್ದರೆ ಯಾವ ಹೊತ್ತಿನಲ್ಲೂ ನನ್ನನ್ನು  ಕೊಂದು ಬಿಡುತ್ತಾರೆ ಎಂದು ಅಖೀಲಾ ಅಶೋಕನ್‌ ಅಥವಾ ಹದಿಯಾ ಗೋಗರೆಯುವ ಎರಡನೇ ವಿಡಿಯೋವನ್ನು ಬಿಡುಗಡೆ ಮಾಡಲಾಗಿದೆ.

Advertisement

ಲವ್‌ ಜಿಹಾದ್‌ ಆರೋಪದಲ್ಲಿ ಶಫೀನ್‌ ಜಹಾನ್‌ ಜತೆ ನಡೆದಿರುವ ಮದುವೆಯನ್ನು ಕೇರಳ ಹೈಕೋರ್ಟ್‌ ರದ್ದು ಮಾಡಿದ ಬಳಿಕ ಹದಿಯಾಳನ್ನು ನ್ಯಾಯಾಲಯ ಆಕೆಯ ಹೆತ್ತವರ ವಶಕ್ಕೆ ಒಪ್ಪಿಸಿದೆ.

ಸಾಮಾಜಿಕ ಕಾರ್ಯಕರ್ತ ರಾಹುಲ್‌ ಈಶ್ವರ್‌ ಕಳೆದ ಆಗಸ್ಟ್‌ 17ರಂದು ಚಿತ್ರೀಕರಿಸಿಕೊಂಡಿರುವ ಹದಿಯಾಳ ಎರಡನೇ ವಿಡಿಯೋದಲ್ಲಿ ಆಕೆ ಜೀವ ರಕ್ಷಣೆಗಾಗಿ ಗೋಗರೆಯುತ್ತಿರುವುದು ಕಂಡು ಬರುತ್ತದೆ. 

“ನೀವು ನನ್ನನ್ನು ಇಲ್ಲಿಂದ ಪಾರು ಮಾಡಲೇಬೇಕು; ಇಲ್ಲದಿದ್ದರೆ ನಾಳೆ ಅಥವಾ ನಾಡಿದ್ದರೊಳಗಾಗಿ, ಯಾವುದೇ ಹೊತ್ತಿನಲ್ಲಿ ನನ್ನನ್ನು ಕೊಂದುಬಿಡಬಹುದು. ನನ್ನ ತಂದೆಗೆ ವಿಪರೀತ ಸಿಟ್ಟು ಬಂದಿದೆ ಎಂಬುದು ನನಗೆ ಗೊತ್ತಿದೆ. ನಾನು ನಡೆದಾಡಿದಾಗ ಆತ ನನ್ನನ್ನು ಹೊಡೆದು ಕಾಲಿನಿಂದ ತುಳಿಯುತ್ತಾನೆ; ನನ್ನ ತಲೆ ಅಥವಾ ನನ್ನ ದೇಹದ ಯಾವುದೇ ಭಾಗ ಎಲ್ಲಿಗಾದರೂ ಅಪ್ಪಳಿಸಿತೆಂದರೆ ನಾನು ಸಾಯುವುದು ನಿಶ್ಚಿತ’ ಎಂದುಹದಿಯಾ ವಿಡಿಯೋದಲ್ಲಿ ಹೇಳಿದ್ದಾಳೆ. 

25ರ ಹರೆಯದ ಹದಿಯಾ ಓರ್ವ ಹೊಮಿಯೋಪತಿಕ್‌ ವೈದ್ಯೆ; ಕಳೆದ ವರ್ಷ ಶಾಫೀನ್‌ ಜಹಾನ್‌ ಜತೆಗೆ ಮದುವೆಯಾದ ಬಳಿಕ ಆಕೆ ಇಸ್ಲಾಂ ಗೆ ಮತಾಂತರಗೊಂಡಿದ್ದಳು. 

Advertisement

ಹದಿಯಾಳನ್ನು ಮದುವೆಯಾದ ಶಾಫೀನ್‌ ಜಹಾನ್‌ಗೆ ಉಗ್ರ ಸಂಘಟನೆಗಳ ಜತೆಗೆ ನಂಟಿದೆ ಮತ್ತು ನನ್ನ ಮಗಳನ್ನು ಆತ ಬಲವಂತದಿಂದ ಇಸ್ಲಾಂ ಗೆ ಮತಾಂತರಿಸಿದ್ದಾನೆ ಎಂದು ಹದಿಯಾಳ ತಂದೆ ನೀಡಿದ್ದ ಹೇಳಿಕೆಯನ್ನು  ಕೇರಳ ಹೈಕೋರ್ಟ್‌ ಸ್ವೀಕರಿಸಿತ್ತು. 

ಹದಿಯಾಳ ಪ್ರಕರಣದಲ್ಲಿ ಲವ್‌ ಜಿಹಾರ್‌ ನಡೆದಿತ್ತೇ ಎಂಬುದನ್ನು ತನಿಖೆ ನಡೆಸುವಂತೆ ಸುಪ್ರೀಂ ಕೋರ್ಟ್‌ ರಾಷ್ಟ್ರೀಯ ತನಿಖಾ ದಳಕ್ಕೆ (ಎನ್‌ಐಎ) ಆದೇಶಿಸಿತ್ತು.  ಪರಸ್ಪರ ಒಪ್ಪಿಗೆಯೊಂದಿಗೆ ಮದುವೆಯಾಗಿದ್ದ ಪ್ರೌಢ ವಯಸ್ಕರ ಮದುವೆಯನ್ನು ಕೇರಳ ಹೈಕೋರ್ಟ್‌ ರದ್ದು ಮಾಡಿದ್ದಾದರೂ ಹೇಗೆ ಎಂದು ಈ ವರ್ಷದ ಆದಿಯಲ್ಲಿ ಸುಪ್ರೀಂ ಕೋರ್ಟ್‌ ಪ್ರಶ್ನಿಸಿತ್ತು. 

ರಾಹುಲ್‌ ತಯಾರಿಸಿದ ಮೊದಲ ವಿಡಿಯೊದಲ್ಲಿ ಹದಿಯಾ, “ಇದು ನನ್ನ ಬದುಕೇ? ನಾನು ಈ ಸ್ಥಿತಿಯಲ್ಲಿ ಬದುಕಬೇಕೇ?’ ಎಂದು ಹೇಳಿದ್ದಳು. ಕೇರಳ ಹೈಕೋರ್ಟ್‌ ಹದಿಯಾಳನ್ನು ಆಕೆಯ ಹೆತ್ತವರ ರಕ್ಷಣಾ ವಶಕ್ಕೆ ಒಪ್ಪಿಸಿದ ಬಳಿಕ ಆಕೆಯ ತಂದೆ, ಆಕೆಗೆ ಮನೆಯಿಂದ ಹೊರಹೋಗುಲು ಬಿಡುತ್ತಿಲ್ಲ. ಆಕೆಯ ಮನೆಯ ಮುಂದೆ ಪೊಲೀಸರು ಕಾವಲು ಕಾಯುತ್ತಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next