ಗದಗ: ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷ ಸ್ಥಾನದ ಮೇಲೆ ಕಣ್ಣು ಹಾಕಿದ್ದ ಮಾಜಿ ಸಚಿವ ಶ್ರೀ ರಾಮುಲು ಅವರು ನಿರಾಸೆ ಅನುಭವಿಸಿದ್ದಾರೆ. ಈ ಬಗ್ಗೆ ಗದಗದಲ್ಲಿ ಸ್ವತಃ ಶ್ರೀರಾಮುಲು ಅವರೇ ಹೇಳಿಕೊಂಡಿದ್ದಾರೆ.
“ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನಾನು ಪ್ರಯತ್ನ ಮಾಡಿದ್ದೆ, ಆದರೆ ಆಗಲಿಲ್ಲವೆಂದು ಗೊತ್ತಾಯಿತು. ಎಲೆಕ್ಷನ್ ನಲ್ಲಿ ಸೋತ್ತಿದೇನೆಲ್ಲ, ಹೀಗಾಗಿ ಪಾರ್ಟಿಯ ಕೆಲಸ ಮಾಡಿಕೊಂಡು ಹೋದರಾಯಿತು. ಖಾಲಿ ಇದೇನಲ್ಲ, ಪಕ್ಷದ ಕಾರ್ಯಕರ್ತರನಾಗಿ ದುಡಿಯುತ್ತೇನೆ. ಎಲೆಕ್ಷನ್ ಸಮಯ ಇದೆ ಹೀಗಾಗಿ ಪಕ್ಷದ ಕೆಲಸ ಮಾಡುತ್ತೇನೆ ಎಂದರು.
ಸಿಎಂ ಸಿದ್ದರಾಮಯ್ಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಮಾಜಿ ಸಚಿವ ಬಿ. ಶ್ರೀರಾಮಲು ಅವರು, ರಾಜ್ಯದಲ್ಲಿ ಭೀಕರ ಬರ ತಾಂಡವಾಡುತ್ತಿದೆ ರೈತರು, ಜನರು ಸಂಕಷ್ಟದಲ್ಲಿದ್ದಾರೆ. ಆದರೆ, ರಾಜ್ಯದ ಸಿಎಂ ಖುಷಿಯಿಂದ ಡ್ಯಾನ್ಸ್ ಮಾಡ್ತಾರೆ. ಹಂಪಿಯಲ್ಲಿ ಕುಣಿದು ಕುಪ್ಪಳಿಸುತ್ತಿದ್ದರು. ಇಂಥ ಸಂಕಷ್ಟದಲ್ಲಿ ರೈತರಿದ್ದರೂ ಸಿಎಂ ಡ್ಯಾನ್ಸ್ ಮಾಡುತ್ತಾ ಮಜಾ ಮಾಡುತ್ತಾರೆ ಎಂದು ಕಿಡಿ ಕಾರಿದರು.
ಇದನ್ನೂ ಓದಿ:Chikkamagaluru:ದತ್ತ ಮಾಲಾಧಾರಣೆ ಹಿನ್ನೆಲೆ ಇಂದು ರಾಜ್ಯಾದ್ಯಂತ ಮಾಲಾಧಾರಿಗಳಿಂದ ಭಿಕ್ಷಾಟನೆ
ನಮ್ಮ ರಾಜ್ಯದಲ್ಲಿ ಏನೂ ಆಗಿಯೇ ಇಲ್ಲ ಎಂಬತೆ ಇದ್ದಾರೆ. ಜನ ಗುಳೆ ಹೋಗುತ್ತಿದ್ದಾರೆ ಈ ಸಂದರ್ಭದಲ್ಲಿ ಕ್ಯಾರೇ ಅನ್ನದೇ ಸಿಎಂ ಸಂತೋಷದಿಂದ ಇದ್ದಾರೆ. ಜನರ ಸಂಕಷ್ಟ ಕೇಳಬೇಕಾದ ಸಿಎಂ ಈ ರೀತಿ ಕುಣಿದರೆ ಹೇಗೆ? ಬೇರೆ ಪಕ್ಷದವರು ಏನಾದರೂ ಈ ರೀತಿ ಡ್ಯಾನ್ಸ್ ಮಾಡಿದರೆ ಸಿದ್ದರಾಮಯ್ಯ ಹಿಗ್ಗಾಮುಗ್ಗಾ ಬೈಯುತ್ತಿದ್ದರು. ಈ ಸರ್ಕಾರದ ಬಗ್ಗೆ ಏನು ಹೇಳಬೇಕೆಂದು ಗೊತ್ತಾಗುತ್ತಿಲ್ಲ ಎಂದು ಶ್ರೀರಾಮುಲು ಹೇಳಿದರು.