Advertisement
ಎಡಿಶನ್ ರೂಪದಲ್ಲಿ ಬರುತ್ತಿದ್ದ ಸ್ಥಳೀಯ ವಾರ್ತೆಗಳು, ವಾರ ಕ್ಕೊಂದು ಬಾರಿ ಮಕ್ಕಳಿಗಾಗಿ ಪ್ರಕಟವಾಗುತ್ತಿದ್ದ ಪುಟಾಣಿ ಪುರವಣಿ ಯು ಚಿಣ್ಣರಾದ ನಮಗೆ ಓದಲು ಖುಷಿಯಾಗುತ್ತಿತ್ತು. ಪ್ರತಿದಿನ ಉದಯವಾಣಿಯನ್ನು ಅಪ್ಪ ವರಾಂಡದಲ್ಲಿ ಕೂತು ಓದುತ್ತಿದ್ದರು. ಅವರ ಬಳಿಕ ಓದುವ ಸರದಿ ನಮ್ಮದಾಗಿತ್ತು. ಪ್ರೌಢ ಶಾಲೆಯಲ್ಲಿದ್ದಾಗ ರಾಜ್ಯಮಟ್ಟದ ವಿಜ್ಞಾನ ವಸ್ತುಪ್ರದರ್ಶನದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ್ದ ನಮ್ಮ ಶಾಲೆಯ ತಂಡದಲ್ಲಿ ನಾನೂ ಇದ್ದೆ. ಅದರ ಸುದ್ದಿ ಉದಯವಾಣಿಯಲ್ಲಿ ಪ್ರಕಟವಾಗಿದ್ದನ್ನು ನೋಡಿ ಖುಷಿಪಟ್ಟಿದ್ದೆ.
ಉದಯವಾಣಿ ತನ್ನ ಪುರವಣಿಗೆಗಳಲ್ಲಿ ಪ್ರಾರಂಭಿಸುವ ಹೊಸ ಅಂಕಣಗಳು, ಬರೆಯುವ ಉತ್ಸಾಹಿಗಳಿಗೆ ಮತ್ತಷ್ಟು ಪ್ರೋತ್ಸಾಹ ನೀಡುತ್ತಿದೆ. ಇದರಿಂದ ತಮ್ಮಲ್ಲಿ ಹುದುಗಿದ್ದ, ಮರೆತು ಹೋದ ಅವೆಷ್ಟೋ ಮಾತುಗಳು ಹೊರಬರುತ್ತಿವೆ. ಇನ್ನು ಪತ್ರಿಕೆಯ ವಿನ್ಯಾಸ, ಲೇಖನಗಳಿಗೆ ತಕ್ಕುದಾದ ಪುಟಗಳು ಓದುಗರನ್ನು ತನ್ನತ್ತ ಸೆಳೆಯುವಲ್ಲಿ ಸಫಲವಾಗಿದೆ. ಚಾಚೂ ತಪ್ಪದೆ ಉದಯವಾಣಿಯನ್ನು ಪ್ರತಿದಿನ ಓದುತ್ತೇನೆ. ವಾಣಿಯನ್ನು ಹೊತ್ತು ಬರುವ ಉದಯವಾಣಿ ಎಲ್ಲೆಡೆ ಯೂ ಉದಯವಾಗಲಿ, ಹೆಚ್ಚಿನ ಸಂಖ್ಯೆಯಲ್ಲಿ ಓದುಗರನ್ನು ತಲುಪಲಿ. ಉದಯವಾಣಿಯ ಬಳಗಕ್ಕೆ ನಮಸ್ಕಾರಗಳು.
Related Articles
Advertisement