ವ್ಯಾಟ್ಯಾಪ್; ನೆನಪಿನ ತೊಟ್ಟಿಲು
ಗ್ರೂಪ್ ಅಡ್ಮಿನ್‌ಗಳು; ನಾಗರೆಡ್ಡಿ, ಈರಣ್ಣ
ನಮ್ಮ ವ್ಯಾಟ್ಸಾಪ್ ಗ್ರೂಪ್ ಹೆಸರು ನೆನಪಿನ ತೊಟ್ಟಿಲು ಅಂತ. ಪ್ರಾರಂಭದಲ್ಲಿ ಪತ್ರಿಕೋದ್ಯಮ ಮಿತ್ರರು ಎಂದು ಇತ್ತು. ಆ ನಂತರ ಇದನ್ನು “ನೆನಪಿನ ತೊಟ್ಟಿಲು’ ಎಂದು ಮರು ನಾಮಕರಣ ಮಾಡಲಾಯಿತು. ಏನೇ ಮಾಡಿದ್ರೂ ಡಿಗ್ರಿ ಜೀವನ ಮರಳಿ ಬರುವುದಿಲ್ಲವಲ್ಲ? ಅದರ ನೆನಪಾದರೂ ಇರಲಿ ಅಂತ ಒಂದು ಗ್ರೂಪ್ ಮಾಡಿದೆವು. ಹಾಗಾಗಿ, ಪ್ರತಿದಿನ ನಮ್ಮ ಗುಂಪಿನಲ್ಲಿ ಹಳೆಯ ವಿಷಯಗಳ ಬಗ್ಗೆಯೇ ಚರ್ಚೆ ನಡೆಯುತ್ತಿರುತ್ತದೆ. ಹೀಗೊಂದು ದಿನ ಹರಟೆ ತುಂಬಾ ಜೋರಾಗಿ ನಡೆಯುತ್ತಿರುವಾಗಲೇ, ಸ್ನೇಹಿತನೊಬ್ಬ ಇದೇ ಗ್ರೂಪ್‌ನಲ್ಲಿ ಇರುವ ಹುಡುಗಿಯ ವ್ಯಾಟ್ಸಾಪ್ ಡಿಪಿ ಫೋಟೋವನ್ನು ಗ್ರೂಪ್‌ಗೆ ಹಾಕಿದ. ಆಮೇಲೆ “ಈ ಫೋಟೋ ಸೂಪರ್. ಐ ಲೈಕ್ ಯು’ ಎಂದು ಮೆಸೇಜ್ ಮಾಡಿದ. ಅದಕ್ಕೆ ಆ ಹುಡುಗಿ ಥ್ಯಾಂಕ್ಯೂ ಅಂತ ರಿಪ್ಲೇ ಮಾಡಿದಳು. ಆಗ ಅವನ ಖುಷಿಗೆ ಪಾರವೇ ಇರಲಿಲ್ಲ…
ಪರಿಣಾಮ, ಸೀದಾ ಆ ಹುಡುಗಿಯ ಮೊಬೈಲ್‌ಗೆ ಕಾಲ್ ಮಾಡಿ¨ªಾನೆ. ಹುಡುಗಿ ರಿಸೀವ್ ಮಾಡಿಲ್ಲ. ಇಡೀ ದಿನ ಅವಳಿಗೆ ಕಾಲ್ ಮಾಡುತ್ತಲೇ ಇ¨ªಾನೆ.
ಇತ್ತ ಕಡೆ. ಆ ಹುಡುಗಿಯಿಂದ ನನಗೆ ಕಂಪ್ಲೆಂಟ್ ಬಂತು. ಕೂಡಲೆ “ಲೇಯ್, ಆ ಹುಡುಗಿ ಥ್ಯಾಂಕ್ಸ್ ಹೇಳಿದ ತಕ್ಷಣ ನೀನು ಕಾಲ್ ಮಾಡಿದರೆ ಅವಳಿಗೆ ಭಯ ಆಗುತ್ತಂತೆ’ ಅಂತ ಅವನಿಗೆ ಹೇಳಿದೆ. ಅವನು, ” ಇಲ್ಲ ಕಣೋ, ನಾನು ಸಾರಿ ಕೇಳ್ಳೋಣ ಅಂತ ಕರೆ ಮಾಡಿದ್ದು’ ಅಂದ. ಅಲ್ಲಯ್ನಾ, ಸಾರಿ ಕೇಳ್ಳೋಕೆ ಇಡೀ ದಿನ ಕಾಲ್ ಮಾಡಬೇಕೇನಪ್ಪಾ? ಅಂತ ಸರಿಯಾಗಿ ಕ್ಲಾಸ್ ತಗೊಂಡೆ. ರಾತ್ರಿ ಇಡೀ ಅದರದ್ದೇ ಚರ್ಚೆ. ಕೊನೆಗೆ ಅವನನ್ನು ಗ್ರೂಪ್ ನಿಂದ ಹೊರ ತಳ್ಳಿದೆ. ಆದ್ರೆ ಅವನ ಕಾಟ ತಪ್ಪಲಿಲ್ಲ. ಮೇಲಿಂದ ಮೇಲೆ ಅವನ ಕಡೆಯಿಂದ ಕರೆಗಳು ಬರಲು ಶುರುವಾದವು. ಅದಕ್ಕೆ ತಲೆ ಕೊಡದೆ ಸುಮ್ಮನೆ ಮಲಗಿದೆ. ಬೆಳಗ್ಗೆ ಎದ್ದು ನೋಡಿದರೆ, ಬರೋಬ್ಬರಿ 25 ಮಿಸ್ಡ್ ಕಾಲ್ ಮಾಡಿದ್ದಾನೆ.
ಮತ್ತೆ ಕಾಲ್ ಮಾಡಿ ಸಮಾಧಾನ ಹೇಳಿ “ಒಂದೆರಡು ದಿನ ಸುಮ್ಕಿರು. ಆಮೇಲೆ ನಾನೇ ಗ್ರೂಪ್‌ಗೆ ಆಡ್ ಮಾಡ್ತೀನಿ’ ಅಂದೆ. ಅದಕ್ಕವನು ಸುಮ್ಮನಾದ. ಸುಮಾರು ಮೂರು ವಾರಗಳ ನಂತರ ಮತ್ತೆ ಅವನನ್ನು ಗ್ರೂಪ್‌ಗೆ ಸೇರಿಸಿದೆ. ಮತ್ತೆ ಅವನು ಲೈಕಾಸುರನಂತೆ ವರ್ತನೆ ಮಾಡಲಿಲ್ಲ. ಹಾಗಾಗಿ, ಗ್ರೂಪಲ್ಲಿ ಶಾಂತಿ, ನೆಮ್ಮದಿ ನೆಲೆಸಿದೆ.
ಮೈಲಾರಿ ಸಿಂಧುವಾಳ