Advertisement

ಜಯಾ ನಿವಾಸದ ಮೇಲೆ ಐಟಿ ದಾಳಿ; ಕೋಣೆಗಿಲ್ಲ ಪ್ರವೇಶ!!

09:15 AM Nov 18, 2017 | Team Udayavani |

ಚೆನ್ನೈ: ನಗರದ ಪೋಯಸ್‌ ಗಾರ್ಡನ್‌ನಲ್ಲಿರುವ ಮಾಜಿ ಮುಖ್ಯಮಂತ್ರಿ ದಿವಂಗತ ಜಯಲಲಿತಾ ಅವರ ನಿವಾಸದ ಮೇಲೆ ಶುಕ್ರವಾರ ರಾತ್ರಿ ಐಟಿ ಅಧಿಕಾರಿಗಳು ದಾಳಿ ನಡೆಸಿ  ಕೆಲ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. 

Advertisement

ರಾತ್ರೋ ರಾತ್ರಿ ದಾಳಿ ನಡೆಸಿದ ಅಧಿಕಾರಿಗಳ ತಂಡ ಸುಮಾರು 5ಗಂಟೆಗಳ ಕಾಲ ಪರಿಶೀಲನೆ ನಡೆಸಿದ್ದಾರೆ. 1 ಲ್ಯಾಪ್‌ಟಾಪ್‌, 3 ಪೆನ್‌ಡ್ರೈವ್‌ ಸಹಿತ ಕೆಲ ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.

ಕೋಣೆಗಿಲ್ಲ ಪ್ರವೇಶ 

ಜಯಲಲಿತಾ ಅವರ ಕೋಣೆಯನ್ನು ನಾವು ದೇವಾಲಯವೆಂದು ಭಾವಿಸಿದ್ದೇವೆ. ಹಾಗಾಗಿ ಐಟಿ ಅಧಿಕಾರಿಗಳಿಗೆ ಕೋಣೆಗೆ ಪ್ರವೇಶ ನೀಡಿಲ್ಲ ಎಂದು ಜಯಲಲಿತಾ ಅವರ ಸಂಬಂಧಿ ವಿವೇಕ್‌ ಜಯರಾಮ್‌ ಹೇಳಿಕೆ ನೀಡಿದ್ದಾರೆ. 

ಪ್ರತಿಭಟನೆ 

Advertisement

ಐಟಿ ದಾಳಿ ನಡೆದ ಬೆನ್ನಲ್ಲೇ ಜಯಲಲಿತಾ ಅವರ ಅಭಿಮಾನಿಗಳು ಪ್ರತಿಭಟನೆ ನಡೆಸಿ ಐಟಿ ಇಲಾಖೆಯ ವಿರುದ್ಧ ಧಿಕ್ಕಾರ ಕೂಗಿದ್ದಾರೆ. ಪ್ರತಿಭಟನೆಗಳು ಆರಂಭವಾಗುತ್ತಿದ್ದಂತೆ ಸ್ಥಳದಲ್ಲಿ ಭಾರೀ ಸಂಖ್ಯೆಯ ಪೊಲೀಸರನ್ನು ನಿಯೋಜಿಸಿ ಭದ್ರತೆ ಕೈಗೊಳ್ಳಲಾಯಿತು. 

ಪೋಯೆಸ್‌ ಗಾರ್ಡನ್‌ನಲ್ಲಿರುವ ಶಶಿಕಲಾ ಹಾಗೂ ಅವರ ಸಂಬಂಧಿಕರ ಮನೆಗಳ ಮೇಲೆಸುಧೀರ್ಘ‌ ದಾಳಿ ಮತ್ತು ಭಾರೀ ದಾಖಲೆಗಳ ಪರಿಶೀಲನೆಗಳ ಬಳಿಕ  ಈ ದಾಳಿ ನಡೆದಿದೆ.  

Advertisement

Udayavani is now on Telegram. Click here to join our channel and stay updated with the latest news.

Next