Advertisement

ಅಲ್ ಜವಾಹಿರಿ ಹೇಳಿಕೆಯನ್ನು ಬಲವಾಗಿ ಖಂಡಿಸುತ್ತೇನೆ: ಎಸ್.ಎ.ಹುಸೇನ್

12:39 PM Apr 08, 2022 | Vishnudas Patil |

ಬೆಂಗಳೂರು:  ಹಿಜಾಬ್ ವಿಚಾರದಲ್ಲಿ ಭಾರತೀಯ ಮುಸ್ಲಿಮರು ಒಂದಾಗಬೇಕು ಎಂದು ಅಲ್ ಖೈದಾ ಮುಖ್ಯಸ್ಥ ಅಯ್ಮನ್ ಅಲ್ ಜವಾಹಿರಿ ನೀಡಿರುವ ಹೇಳಿಕೆಯನ್ನು ನಾನು ಬಲವಾಗಿ ಖಂಡಿಸುತ್ತೇನೆ ಎಂದು ಕೆಪಿಸಿಸಿ ಮಾಜಿ ಪ್ರಧಾನ ಕಾರ್ಯದರ್ಶಿ ಎಸ್.ಎ.ಹುಸೇನ್ ಹೇಳಿದ್ದಾರೆ.

Advertisement

ಭಾರತ ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ಪ್ರಜಾಪ್ರಭುತ್ವ ರಾಷ್ಟ್ರ. ಶಾಲೆಯಲ್ಲಿ  ಪಠ್ಯಕ್ರಮ, ಪ್ರಾರ್ಥನೆ, ತತ್ವಶಾಸ್ತ್ರ, ಸಿದ್ಧಾಂತ ಮತ್ತು ಸಮವಸ್ತ್ರವನ್ನು ಆಯ್ಕೆ ಮಾಡಿಕೊಳ್ಳುವುದು ಪ್ರತಿ ಶಿಕ್ಷಣ ಸಂಸ್ಥೆಯ ಮೂಲಭೂತ ಹಕ್ಕು ಎಂಬ ಸತ್ಯವನ್ನು ಒಟ್ಟಾರೆಯಾಗಿ ಮುಸ್ಲಿಂ ಸಮುದಾಯ ಅರ್ಥಮಾಡಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

ಮುಸ್ಲಿಮರು ಮತ್ತು ಹಿಂದೂಗಳ ನಡುವೆ ಕೆಲವು ಫ್ಯಾಸಿಸ್ಟ್ ಶಕ್ತಿಗಳು ರಾಜಕೀಯ ಲಾಭಕ್ಕಾಗಿ ಸಾಮರಸ್ಯವನ್ನು ಕದಡುವ ಪ್ರಯತ್ನ ಮಾಡುತ್ತಿದ್ದಾರೆ. ರಾಷ್ಟ್ರದ ಸಾಮಾಜಿಕ ಮತ್ತು ಜಾತ್ಯತೀತ ಸಂರಚನೆಗೆ ಭಂಗ ತರಲು ಪ್ರಯತ್ನಿಸುತ್ತಿವೆ. ಭಾರತದ ಸಾಮರಸ್ಯ ಕಾಪಾಡಲು ನಾವೆಲ್ಲರೂ ಬದ್ಧರಿದ್ದೇವೆ. ಆದರೆ ನಮಗೆ ಇನ್ನೊಂದು ವಿದೇಶಿ ಫ್ಯಾಸಿಸ್ಟ್ ಸಂಘಟನೆಯಿಂದ ಯಾವುದೇ ಸಲಹೆ ಪಡೆಯುವ ಅಗತ್ಯ‌ ಹಾಗೂ ಅನಿವಾರ್ಯತೆ ಇಲ್ಲ. ಅಲ್ ಜವಾಹಿರಿ ಹೇಳಿಕೆಯನ್ನು ನಾವು ಖಂಡಿಸುತ್ತೇವೆ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next