Advertisement

Belagavi; ಐದು ವರ್ಷ ಬಹಳ ಜಾಗೃತೆಯಿಂದ ಇರಬೇಕೆಂದು ಹಿಂದೆಯೇ ಹೇಳಿದ್ದೆ: ಸತೀಶ್ ಜಾರಕಿಹೊಳಿ

12:56 PM Jan 26, 2024 | Team Udayavani |

ಬೆಳಗಾವಿ: ನಮ್ಮ ಸರಕಾರ ಸಂಪೂರ್ಣ ಬಹುಮತ ಹೊಂದಿದ್ದರೂ ಐದು ವರ್ಷ ಬಹಳ ಜಾಗೃತೆಯಿಂದ ಇರಬೇಕು ಎಂದು ನಾನು ಒಂಬತ್ತು ತಿಂಗಳ ಹಿಂದೆಯೇ ಹೇಳಿದ್ದೆ ಎಂದು ಬೆಳಗಾವಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

Advertisement

ಚುನಾವಣೆಯ ಎರಡು ತಿಂಗಳು ಮೋಡ ಮತ್ತು ಗಾಳಿ ಇದ್ದಂತೆ. ಒಂದು ಕಡೆ ಜೋರು ಮಳೆ ಬರುತ್ತದೆ. ಇನ್ನೊಂದು ಕಡೆ ಕಡಿಮೆ ಮಳೆ ಬೀಳಬಹುದು. ಈಗ ಅದೇ ರೀತಿ ನಡೆದಿದೆ. ಪಕ್ಷಾಂತರ ಸಹಜ‌. ಚುನಾವಣೆ ಸಮಯದಲ್ಲಿ ಒತ್ತಡಗಳು ಬರುವದು ಸಹಜ. ಜಗದೀಶ್ ಶೆಟ್ಟರ್ ಯಾವ ಕಾರಣಕ್ಕೆ ಪಕ್ಷ ಬಿಟ್ಟಿದ್ದಾರೆ ಎಂಬುದು ಗೊತ್ತಿಲ್ಲ ಎಂದರು.

ನಿಗಮ ಮಂಡಳಿ ನೇಮಕಾತಿ ಈ ವಾರದಲ್ಲಿ ಆಗಬಹುದು. ಎಲ್ಲವೂ ಅಂತಿಮವಾಗಿದೆ ಎಂದ ಅವರು, ಲಕ್ಷ್ಮಣ ಸವದಿ ಅವರಿಗೆ ಸಚಿವ ಸ್ಥಾನದ ಆಫರ್ ನೀಡಿರುವದು ನನಗೆ ಗೊತ್ತಿಲ್ಲ ಎಂದರು.

ಉಪಮುಖ್ಯಮಂತ್ರಿ ಸ್ಥಾನದ ಬೇಡಿಕೆಯ ಬಗ್ಗೆ ಲೋಕಸಭಾ ಚುನಾವಣೆ ಮುಗಿದ ಮೇಲೆ ನೋಡುತ್ತೇವೆ. ಈಗ ಅದರ ಚರ್ಚೆ ಇಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next