Advertisement

ನವ್ಲಾಖಾ ಗೃಹ ಬಂಧನ ಅಂತ್ಯ

06:00 AM Oct 02, 2018 | Team Udayavani |

ನವದೆಹಲಿ: ಪುಣೆ ಪೊಲೀಸರಿಂದ ಬಂಧಿತರಾಗಿದ್ದ ಹೋರಾಟಗಾರ ಗೌತಮ್‌ ನವ್ಲಾಖಾರ ಗೃಹ ಬಂಧನವನ್ನು ದೆಹಲಿ ಹೈಕೋರ್ಟ್‌ ರದ್ದುಗೊಳಿಸಿದೆ.  ಈ ಸಂದರ್ಭದಲ್ಲಿ ಬಂಧನ ಕ್ರಮ ಅಸಮರ್ಥನೀಯ ಎಂದು ಆಕ್ಷೇಪವನ್ನೂ ಮಾಡಿದೆ. ಜತೆಗೆ ಪುಣೆಯ ಸ್ಥಳೀಯ ಕೋರ್ಟ್‌ ನೀಡಿದ್ದ ಟ್ರಾನ್ಸಿಟ್‌ ರಿಮಾಂಡ್‌ ಆದೇಶವನ್ನೂ ರದ್ದು ಮಾಡಿ ಹೈಕೋರ್ಟ್‌ ಆದೇಶ ಹೊರಡಿಸಿದೆ. ಪ್ರಧಾನಿ ನರೇಂದ್ರ ಮೋದಿ ಹತ್ಯೆಗೆ ಸಂಚು ಮತ್ತು ಭೀಮಾ ಕೋರೆಗಾಂವ್‌ ಹಿಂಸಾಚಾರ ಪ್ರಕರಣ ಸಂಬಂಧ ಐವರು ಹೋರಾಟಗಾರರನ್ನು ಬಂಧಿಸಲಾಗಿತ್ತು.

Advertisement

ಕೇಸು ಹಿಂದಕ್ಕೆ: ಮತ್ತೂಂದು ಬೆಳವಣಿಗೆಯಲ್ಲಿ ಬಲಪಂಥೀಯ ಹೋರಾಟಗಾರ ಸಂಭಾಜಿ ಭಿಡೆ ವಿರುದ್ಧ ಮಹಾರಾಷ್ಟ್ರ ಪೊಲೀಸರು ದಾಖಲಿಸಿದ್ದ ದೂರನ್ನು ಹಿಂಪಡೆಯಲಾಗಿದೆ. ಭೀಮಾ ಕೊರೆಗಾಂವ್‌ ಹಿಂಸಾಚಾರ ನಡೆಯುವುದಕ್ಕೆ 6 ತಿಂಗಳ ಮುನ್ನ ಈ ಕ್ರಮ ಕೈಗೊಳ್ಳಲಾಗಿದೆ. 2008 ಮತ್ತು 2009ರಲ್ಲಿ ನಡೆದ ಪ್ರತಿಭಟನೆ, ಹಿಂಸಾಚಾರ ಸಂಬಂಧ ಅವರ ವಿರುದ್ಧ ಕೇಸು ದಾಖಲಿಸಲಾಗಿತ್ತು. 
 

Advertisement

Udayavani is now on Telegram. Click here to join our channel and stay updated with the latest news.

Next