Advertisement

I.N.D.I.A; ನಿತೀಶ್‌ರನ್ನು ನಂಬದಂತೆ ಸಲಹೆ ನೀಡಿದ್ದ ಡಿಎಂಕೆ

12:30 AM Jan 30, 2024 | Team Udayavani |

ಹೊಸದಿಲ್ಲಿ: ಇಂಡಿಯಾ ಒಕ್ಕೂಟದಿಂದ ಬಿಹಾರ ಸಿಎಂ ನಿತೀಶ್‌ ಕುಮಾರ್‌ ಹೊರ ನಡೆಯುವ ಬಗ್ಗೆ ಡಿಸೆಂಬರ್‌ನಲ್ಲೇ ಡಿಎಂಕೆ, ಆರ್‌ಜೆಡಿ, ಟಿಎಂಸಿ ಕಾಂಗ್ರೆಸ್‌ಗೆ ಎಚ್ಚರಿಕೆ ನೀಡಿದ್ದವು. ಆ ಮೂರು ಪಕ್ಷಗಳ ನಾಯಕರು ಜೆಡಿಯು ನಾಯಕ ಮೇಲೆ ಸಂಪೂರ್ಣವಾಗಿ ವಿಶ್ವಾಸ ಇಟ್ಟಿರಲಿಲ್ಲ ಎಂದು ಮೂಲಗಳು ತಿಳಿಸಿವೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

Advertisement

ಡಿಸೆಂಬರ್‌ನಲ್ಲಿ ಮುಂಬಯಿಯಲ್ಲಿ ನಡೆದ ಇಂಡಿಯಾ ಒಕ್ಕೂಟದ ಸಭೆಯ ವೇಳೆಯೇ ನಿತೀಶ್‌ ಕುಮಾರ್‌ ಅವರ ನಡೆ ಮೇಲೆ ಅನುಮಾನ ಆರಂಭ ವಾಗಿತ್ತು. ಆ ಸಭೆಯಲ್ಲೇ ಹಿಂದಿ ಭಾಷೆಯ ವಿಚಾರಕ್ಕೆ ನಿತೀಶ್‌, ಡಿಎಂಕೆಯ ಟಿ.ಆರ್‌. ಬಾಲು ನಡುವೆ ವಾಗ್ಧಾವೂ ಉಂಟಾಗಿತ್ತು. ಆದರೆ ಹಿಂದಿ ಹಾರ್ಟ್‌ಲ್ಯಾಂಡ್‌ನ‌ಲ್ಲಿ ಮೋದಿಗೆ ಪ್ರಬಲ ಪೈಪೋಟಿ ನೀಡಬಲ್ಲ ವ್ಯಕ್ತಿ ವಿರುದ್ಧ ಯಾರು ಚಕಾರ ಎತ್ತಲಿಲ್ಲ. ಆದರೆ ಸಮಯ ಕಳೆದಂತೆ, ಜೆಡಿಯು ಒಕ್ಕೂಟ ತೊರೆಯುವ ಕುರುಹುಗಳ ಕುರಿತು ಕಾಂಗ್ರೆಸ್‌ಗೆ ಡಿಎಂಕೆ, ಟಿಎಂಸಿ ಮತ್ತು ಆರ್‌ಜೆಡಿ ಎಚ್ಚರಿಸಿದ್ದವು’ ಎಂದು ಮೈತ್ರಿಕೂಟದ ನಾಯಕರೊಬ್ಬರು ತಿಳಿಸಿದ್ದಾರೆ. “ಲಾಲು ಕುಟುಂಬದ ಮೇಲೆ ತನಿಖಾ ಸಂಸ್ಥೆಗಳಿಂದ ದಾಳಿಗಳು ಹೆಚ್ಚಾದವು. ನಿತೀಶ್‌ ಸಿಎಂ ಆಗಿರುವ ಸಂದರ್ಭದಲ್ಲಿ ಈ ರೀತಿ ಆಗಲು ಹೇಗೆ ಸಾಧ್ಯ? ನಿತೀಶ್‌ ಬೆಂಬಲವೂ ಇರಬಹು ದೆಂಬ ಮಾತೂ ಕೇಳಿಬಂದಿತ್ತು.

ಲೋಕ ಚುನಾವಣೆಯಲ್ಲಿ ಕಮಲ ಗೆಲುವು:ಕಿಶೋರ್‌
ಹೊಸದಿಲ್ಲಿ: ಮುಂದಿನ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಅತ್ಯಧಿಕ ಸ್ಥಾನಗಳಿಂದ ಜಯಗಳಿಸಲಿದ್ದು, ಕ್ಲೀನ್‌ ಸ್ವೀಪ್‌ ಮಾಡಲಿದೆ. ಹೀಗೆಂದು ಚುನಾವಣ ವ್ಯೂಹ ರಚನೆಕಾರ ಪ್ರಶಾಂತ್‌ ಕಿಶೋರ್‌ ಭವಿಷ್ಯ ನುಡಿದಿದ್ದಾರೆ. ಈಗ ಇರುವ ಸ್ಥಾನ ಗಳನ್ನು ಎನ್‌ಡಿಎ ಮೈತ್ರಿಕೂಟ ಉಳಿಸಲಿದೆ. ಹೆಚ್ಚಿನ ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಗಳಿವೆ ಎಂದು ಹೇಳಿದ್ದಾರೆ. ಸದ್ಯ ಬಿಜೆಪಿಗೆ 290, ಮೈತ್ರಿಪಕ್ಷಗಳು ಗೆದ್ದ ಸ್ಥಾನಗಳು ಸೇರಿ ಒಟ್ಟು 312 ಸಂಸದರ ಬೆಂಬಲವನ್ನು ಹೊಂದಿದೆ.

 

Advertisement

Udayavani is now on Telegram. Click here to join our channel and stay updated with the latest news.

Next