Advertisement

ದೇಶದ ರಕ್ಷಣೆಗಾಗಿ ಹೋರಾಟ, ಶತ್ರು ಸಂಹಾರ; ಓದಿ ಸೇನೆಯ ಸ್ಫೂರ್ತಿ ಸಂದೇಶ

03:40 PM Aug 13, 2018 | udayavani editorial |

ಹೊಸದಿಲ್ಲಿ : “ನಿಮ್ಮ ಜತೆ ನಾನು ಹುಟ್ಟಿದವನಲ್ಲ, ನಿಮ್ಮ ಜತೆ ಬೆಳೆದವನೂ ಅಲ್ಲ; ಆದರೂ ನಾನು ನಿಮಗಾಗಿ, ನಿಮ್ಮ ರಕ್ಷಣೆಗಾಗಿ ಹೋರಾಡುತ್ತೇನೆ, ಶತ್ರುವನ್ನು ಸಂಹರಿಸುತ್ತೇನೆ; ನಿಮ್ಮ ಎದುರೇ ಪ್ರಾಣ ಕಳೆದುಕೊಳ್ಳುತ್ತೇನೆ’.

Advertisement

ದೇಶದ 72ನೇ ಸ್ವಾತಂತ್ರ್ಯ ದಿನಾಚರಣೆಗೆ ಮುನ್ನ ಭಾರತೀಯ ಸೇನಾ ಪಡೆ ಸಾಮಾಜಿಕ ಮಾಧ್ಯಮಗಳಲ್ಲಿ ಈ ಪ್ರೇರಣಾತ್ಮಕ ಸಂದೇಶವನ್ನು ಹಂಚಿಕೊಂಡಿರುವುದು ಎಲ್ಲ ದೇಶಪ್ರೇಮಿಗಳ ಮನಸ್ಸನ್ನು ಕರಗಿಸಿದೆ. ಸೇನೆ ನಮಗಾಗಿ, ನಮ್ಮ ಭದ್ರತೆಗಾಗಿ, ನಮ್ಮ ರಕ್ಷಣೆಗಾಗಿ ಹೋರಾಡುತ್ತಿದೆ, ನಮಗಾಗಿ ಪ್ರಾಣಾರ್ಪಣೆ ಮಾಡುತ್ತಿದೆ ಎಂಬ ಈ ಸಂದೇಶ ಜನರಲ್ಲಿ ಸೇನೆಯ ಬಗ್ಗೆ ಅಪಾರವಾದ ಗೌರವವನ್ನು ಬಡಿದೆಬ್ಬಿಸಿದೆ.

ಸೇನೆಯ ಸಾರ್ವಜನಿಕ ಮಾಹಿತಿಯ ಹೆಚ್ಚುವರಿ ಮಹಾ ನಿರ್ದೇಶಕರು ಸೇನೆಯ ಈ ಪ್ರೇರಣಾತ್ಮಕ ಸಂದೇಶವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಜನರೊಂದಿಗೆ ಹಂಚಿಕೊಂಡಿದ್ದಾರೆ. 

ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಉಗ್ರರು ದಿಲ್ಲಿ ಸಹಿತ ಹಲವೆಡೆಗಳಲ್ಲಿ ಭಯೋತ್ಪಾದಕ ದಾಳಿ ನಡೆಸುವ ಯೋಜನೆ ಹೊಂದಿರುವುದಾಗಿ ಗುಪ್ತಚರ ದಳ ಸೇನೆಗೆ ಮಾಹಿತಿ ನೀಡಿರುವ ಹಿನ್ನೆಲೆಯಲ್ಲಿ ಈ ಪ್ರೇರಣಾತ್ಮಕ ಸಂದೇಶವನ್ನು ಸೇನೆ ಹಂಚಿಕೊಂಡಿದೆ. 

Advertisement

ದಿಲ್ಲಿಯ ಐತಿಹಾಸಿಕ ಕೆಂಪು ಕೋಟೆಯಲ್ಲಿ ನಡೆಯುವ 72ನೇ ಸ್ವಾತಂತ್ರ್ಯ ದಿನಾಚರಣೆ ಸಂಬಂಧವಾಗಿ ಇಂದು ಸೋಮವಾರದಿಂದಲೇ ರಾಷ್ಟ್ರ ರಾಜಧಾನಿಯಲ್ಲಿ ಭಾರೀ ಭದ್ರತೆ, ಬಂದೋಬಸ್ತ್ ಏರ್ಪಡಿಸಲಾಗಿದ್ದು ವಿಶೇಷ ವಾಹನ ಸಂಚಾರ ಮತ್ತು ನಿರ್ಬಂಧಗಳನ್ನು ಅಣಿಗೊಳಿಸಲಾಗಿದೆ. 

ದಿಲ್ಲಿ ಪೊಲೀಸರು, ಅನೇಕ ಕಡೆಗಳಲ್ಲಿ, ಮುಖ್ಯವಾಗಿ ಬಸ್‌ ನಿಲ್ದಾಣ, ಮಾರುಕಟ್ಟೆ ಮತ್ತಿತರ ಪ್ರಮುಖ ತಾಣಗಳಲ್ಲಿ, ಹೆಚ್ಚುವರಿ ಸಿಸಿಟಿವಿ ಗಳನ್ನು ಹಾಕಿಸಿದ್ದಾರೆ;

Advertisement

Udayavani is now on Telegram. Click here to join our channel and stay updated with the latest news.

Next