Advertisement
ಇದು ಗಿಮಿಕ್: ಕಾಂಗ್ರೆಸ್“ರಾಜೀನಾಮೆ ನೀಡುವ ಕೇಜ್ರಿವಾಲ್ ಘೋಷಣೆ ಗಿಮಿಕ್’ ಎಂದು ದಿಲ್ಲಿಯ ಕಾಂಗ್ರೆಸ್ ನಾಯಕ ಸಂದೀಪ್ ದೀಕ್ಷಿತ್ ಟೀಕಿಸಿದ್ದಾರೆ. ಕೇಜ್ರಿವಾಲ್ ಮುಖ್ಯಮಂತ್ರಿ ಸ್ಥಾನ ತ್ಯಜಿಸಬೇಕು ಎಂದು ಹಲವು ಸಮಯದಿಂದ ಒತ್ತಾಯಿಸುತ್ತಿದ್ದೆವು. ಈಗ ಅವರ ಘೋಷಣೆ ಕೇವಲ ಗಿಮಿಕ್ ಆಗಿದೆ. ಜಾಮೀನು ಪಡೆದು ಬಿಡುಗಡೆಯಾದ ಸಿಎಂಗೆ ಕಚೇರಿಗೆ ತೆರಳಬಾರದು, ಕಡತಗಳಿಗೆ ಸಹಿ ಹಾಕಬಾರದು ಎಂದು ವಿಧಿಸಿರುವ ನಿರ್ಬಂಧ ಮೊದಲನೇಯದ್ದು ಎನಿಸುತ್ತದೆ ಎಂದರು.