ಲಖೀಂಪುರಖೇರಿ: ಉ.ಪ್ರ.ದ ಲಖೀಂಪುರ ಖೇರಿಯಲ್ಲಿ ಅ.3ರಂದು ನಡೆದ ಹಿಂಸಾ ಘಟನೆಗೆ ಸಂಬಂಧಿಸಿದಂತೆ ಬಂಧನ ಕ್ಕೊಳಗಾಗಿರುವ ಕೇಂದ್ರ ಸಚಿವ ಅಜಯ ಕುಮಾರ್ ಮಿಶ್ರಾ ಪುತ್ರ ಆಶಿಷ್ ಮಿಶ್ರಾರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
12 ಗಂಟೆಗಳ ವಿಚಾರಣೆ ಬಳಿಕ ಅವರನ್ನು ಶನಿವಾರ ತಡ ರಾತ್ರಿ ಬಂಧಿಸಲಾಗಿತ್ತು. ಇದೇ ವೇಳೆ, ವಿಚಾರಣೆ ವೇಳೆ ಅವರು ಹೇಳಿದ ಮಾಹಿತಿಗಳ ವಿವರಗಳನ್ನು “ಇಂಡಿಯಾ ಟುಡೇ’ ಟಿವಿ ಪ್ರಸಾರ ಮಾಡಿದೆ. “ಘಟನೆ ನಡೆದ ಸ್ಥಳದಲ್ಲಿ ನಾನು ಇರಲೇ ಇಲ್ಲ. ನಾನು ಲಖೀಂಪುರ ದಲ್ಲಿ ಆಗಮಿ ಸಲಿದ್ದ ವಿವಿ ಐಪಿಗಳ ಸ್ವಾಗತ ಕ್ಕಾಗಿ ಕೈಗೊಳ್ಳಲಾದ ಸಿದ್ಧತೆ ಯಲ್ಲಿ ತೊಡ ಗಿಸಿಕೊಂಡಿದ್ದೆ. ಹಾಗಾಗಿ ರೈತರ ಪ್ರತಿಭಟನೆ ನಡೆದ ಸ್ಥಳದಲ್ಲಿ ನಾನು ಇರಲಿಲ್ಲ’ ಎಂದು ಹೇಳಿಕೊಂಡಿದ್ದರು, “ರೈತರ ಪ್ರತಿಭಟನೆ ವಿಚಾರ ಗೊತ್ತಿತ್ತು ಎಂದಿದ್ದಾರೆ.
ಇದನ್ನೂ ಓದಿ:ಐಪಿಎಲ್ ಕ್ವಾಲಿಫೈಯರ್-1: 9ನೇ ಸಲ ಫೈನಲ್ ತಲುಪಿದ ಚೆನ್ನೈ
“ರೈತರ ಮೇಲೆ ಹರಿದ ಕಾರನ್ನು ಯಾರು ಚಲಾಯಿಸುತ್ತಿದ್ದರು’ ಎಂಬ ಪ್ರಶ್ನೆಗೆ, “ಘಟನೆ ನಡೆದಾಗ ಆ ಕಾರನ್ನು ನಮ್ಮ ಕಾರು ಚಾಲಕ ಹರೋನ್ ಮಿಶ್ರಾ ಓಡಿಸುತ್ತಿದ್ದ. ಮತ್ತೊಂದು ಕಾರಿನಲ್ಲಿ ನನ್ನ ಆಪ್ತರಾದ ಅಂಕಿತ್ ದಾಸ್ ಹಾಗೂ ಬಿಜೆಪಿ ಕಾರ್ಯಕರ್ತರೊಬ್ಬರು ಇದ್ದರು. ಗಣ್ಯರನ್ನು ಸಮಾರಂ ಭಕ್ಕೆ ಕರೆತರಲು ಈ ಕಾರುಗಳು ಹೋಗಿದ್ದವು’ ಎಂದಿದ್ದಾರೆ. ಇದೇ ವೇಳೆ, ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡನೇ ಎಫ್ಐಆರ್ ದಾಖಲಾಗಿದೆ. ಅದರಲ್ಲಿ ಪ್ರತಿಭಟನ ನಿರತರೇ ಬಿಜೆಪಿ ಕಾರ್ಯ ರ್ತರ ಮೇಲೆ ದಾಳಿ ಮಾಡಿದರು ಎಂದು ಉಲ್ಲೇಖೀಸಲಾಗಿದೆ.