ಅದ್ಯಾವಾಗ ಈ ಮನಸ್ಸು ನಿನಗೆ ಶರಣಾಯಿತೋ ತಿಳಿಯದು. ನಿನ್ನ ಕೇರಿಂಗ್ ನೇಚರ್, ಮಾತು, ನಡವಳಿಕೆ ನೋಡಿ ನಿನ್ನ ಮೇಲೆ ಪ್ರೀತಿಯಾಗಿದೆ. ಆದರೇನು ಮಾಡಲಿ, ಹೇಳಿಕೊಳ್ಳಲು ಅಂಜಿಕೆ.
ಹೇ ಹುಡುಗ
ಕಾದೂ ಕಾದೂ ಸಾಕಾಗಿದೆ. ಪ್ಲೀಸ್ ಹೇಳಿಬಿಡು, ನೀನು ನನ್ನನ್ನು ಪ್ರೀತಿಸ್ತಿದೀಯ ತಾನೆ? ನಿನ್ನ ಮನದೊಳಗೆ ನನ್ನ ಚಿತ್ರವಿದೆ ತಾನೆ? ಅದನ್ನೇ ನನ್ನ ಮುಂದೆ ಹೇಳಿ ಬಿಡು. ಅವಳನ್ನು ಪ್ರೀತಿಸುತ್ತಿದ್ದೇನೆ ಅಂತ ಊರಿಗೆಲ್ಲಾ ಹೇಳಿದ್ದೀಯಾ, ನನ್ನೊಬ್ಬಳನ್ನು ಬಿಟ್ಟು! ಹಾಗೆ ಹೇಳಿ ಏನು ಪ್ರಯೋಜನ? ನಿನ್ನ ಪ್ರೀತಿಯನ್ನು ಒಪ್ಪಿಕೊಳ್ಳಬೇಕಾದವಳು ನಾನೇ ಹೊರತು ಬೇರೆಯವರಲ್ಲ.
ನಿಂಗೊಂದು ವಿಷಯ ಗೊತ್ತಾ? ನೀನು ನನ್ನ ಹಿಂದೆ ಬಿದ್ದಿದೀಯ. ಒಳಗೊಳಗೇ ನನ್ನ ಪ್ರೀತಿಸ್ತಿದೀಯ ಎಂಬ ವಿಷಯ ಪದವಿಯ ಮೊದಲ ವರ್ಷದಲ್ಲೇ ನಂಗೆ ಗೊತ್ತಿತ್ತು. ಆದರೂ ಏನೂ ತಿಳಿದೇ ಇಲ್ಲ ಅನ್ನುವಂತೆ ಸುಮ್ಮನಿದ್ದೆ. ಅಲ್ಲಾ, ಆಗ ನಮ್ಮಿಬ್ಬರ ನಡುವೆ ಮಾತುಕತೆಯೇ ಶುರುವಾಗಿರಲಿಲ್ಲ .ಅದು ಹೇಗೆ ಮತ್ತು ಯಾಕೆ ನನ್ನನ್ನು ಇಷ್ಟಪಟ್ಟೆಯೋ ನಾಕಾಣೆ!
ನಮ್ಮ ನಡುವೆ ಮಾತು ಅಂತ ಶುರುವಾಗಿದ್ದೇ ಜಗಳದಿಂದ. ಕಾಲೇಜಿನ ವಾಟ್ಸಾéಪ್ ಗ್ರೂಪ್‌ನಲ್ಲಿ ಜಗಳ ನಡೆದಾಗ, ನೀನು ನನಗೆ ಸಮಾಧಾನ ಮಾಡಲು ಪರ್ಸನಲ್ ಮೆಸೇಜ್ ಮಾಡಿದ್ದೆ. ಅದು ನಡೆದು ಎರಡು ವರ್ಷಗಳಾಯ್ತು. ಈಗೀಗ ನಿನ್ನನ್ನು ಎಷ್ಟು ಹಚ್ಚಿಕೊಂಡು ಬಿಟ್ಟಿದ್ದೇನೆಂದರೆ, ನಿನ್ನಿಂದ ಒಂದು ದಿನ ಮೆಸೇಜ್ ಬರದಿದ್ದರೆ ಏನೋ ಕಳವಳ, ಕಸಿವಿಸಿ.
ಅದ್ಯಾವಾಗ ಈ ಮನಸ್ಸು ನಿನಗೆ ಶರಣಾಯಿತೋ ತಿಳಿಯದು. ನಿನ್ನ ಕೇರಿಂಗ್ ನೇಚರ್, ಮಾತು, ನಡವಳಿಕೆ ನೋಡಿ ನಿನ್ನ ಮೇಲೆ ಪ್ರೀತಿಯಾಗಿದೆ. ಆದರೇನು ಮಾಡಲಿ, ಹೇಳಿಕೊಳ್ಳಲು ಅಂಜಿಕೆ. ಇವತ್ತಲ್ಲ ನಾಳೆ, ನೀನು ಬಾಯ್ಬಿಟ್ಟು ಹೇಳುತ್ತೀಯಾ, ನಾನದನ್ನು ಒಪ್ಪಿಕೊಳ್ಳುತ್ತೇನೆ ಅಂತ ಕಾಯುವುದೇ ಆಗಿದೆ…
ಪ್ಲೀಸ್, ಬೇಗ ಹೇಳಿಬಿಡು, ಜಾಸ್ತಿ ಕಾಯಿಸಬೇಡ
– ಅಭಿಸಾರಿಕೆ