ಮೈಸೂರು: ನಮ್ಮ ದೇಶದ ಮಕ್ಕಳಿಗೆನೀಡಬೇಕಾದ ಲಸಿಕೆಯನ್ನು ಹೊರ ದೇಶಗಳಿಗೆರಫ್ತು ಮಾಡಿದ್ದು ಏಕೆಂದು ಪ್ರಶ್ನಿಸಿ ನಡೆಯುತ್ತಿರುವ ಅಭಿಯಾನ ಬೆಂಬಲಿಸಿ ಪ್ರಧಾನಿ ಮೋದಿ, ಕೇಂದ್ರಸರ್ಕಾರದ ವಿರುದ್ಧ ಭಿತ್ತಿಪತ್ರ ಹಾಕಿದ್ದವರನ್ನು ಬಂಧಿಸಿರುವುದನ್ನು ಖಂಡಿಸಿ ಪ್ರತಿಭಟನೆ ನಡೆಸಲಾಯಿತು.
ನಗರದ ಕಾಂಗ್ರೆಸ್ ಕಚೇರಿ ಮುಂಭಾಗದಲ್ಲಿಬುಧವಾರ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್‌ನೇತೃತ್ವದಲ್ಲಿ ಬಿಜೆಪಿ ವಿರುದ್ಧ ಕಾಂಗ್ರೆಸ್‌ಮುಖಂಡರು ನನ್ನನ್ನೂ ಬಂಧಿಸಿ ಎಂಬ ಪೋಸ್ಟರ್ ಹಿಡಿದು ಆಕ್ರೋಶ ವ್ಯಕ್ತಪಡಿಸಿದರು.
ಬಳಿಕ ಮಾತನಾಡಿದ ಕಾಂಗ್ರೆಸ್ ವಕ್ತಾರಎಂ.ಲಕ್ಮಣ್, ಪ್ರಧಾನಿ ಮೋದಿ ವಿರುದ್ಧ ಟೀಕಾತ್ಮಕಭಿತ್ತಿಪತ್ರ ಹಾಕುವುದು ಅಪರಾಧವೇ,?ಕೋವಿಡ್ ಲಸಿಕೆಗಳನ್ನು ರಫ್ತು ಮಾಡಿದ ಕ್ರಮದವಿರುದ್ಧ ನಾವು ಕಠಿಣವಾಗಿ ಪ್ರಶ್ನಿಸುತ್ತೇವೆ.ಧೈರ್ಯವಿದ್ದರೆ ನನ್ನನ್ನೂ ಬಂಧಿಸಿ ಎಂದುಸವಾಲು ಹಾಕಿದರು.ನರೇಂದ್ರ ಮೋದಿಯವರು ಬೇರೆ ಇತರ 93ದೇಶಗಳಿಗೆ ಸುಮಾರು 5.6ಕೋಟಿ ಲಸಿಕೆಯನ್ನುರಫ್ತು ಮಾಡಿದ್ದಾರೆ.
ಅದಕ್ಕೆ ರಾಹುಲ್ ಗಾಂಧಿಮೋದಿಜೀ ನಮ್ಮ ಮಕ್ಕಳ ವ್ಯಾಕ್ಸಿನ್ ವಿದೇಶಕ್ಕೆ ಏಕೆಕಳುಹಿಸಿದಿರಿ? ಎಂದು ಟ್ವಿಟ್ ಮಾಡಿದ್ದಾರೆ. ಈಹೇಳಿಕೆಯನ್ನು ದೆಹಲಿಯಲ್ಲಿ ಕೆಲವು ಜನಸಾಮಾನ್ಯರು ಅದನ್ನು ಗೋಡೆಗಳಿಗೆ ಭಿತ್ತಿ ಪತ್ರಮಾಡಿ ಅಂಟಿಸಿದರು. ದೆಹಲಿ ಪೊಲೀಸರುಸುಮಾರು 25 ಜನರ ವಿರುದ್ಧ ಎಫ್ಐಆರ್‌ದಾಖಲು ಮಾಡಿ ಅರೆಸ್ಟ್ ಮಾಡಿದ್ದಾರೆ. ಅದಕ್ಕೆರಾಹುಲ್ ಗಾಂಧಿಯವರು ಪೋಸ್ಟರ್ ಅಡಿನಲ್ಲಿಟ್ವೀಟ್ ಮಾಡಿ ನನ್ನನ್ನೂ ಬಂಧಿಸಿ ಎನ್ನುವಶೀರ್ಷಿಕೆಯನ್ನು ನೀಡಿ ಅಭಿಯಾನ ಆರಂಭಿಸಿದ್ದಾರೆ.
ಕೋಟ್ಯಂತರ ಜನರುಅಭಿಯಾನಕ್ಕೆ ಬೆಂಬಲವನ್ನು ಸೂಚಿಸಿದ್ದಾರೆಎಂದು ಅವರು ತಿಳಿಸಿದರು.ಇಮೇಜ್: ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಕೂಡ ಈ ವಿಚಾರದಲ್ಲಿ ನಮ್ಮನ್ನೂಬಂಧಿಸಿ ಎನ್ನುವ ಶೀರ್ಷಿಕೆ ಅಡಿಯಲ್ಲಿಅಭಿಯಾನ ನಡೆಸಿದರು. ಒಂದು ಟ್ವಿಟ್ ಮೂಲಕಜನಸಾಮಾನ್ಯರಿಗೆ ತಿಳಿಸುವಂತಹ ಕೆಲಸಮಾಡುತ್ತಿದ್ದೇವೆ. ನಾವು ಸರ್ಕಾರದವಿರುದ್ಧವಾಗಲಿ, ವ್ಯಾಕ್ಸಿನೇಶನ್ ವಿರುದ್ಧವಾಗಲಿಮಾತಾಡುತ್ತಿಲ್ಲ, ನಮ್ಮ ದೇಶದ ಜನತೆಗೋಸ್ಕರತಯಾರಾಗಿದ್ದ ವ್ಯಾಕ್ಸಿನೇಶನ್ ಅನ್ನು ನೀವುಹೊರದೇಶಗಳಿಗೆ ನಿಮ್ಮ ಇಮೇಜ್ ಬಿಲ್ಡ್‌ಮಾಡಿಕೊಳ್ಳಲು ಕೊಟ್ಟಿದ್ಯಾಕೆ ಅನ್ನುವಂತದ್ದುನಮ್ಮ ಪ್ರಶ್ನೆ ಎಂದರು.
ಎಚ್ಚರಿಕೆ: ಬಿಜೆಪಿ ವಕ್ತಾರ ಮಹೇಶ್ ನನ್ನನ್ನುವೈಯುಕ್ತಿಕವಾಗಿ ಆಧಾರರಹಿತ ಆರೋಪಮಾಡುತ್ತಿದ್ದಾರೆ. ಮುಂದಿನ ದಿನದಲ್ಲಿ ಎಚ್ಚರಿಕೆಕೊಡುತ್ತೇನೆ. ಆಧಾರ ಇದ್ದರೆ ಮಾತ್ರ ಮಾತಾಡಿ,ಇಲ್ಲದಿದ್ದಲ್ಲಿ ನೀವು ಕಾರ್ಪೋರೇಟರ್‌ಆಗಿರುವಾಗ ಏನೆಲ್ಲ ಅವ್ಯವಹಾರಗಳನ್ನುಮಾಡಿದ್ದೀರೋ ಅದರ ಬಗ್ಗೆ ಹೇಳಬೇಕಾಗತ್ತೆಎಂದು ಹೇಳಿದರು.ಈ ಸಂದರ್ಭ ಕಾಂಗ್ರೆಸ್ ನಗರಾಧ್ಯಕ್ಷ ಆರ್.ಮೂರ್ತಿ, ಚಂದ್ರಶೇಖರ್ ಉಪಸ್ಥಿತರಿದ್ದರು.