Advertisement

I.N.D.I.A.;14 ಸದಸ್ಯರ ಸಮನ್ವಯ ಸಮಿತಿ: 3 ಮಹತ್ವದ ನಿರ್ಣಯಗಳ ಅಂಗೀಕಾರ

04:17 PM Sep 01, 2023 | Team Udayavani |

ಮುಂಬಯಿ : ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರಕಾರದ ವಿರುದ್ಧ ಭಾರಿ ರಣತಂತ್ರ ಹಣಿಯಲು ಸಜ್ಜಾಗಿರುವ ವಿಪಕ್ಷಗಳ ಮೈತ್ರಿಕೂಟ ಇಂಡಿಯಾ ಗುರುವಾರ ಮತ್ತು ಶುಕ್ರವಾರ ನಡೆದ ಮಹತ್ವದ ಸಭೆಯಲ್ಲಿ 14 ಸದಸ್ಯರ ಸಮನ್ವಯ ಸಮಿತಿ ರಚಿಸಿದ್ದು, ಮೂರು ಮಹತ್ವದ ನಿರ್ಣಯಗಳನ್ನು ಅಂಗೀಕಾರ ಮಾಡಲಾಗಿದೆ.

Advertisement

ಶಿವಸೇನೆ (ಯುಬಿಟಿ) ನಾಯಕ ಆದಿತ್ಯ ಠಾಕ್ರೆ ಮಾತನಾಡಿ “ಇಂದು, ಇಂಡಿಯಾ ಮೈತ್ರಿಕೂಟದ ಪಕ್ಷಗಳು ಮೂರು ನಿರ್ಣಯಗಳನ್ನು ಅಂಗೀಕರಿಸಿವೆ. 1.ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಸಾಧ್ಯವಾದಷ್ಟು ಒಟ್ಟಿಗೆ ಸ್ಪರ್ಧಿಸಲು ನಾವು ನಿರ್ಧರಿಸಿದ್ದೇವೆ. ವಿವಿಧ ರಾಜ್ಯಗಳಲ್ಲಿ ಸೀಟು ಹಂಚಿಕೆಯನ್ನು ಪ್ರಾರಂಭಿಸಲಾಗುವುದು. ಕೊಡು,ಕೊಳ್ಳುವಿಕೆ ಎಂಬ ಸಹಕಾರಿ ಮನೋಭಾವದಲ್ಲಿ ತತ್ ಕ್ಷಣವೇ ಮತ್ತು ಬೇಗನೆ ತೀರ್ಮಾನಿಸಿದ್ದೇವೆ. 2. ಸಾರ್ವಜನಿಕ ಕಾಳಜಿ ಮತ್ತು ಪ್ರಾಮುಖ್ಯತೆಯ ವಿಷಯಗಳ ಮೇಲೆ ದೇಶದ ವಿವಿಧ ಭಾಗಗಳಲ್ಲಿ ಶೀಘ್ರವಾಗಿ ಸಾರ್ವಜನಿಕ ರ‍್ಯಾಲಿಗಳನ್ನು ಆಯೋಜಿಸಲು  ಪಕ್ಷಗಳು ಈ ಮೂಲಕ ನಿರ್ಧರಿಸುತ್ತೇವೆ. 3. ವಿವಿಧ ಭಾಷೆಗಳಲ್ಲಿ ‘ಜುಡೇಗಾ ಭಾರತ್, ಜೀತೇಗಾ ಭಾರತ್ ‘ ಎಂಬ ವಿಷಯದ ಕುರಿತು ನಮ್ಮ ಸಂಬಂಧಿತ ಸಂವಹನಗಳು ಮತ್ತು ಮಾಧ್ಯಮ ಕಾರ್ಯತಂತ್ರಗಳು ಮತ್ತು ಅಭಿಯಾನಗಳನ್ನು ಸಂಯೋಜಿಸಲು ನಿರ್ಧರಿಸುತ್ತೇವೆ” ಎಂದು ಹೇಳಿದ್ದಾರೆ.

14 ಸದಸ್ಯರ ಸಮನ್ವಯ ಸಮಿತಿ ರಚನೆ

ಶಿವಸೇನಾ (ಯುಬಿಟಿ) ಸಂಸದ ಸಂಜಯ್ ರಾವುತ್ ಅವರು 14 ಸದಸ್ಯರ ಸಮನ್ವಯ ಸಮಿತಿಯ ಸದಸ್ಯರ ಹೆಸರನ್ನು ಪ್ರಕಟಿಸಿದರು. ಕೆಸಿ ವೇಣುಗೋಪಾಲ್ (ಕಾಂಗ್ರೆಸ್), ಶರದ್ ಪವಾರ್ (ಎನ್‌ಸಿಪಿ), ಟಿಆರ್ ಬಾಲು (ಡಿಎಂಕೆ), ಹೇಮಂತ್ ಸೊರೆನ್ (ಜೆಎಂಎಂ), ಸಂಜಯ್ ರಾವುತ್ (ಶಿವಸೇನಾ-ಯುಬಿಟಿ) , ತೇಜಸ್ವಿ ಯಾದವ್ (ಆರ್‌ಜೆಡಿ), ಅಭಿಷೇಕ್ ಬ್ಯಾನರ್ಜಿ (ಟಿಎಂಸಿ), ರಾಘವ್ ಚಡ್ಡಾ (ಎಎಪಿ), ಜಾವೇದ್ ಅಲಿ ಖಾನ್ (ಎಸ್‌ಪಿ), ಲಲನ್ ಸಿಂಗ್ (ಜೆಡಿಯು), ಡಿ ರಾಜಾ (ಸಿಪಿಐ), ಒಮರ್ ಅಬ್ದುಲ್ಲಾ (ಎನ್‌ಸಿ), ಮೆಹಬೂಬಾ ಮುಫ್ತಿ (ಪಿಡಿಪಿ) ಮತ್ತು ಸಿಪಿಐ(ಎಂ)ನಿಂದ ಮತ್ತೊಬ್ಬ ಸದಸ್ಯರನ್ನು ಘೋಷಿಸಲಾಗುತ್ತದೆ.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, “ಎಲ್ಲ ಪಕ್ಷಗಳು ಈ ಸಭೆಯನ್ನು ಉತ್ತಮವಾಗಿ ನಡೆಸಿವೆ. ಈ ಹಿಂದೆ ನನ್ನ ನಿವಾಸದಲ್ಲಿ ಮಾತುಕತೆಯ ಸಮಯದಲ್ಲಿ ಮೈತ್ರಿ ಕೂಟವನ್ನು ರಚಿಸಲಾಯಿತು, ಪಾಟ್ನಾ ಸಭೆಯಲ್ಲಿ ಅಜೆಂಡಾವನ್ನು ನಿಗದಿಪಡಿಸಲಾಯಿತು ಮತ್ತು ಈಗ ಮುಂಬೈನಲ್ಲಿ, ಪ್ರತಿಯೊಬ್ಬರೂ ತಮ್ಮ ಅಭಿಪ್ರಾಯಗಳನ್ನು ಪರಸ್ಪರರ ಮುಂದೆ ಹಂಚಿಕೊಂಡಿದ್ದಾರೆ ಎಂದರು.

Advertisement

”ಪ್ರತಿಯೊಬ್ಬರಿಗೂ ಒಂದೇ ಗುರಿ ಇದ್ದು, ದೇಶದಲ್ಲಿ ನಿರುದ್ಯೋಗ, ಏರುತ್ತಿರುವ ಇಂಧನ ಬೆಲೆಗಳು ಮತ್ತು ಎಲ್‌ಪಿಜಿ ಸಿಲಿಂಡರ್ ಬೆಲೆಗಳ ವಿರುದ್ಧ ಹೋರಾಡಲು ಬಿಜೆಪಿ ಮೊದಲು ಬೆಲೆಗಳನ್ನು ಹೆಚ್ಚಿಸಿದರು ಬಳಿಕ ಬೆಲೆಯನ್ನು ಸ್ವಲ್ಪ ಕಡಿಮೆ ಮಾಡಿದರು. ಮೋದಿ ಎಂದಿಗೂ ಬಡವರಿಗಾಗಿ ಕೆಲಸ ಮಾಡುವುದಿಲ್ಲ ಎಂದು ನಾನು ಹೇಳಬಲ್ಲೆ, ನಿನ್ನೆರಾಹುಲ್ ಗಾಂಧಿ ಅವರು ಅದಾನಿ ಆದಾಯ ಹೆಚ್ಚಾಗಿರುವ ಕುರಿತು ವರದಿಯನ್ನು ತೋರಿಸಿದರು” ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next