Advertisement

ದಂಗಲ್‌ ಚಿತ್ರ ನೋಡಿದ್ದೇನೆ; ಚೆನ್ನಾಗಿದೆ: ಮೋದಿಗೆ ಜಿನ್‌ಪಿಂಗ್‌

06:18 PM Jun 09, 2017 | Team Udayavani |

ಅಸ್ತನಾ, ಕಝಕ್‌ಸ್ಥಾನ : “ನಾನು ಆಮೀರ್‌ ಖಾನ್‌ ನಟನೆಯ ಕ್ರೀಡಾ ಕಥಾ ಚಿತ್ರ “ದಂಗಲ್‌’ ನೋಡಿ ಮೆಚ್ಚಿಕೊಂಡಿದ್ದೇನೆ’ ಎಂದು ಚೀನದ ಅಧ್ಯಕ್ಷ  ಕ್ಸಿ ಜಿನ್‌ಪಿಂಗ್‌ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಂಭ್ರಮದಿಂದ ಹೇಳಿದ್ದಾರೆ.

Advertisement

ಆಮೀರ್‌ ಖಾನ್‌ ನಟನೆಯ ಸೂಪರ್‌ ಹಿಟ್‌ ಕ್ರೀಡಾ ಕಥಾ ಚಿತ್ರ ದಂಗಲ್‌ ಚೀನದಲ್ಲಿ ಕಳೆದ ಮೇ 5ರಂದು ಬಿಡುಗಡೆಗೊಂಡಿದ್ದು ಅಲ್ಲಿಯೂ ಅದು ಸೂಪರ್‌ ಹಿಟ್‌ ಆಗಿದೆ. ಈಚೆಗೆ 1,100 ಕೋಟಿ ರೂ.ಗಳ ಜಾಗತಿಕ ಬಾಕ್ಸ್‌ ಆಫೀಸ್‌ ಗಳಿಕೆಯನ್ನು ದಾಖಲಿಸಿರುವ ದಂಗಲ್‌ ಚಿತ್ರ, ಚೀನ ಸಿನೇಮಾ ರಂಗದಲ್ಲಿ ಹಲವು ದಾಖಲೆಗಳನ್ನು ಮುರಿದು ಅತ್ಯಂತ ಜನಪ್ರಿಯವಾಗಿದೆ. ಚೀನದಲ್ಲಿ ಒಂದು ಶತಕೋಟಿ ಯುವಾನ್‌ (14.70 ಕೋಟಿ ಡಾಲರ್‌) ಗಳಿಸಿರುವ 33ನೇ ಚಿತ್ರ ಎಂಬ ದಾಖಲೆಯನ್ನು ದಂಗಲ್‌ ಮಾಡಿದೆ. ಚೀನದ ಸುಮಾರು 7,000 ಸಿನೇಮಾ ಮಂದಿಗಳಲ್ಲಿ ದಂಗಲ್‌ ಪ್ರದರ್ಶನ ಈಗಲೂ ಸಾಗಿದೆ.

ಕಝಕ್‌ಸ್ಥಾನದ ರಾಜಧಾನಿಯಾಗಿರುವ ಅಸ್ತಾನಾದಲ್ಲಿ ಎರಡು ದಿನಗಳ ಶಾಂಘೈ ಸಹಕಾರ ಶೃಂಗದ ಪಾರ್ಶ್ವದಲ್ಲಿ ಪ್ರಧಾನಿ ಮೋದಿ ಮತ್ತು ಚೀನ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಭೇಟಿಯಾಗಿದ್ದಾರೆ. ‘ದಂಗಲ್‌ ಕ್ರೀಡಾ ಕಥಾ ಚಿತ್ರವನ್ನು ನಾನು ನೋಡಿದ್ದೇನೆ; ತುಂಬಾ ಚೆನ್ನಾಗಿದೆ; ಚೀನದಲ್ಲಿ ಅದು ಚೆನ್ನಾಗಿ ಓಡುತ್ತಿದೆ’ ಎಂದು ಚೀನ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಹೇಳಿದ್ದಾರೆ ಎಂದು ವಿದೇಶ ಕಾರ್ಯದರ್ಶಿ ಎಸ್‌ ಜೈಶಂಕರ್‌ ಮಾಧ್ಯಮಕ್ಕೆ ತಿಳಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next