Advertisement
ಆ್ಯಂಡ್ರೂé ಟೈ ಶುಕ್ರವಾರ ರಾತ್ರಿ ಮೊದಲ ಐಪಿಎಲ್ ಪಂದ್ಯವಾಡಿದರೂ ಅವರು ಐಪಿಎಲ್‌ನ ಹೊಸ ಮುಖವೇನಲ್ಲ. ಟೈ 2015ರ ಐಪಿಎಲ್ ಹರಾಜಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪಾಲಾಗಿದ್ದರು. ಕಳೆದ ವರ್ಷ ಗುಜರಾತ್ ಲಯನ್ಸ್ ತೆಕ್ಕೆಗೆ ಬಿದ್ದರು. ಆದರೆ ಈ ಎರಡೂ ವರ್ಷಗಳಲ್ಲಿ ಅವರಿಗೆ ಒಂದೇ ಒಂದು ಪಂದ್ಯವಾಡುವ ಅವಕಾಶವನ್ನು ಈ ಎರಡೂ ಫ್ರಾಂಚೈಸಿಗಳು ಕಲ್ಪಿಸಿರಲಿಲ್ಲ! ಇದೀಗ ಟೈ ಸಾಮರ್ಥ್ಯವೇನೆಂಬುದು ಪುಣೆ ವಿರುದ್ಧದ ಪಂದ್ಯದಲ್ಲಿ ಎಲ್ಲರ ಅರಿವಿಗೆ ಬಂದಿದೆ.
ಪುಣೆ ವಿರುದ್ಧ ಪವರ್ ಪ್ಲೇ ಅವಧಿಯ ಕೊನೆಯ ಓವರ್ ಎಸೆಯಲು ಬಂದ ಟೈ, ಕೇವಲ 4 ರನ್ ನೀಡಿ ಬೇರೂರಿ ನಿಂತಿದ್ದ ರಾಹುಲ್ ತ್ರಿಪಾಠಿ ವಿಕೆಟ್ ಹಾರಿಸಿದರು. ಬಳಿಕ ಚೆಂಡು ಕೈಗೆ ಸಿಕ್ಕಿದ್ದು 13ನೇ ಓವರಿನಲ್ಲಿ. ಆಗ ಬೆನ್ ಸ್ಟೋಕ್ಸ್ ವಿಕೆಟ್ ಸಿಕ್ಕಿತು. ಅನಂತರ 18ನೇ ಹಾಗೂ 20ನೇ ಓವರಿನಲ್ಲಿ ಬೌಲಿಂಗ್ ಮುಂದುವರಿಸಿದರು. ಪಂದ್ಯದ ಅಂತಿಮ ಓವರಿನ ಮೊದಲ 3 ಎಸೆತಗಳಲ್ಲಿ ಅಂಕಿತ್ ಶರ್ಮ, ಮನೋಜ್ ತಿವಾರಿ ಹಾಗೂ ಶಾದೂìಲ್ ಠಾಕೂರ್ ವಿಕೆಟ್ ಕಿತ್ತು ಹ್ಯಾಟ್ರಿಕ್ ಪೂರ್ತಿಗೊಳಿಸಿದರು.
Related Articles
Advertisement
“ನಾನು ಬಿಗ್ ಬಾಶ್‌ನಲ್ಲೂ ಹ್ಯಾಟ್ರಿಕ್ ಸಂಪಾದಿಸಿದ್ದೆ. ಆದರೆ ಇಲ್ಲಿ ನನಗೆ ಹ್ಯಾಟ್ರಿಕ್ ಒಲಿಯುತ್ತದೆಂಬ ದೃಢವಾದ ನಂಬಿಕೆ ಇತ್ತು. ರನ್‌ಅಪ್‌ನತ್ತ ತೆರಳುವಾಗ ನಾನು ಯಾವ ರೀತಿಯ ಎಸೆತವಿಕ್ಕಲಿ ಎಂದು ಆಲೋಚಿಸುವುದುಂಟು. ಇಲ್ಲಿ ನಿಧಾನ ಗತಿಯ ಎಸೆತದ ಯೋಜನೆ ಹಾಕಿಕೊಂಡೆ. ಇದು ನೇರವಾಗಿ ಸ್ಟಂಪ್ ಮೇಲೆರಗಿತು…’ ಎಂದು ಹ್ಯಾಟ್ರಿಕ್ ಸಾಧನೆಯ “ರಹಸ್ಯ’ವನ್ನು ಬಿಚ್ಚಿಟ್ಟರು.
“ನನ್ನ ಐಪಿಎಲ್ ಪಾದಾರ್ಪಣೆ ಬಗ್ಗೆ ಬೆಳಗ್ಗೆಯೇ ಕೋಚ್ ಬ್ರಾಡ್ ಹಾಜ್ ತಿಳಿಸಿದರು. ಮೊದಲ ಓವರಿನಲ್ಲೇ ವಿಕೆಟ್ ಕಿತ್ತೆ. ನನ್ನ ಸುದೀರ್ಘ ಕಾಯುವಿಕೆಗೆ ಫಲ ಸಿಕ್ಕಿದೆ ಎಂದು ಭಾವಿಸಿದ್ದೇನೆ’ ಎಂದರು ಆ್ಯಂಡ್ರೂé ಟೈ.