Advertisement

ಕರಾವಳಿ ಆಚರಣೆಯನ್ನು ಮಕ್ಕಳಿಗೂ ತಿಳಿಸುತ್ತೇನೆ..: ಶಿಲ್ಪಾ ಶೆಟ್ಟಿ

09:57 AM Apr 24, 2023 | Team Udayavani |

ಬಾಲಿವುಡ್‌ನಲ್ಲಿ ಸ್ಟಾರ್‌ ನಟಿಯಾಗಿ ಮಿಂಚುತ್ತಿರುವ ಕರಾವಳಿ ಕುವರಿ ಶಿಲ್ಪಾ ಶೆಟ್ಟಿ, ತನ್ನ ತವರು ಕರಾವಳಿಯ ನಂಟು ಬಿಟ್ಟವರಲ್ಲ. ದೈವ-ದೇವರ ಕಾರ್ಯಗಳಿಗೆ ಊರಿಗೆ ಬರುತ್ತಿರುವ ಶಿಲ್ಪಾ ಇತ್ತೀಚೆಗಷ್ಟೇ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಕುಟುಂಬ ಸಮೇತ ಭೇಟಿ ನೀಡಿ ಪೂಜೆ ಸಲ್ಲಿಸಿದ್ದರು.

Advertisement

ಇದೇ ವೇಳೆ ಮಾತನಾಡಿದ ಶಿಲ್ಪಾ, ತಮ್ಮ ಮಕ್ಕಳಿಗೂ ತನ್ನ ತವರು ಮಂಗಳೂರಿನ ಸಂಸ್ಕೃತಿ, ಆಚರಣೆಗಳನ್ನು ಪರಿಚಯಿಸುವ ಆಸೆ ಇದೆ ಎಂದಿದ್ದಾರೆ. ಶಿಲ್ಪಾ ಶೆಟ್ಟಿಯವರಿಗೆ ವಿಹಾನ್‌ ಹಾಗೂ ಸಮಿಶಾ ಎಂಬ ಇಬ್ಬರು ಮಕ್ಕಳಿದ್ದಾರೆ.

ಸದ್ಯ ಶಿಲ್ಪಾ ಶೆಟ್ಟಿ ಪ್ರೇಮ್‌ ನಿರ್ದೇಶನದ “ಕೆಡಿ’ ಚಿತ್ರದಲ್ಲಿ ನಟಿಸಿದ್ದು, ಯುಗಾದಿ ಹಬ್ಬದ ಸಂದರ್ಭದಲ್ಲಿ ಶಿಲ್ಪಾ ಶೆಟ್ಟಿ ಪಾತ್ರವನ್ನು ಅನಾವರಣಗೊಳಿಸಿದೆ. ಚಿತ್ರದಲ್ಲಿ ಶಿಲ್ಪಾ ಶೆಟ್ಟಿ ಸತ್ಯವತಿ ಎಂಬ ಪಾತ್ರ ಮಾಡುತ್ತಿದ್ದಾರೆ. ಸಖತ್‌ ಸ್ಟೈಲಿಶ್‌ ಆಗಿ ಕಾಣಿಸಿಕೊಂಡಿರುವ ಅವರ ಪೋಸ್ಟರ್‌ ಅನ್ನು ಚಿತ್ರತಂಡ ಬಿಡುಗಡೆ ಮಾಡಿದೆ.

ಇದನ್ನೂ ಓದಿ:ಬಿಜೆಪಿ ಸರ್ಕಾರ ಬಂದರೆ ತೆಲಂಗಾಣದಲ್ಲಿ ಮುಸ್ಲಿಮ್ ಮೀಸಲಾತಿ ರದ್ದು: ಅಮಿತ್ ಶಾ

ಶಿಲ್ಪಾ ಶೆಟ್ಟಿ ಈಗಾಗಲೇ ಕನ್ನಡದ “ಪ್ರೀತ್ಸೋದ್‌ ತಪ್ಪಾ’ ಹಾಗೂ “ಆಟೋ ಶಂಕರ್‌’ ಚಿತ್ರಗಳಲ್ಲಿ ನಟಿಸಿದ್ದಾರೆ. ಈಗ ಪ್ರೇಮ್‌ ಸಿನಿಮಾದಲ್ಲಿ ನಟಿಸಿದ್ದಾರೆ. ಇದು ಶಿಲ್ಪಾ ನಟಿಸುತ್ತಿರುವ ಮೂರನೇ ಕನ್ನಡ ಸಿನಿಮಾ. ಈ ಚಿತ್ರದಲ್ಲಿ ಶಿಲ್ಪಾ ಅಲ್ಲದೇ, ಬಾಲಿವುಡ್‌ನ‌ ಮತ್ತೂಬ್ಬ ಸ್ಟಾರ್‌ ನಟ ನಟಿಸಿದ್ದಾರೆ. ಅದು ಸಂಜಯ್‌ ದತ್‌. ಹೌದು, ಈಗಾಗಲೇ “ಕೆಜಿಎಫ್-2′ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಅದ್ಧೂರಿ ಎಂಟ್ರಿಕೊಟ್ಟಿದ್ದ ಸಂಜಯ್‌ ದತ್‌ ಈಗ “ಕೆಡಿ’ಯಲ್ಲೂ ಪ್ರಮುಖ ಪಾತ್ರ ಮಾಡುತ್ತಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next