Advertisement

ಭಾರತದ ವಿರುದ್ಧ ಆಡುವುದನ್ನು ದ್ವೇಷಿಸುತ್ತೇನೆ: ಆಸೀಸ್ ವನಿತಾ ವೇಗಿ ಮೆಗಾನ್

09:43 AM Mar 07, 2020 | keerthan |

ಸಿಡ್ನಿ: ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಮಹಿಳಾ ಟಿ 20 ವಿಶ್ವಕಪ್ ನ ಫೈನಲ್ ಪಂದ್ಯಕ್ಕೆ ಸಜ್ಜಾಗಿದೆ. ಈ ನಡುವೆ ಆಸೀಸ್ ವೇಗಿಯೋರ್ವರು ತಾನು ಭಾರತದ ವಿರುದ್ಧ ಆಡುವುದನ್ನು ದ್ವೇಷಿಸುತ್ತೇನೆ ಎಂದಿದ್ದಾರೆ.

Advertisement

ಆಸೀಸ್ ವೇಗಿ ಮೆಗಾನ್ ಶೆಟ್ ಈ ರೀತಿ ಹೇಳಿಕೆ ನೀಡಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧ ಸೆಮಿ ಫೈನಲ್ ಪಂದ್ಯದಲ್ಲಿ ಎರಡು ವಿಕೆಟ್ ಕಿತ್ತು ಮೆಗಾನ್ ತಂಡದ ಗೆಲುವಿಗೆ ಕಾರಣವಾಗಿದ್ದರು.

ಐಸಿಸಿ ವೆಬ್ ಸೈಟ್ ಜೊತೆಗೆ ಮಾತನಾಡಿದ ಅವರು, ನಾನು ಭಾರತದ ವಿರುದ್ಧ ಆಡುವುದನ್ನು ಇಷ್ಟಪಡುವುದಿಲ್ಲ. ಯಾಕೆಂದರೆ ಆರಂಭಿಕರಾದ ಸ್ಮೃತಿ ಮಂಧನಾ ಮತ್ತು ಶಫಾಲಿ ವರ್ಮಾ ಪವರ್ ಪ್ಲೇಯಲ್ಲಿ ಸರಿಯಾಗಿ ದಂಡಿಸುತ್ತಾರೆ. ನನ್ನ ಎಸೆತಕ್ಕೆ ಯಾರೂ ಬಾರಿಸದೇ ಇರುವಷ್ಷು ದೊಡ್ಡ ಸಿಕ್ಸರ್ ಅನ್ನು  ತ್ರಿಕೋನ ಸರಣಿಯಲ್ಲಿ ಶಫಾಲಿ ಬಾರಿಸಿದ್ದರು ಎಂದು ಮೆಗಾನ್ ಶೆಟ್ ಹೇಳಿದ್ದಾರೆ.

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಫೈನಲ್ ಪಂದ್ಯ ರವಿವಾರ ಮೆಲ್ಬೋರ್ನ್ ಅಂಗಳದಲ್ಲಿ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next