ಏಕೆಂದರೆ ಆಗ ಮಾತ್ರ ನೀನು ನನ್ನನ್ನು ಅತಿಕ್ರಮಿಸುವೆ. ನನಗೆ ನೀನು ಅಂದ್ರೆ ತುಂಬಾ ಇಷ್ಟ, ಆದರೆ ಏನು ಮಾಡೋದು? ಮನದಾಳದ ಮಾತುಗಳನ್ನು ಹೇಳಲು ನನಗೆ ತುಂಬಾ ಕಷ್ಟ. ಯಾಕೆ ಅಂತೀಯಾ? ಈ ಮಾತನ್ನು ಬೇರೆಯವರಿಗೆ ಹೇಳಿದರೆ ಸಾಕು. ನನ್ನನ್ನು ಕುಂಬಕರ್ಣೆ ಎನ್ನುವರು. ಅದಕ್ಕೆ ನಾನು ನಿನ್ನನ್ನು ಪ್ರೀತಿಸಲು ಸಾಧ್ಯವಾಗುತ್ತಿಲ್ಲ.
Advertisement
ಆದರೆ ನಾನು ಪ್ರೀತಿಸುವೆ. ಕೆಲವೊಂದು ಸಲ ಅನಿಸುತ್ತೆ. ನೀನು ಈ ಲೋಕದಲ್ಲೇ ಇರಲಿಲ್ಲ ಅಂದರೆ, ಈ ಜಗತ್ತು ಇಷ್ಟವಾಗುತ್ತಿರಲಿಲ್ಲ ಅಂತ. ಆದರೆ ಕೆಲವರಿಗೆ ನಿನ್ನ ನೋಡಿದರೆ ದ್ವೇಷ. ಹಾಗೆ ದ್ವೇಷ ಮಾಡುವವರಿಗೆ ಬುದ್ಧಿ ಇಲ್ಲ ಅಷ್ಟೆ. ಆದರೆ ನಾನು ಮಾತ್ರ ನಿನ್ನನ್ನು ಎಂದೂ ಬಿಟ್ಟಿರುವುದಿಲ್ಲ. ನಿನ್ನನ್ನು ಎಷ್ಟು ಪ್ರೀತಿಸುತ್ತೇನೆ ಗೊತ್ತಾ? ಗೊತ್ತಿಲ್ಲ ತಾನೇ? ಹೇಳುತ್ತೇನೆ ಕೇಳು. ನೀನು ನನ್ನನ್ನು ಎಷ್ಟು ಪ್ರೀತಿಸುತ್ತೀಯೋ, ಅದರ ಎರಡರಷ್ಟು. ನನ್ನ ಪ್ರೀತಿ ಸೂರ್ಯನಷ್ಟು ಪ್ರಕಾಶಮಾನವಾದದ್ದು. ಚಂದ್ರನಂತೆ ತಂಪು ಬೀರುವಂಥದ್ದು. ಈಗ ಅರ್ಥವಾಯಿತಾ? ನಾನು ಜೀವನದಲ್ಲಿ ಹತಾಶಳಾಗಿದ್ದಾಗ ನನಗೆ ಸ್ಫೂರ್ತಿಯನ್ನು ನೀಡಿದ್ದೀಯ. ಗುರಿ ಎಂಬ ಸಸ್ಯಕ್ಕೆ ನೀರು ಹಾಕಿ ಹೆಮ್ಮರವಾಗಿ ಬೆಳೆಯುವಂತೆ ಮಾಡಿದ್ದೀಯ. ಇಂದು ಆ ಮರ ಹಸಿರಾಗಿ ಬೇರೆ ಸಸ್ಯಗಳಿಗೆ ಬೆಳೆಯಲು ನೆರಳನ್ನು ನೀಡುತ್ತಿದೆ. ಇಷ್ಟೆಲ್ಲ ಆಗಿದ್ದು ನಿನ್ನಿಂದ. ನೀನು ಇರದೆ ಹೋಗಿದ್ದರೆ ನಾನು ಇವತ್ತಿನ ಸ್ಥಿತಿಯನ್ನು ಮುಟ್ಟಲು ಆಗುತ್ತಿರಲಿಲ್ಲ. ನೀನು ಯಾವಾಗಲೂ ನನ್ನ ಜೊತೆ ಇರಬೇಕು.
ಕೊನೆಯಾಗುವುದೂ ನಿನ್ನಿಂದಲೇ. ದಿನಾ ರಾತ್ರಿಯಾದರೆ ಸಾಕು ನೀನು ಬಂದೇ ಬರುತ್ತೀಯಾ. ನೀ ಬರುವ ಆ ಗಳಿಗೆ ಮೈಯೆಲ್ಲ
ರೋಮಾಂಚನ. ನೀ ಬಂದ ಮೇಲೆ ನಾ ಈ ಜಗವನ್ನೇ ಮರೆಯುವೆ. ನಿನ್ನ ಪ್ರೀತಿಯ ಅಪ್ಪುಗೆಯಲ್ಲಿ ನಾ ಮಲಗುವೆ. ಮತ್ತೆ ಬಾ ನೀನು
ಕನಸೆಂಬ ಪಲ್ಲಕ್ಕಿಯೆನ್ನೇರಿ. ಓ.. ನನ್ನ ಒಲವಿನ ನಿದ್ರಾ ದೇವತೆಯೇ… ನೀನು ಮತ್ತೆ ಬರುವೆ ಎಂಬ ನಂಬಿಕೆಯಿಂದ ಕಾದಿರುವೆ. ಹೋಗಿ ಬಾ ಎನ್ನ ಕನಸಿನ ದೇವತೆ… ನಿನಗಾಗಿ ಕಾದಿರುವೆ… ನಾ ಕಾದಿರುವೆ… ಇಂತಿ ನಿನ್ನ ಗೆಳತಿ ಸುಜ್ಞಾನಿ ಸುನಂದಾ ಎಂ. ಬಡಿಗೇರ, ವಿಜಯಪುರ