Advertisement

ಐ-ಪ್ಯಾಕ್‌ ಜತೆಗೆ ಕೆಸಿಆರ್‌ ಒಪ್ಪಂದ : ಕಾಂಗ್ರೆಸ್‌ ಸೇರ್ಪಡೆ ವದಂತಿ ಬೆನ್ನಲ್ಲೇ ಈ ಬೆಳವಣಿಗೆ

12:57 AM Apr 25, 2022 | Team Udayavani |

ಹೈದರಾಬಾದ್‌/ಹೊಸದಿಲ್ಲಿ: ಚುನಾವಣ ವ್ಯೂಹ ರಚನೆಕಾರ ಪ್ರಶಾಂತ್‌ ಕಿಶೋರ್‌ ನೇತೃತ್ವದ ಚುನಾವಣ ಸಲಹಾ ಸಂಸ್ಥೆಯಾದ ಐಪ್ಯಾಕ್‌ ಜತೆಗೆ ತೆಲಂಗಾಣದ ಆಡಳಿತಾರೂಢ ತೆಲಂಗಾಣ ರಾಷ್ಟ್ರೀಯ ಸಮಿತಿ (ಟಿಆರ್‌ಎಸ್‌) ಪಕ್ಷ ಒಪ್ಪಂದವೊಂದನ್ನು ಮಾಡಿ ಕೊಂಡಿದೆ. ಈ ಹಿನ್ನೆಲೆಯಲ್ಲಿ, ಮುಂದಿನ ವರ್ಷ ನಡೆಯಲಿರುವ ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಐಪ್ಯಾಕ್‌ ಸಂಸ್ಥೆ, ಟಿಆರ್‌ಎಸ್‌ ಪಕ್ಷಕ್ಕೆ ಚುನಾವಣ ತಂತ್ರಗಾರಿಕೆಯನ್ನು ರೂಪಿಸಿಕೊಡಲಿದೆ.

Advertisement

ಎರಡು ದಿನಗಳ ಹಿಂದಷ್ಟೇ ಪ್ರಶಾಂತ್‌ ಕಿಶೋರ್‌ ಅವರು ಕಾಂಗ್ರೆಸ್‌ ಪಕ್ಷಕ್ಕೆ 2024ರ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಕೆಲವಾರು ಸಲಹೆಗಳನ್ನು ನೀಡಿದ್ದರು. ಆದರೆ ಅದರ ಬೆನ್ನಲ್ಲೇ ಅವರು ಶನಿವಾರದಂದು ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರ ಶೇಖರ್‌ ರಾವ್‌ ಅವರ ನಿವಾಸದಲ್ಲಿ ಪ್ರತ್ಯಕ್ಷವಾಗಿದ್ದು ಎಲ್ಲರಲ್ಲೂ ಅಚ್ಚರಿಯನ್ನುಂಟು ಮಾಡಿತ್ತು.

ಶನಿವಾರ ಬೆಳಗ್ಗೆ ಹೈದರಾಬಾದ್‌ನ ಕೆಸಿಆರ್‌ ನಿವಾಸವಾದ “ಪ್ರಗತಿ ಭವನ’ ತಲುಪಿದ್ದ ಕಿಶೋರ್‌, ತಡರಾತ್ರಿಯವರೆಗೂ ಅಲ್ಲೇ ಇದ್ದು ಚರ್ಚೆ ನಡೆಸಿದರು. ಅನಂತರ, ರವಿವಾರವೂ ಅವರಿಬ್ಬರ ನಡುವೆ ಮಾತುಕತೆ ಮುಂದುವರಿದಿದ್ದು ತೀವ್ರ ಕುತೂಹಲಕ್ಕೆ ಕಾರಣವಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next