Advertisement

ನಾನು ಹೈಕಮಾಂಡ್‌ನ‌ ಡಾರ್ಕ್‌ ಹಾರ್ಸ್‌: ಪರಂ

11:09 AM Mar 03, 2017 | Team Udayavani |

ಬೆಂಗಳೂರು:ನಾನು ಡಾರ್ಕ್‌ ಹಾರ್ಸ್‌, ಕೆಪಿಸಿಸಿ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಸುವುದು ಬಿಡುವುದು ಹೈಕಮಾಂಡ್‌ಗೆ ಬಿಟ್ಟ ವಿಚಾರ ಎಂದು ಡಾ.ಜಿ.ಪರಮೇಶ್ವರ್‌ ತಿಳಿಸಿದ್ದಾರೆ.

Advertisement

ಸುದ್ದಿಗಾರರ ಜತೆ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷನಾಗಿ ಮುಂದುವರೆಯಲು ಹೈಕಮಾಂಡ್‌ ಸೂಚನೆ ನೀಡಿದರೆ ಮುಂದುವರೆಯುತ್ತೇನೆ. ಬೇರೆಯವರಿಗೆ ಅವಕಾಶ ಕಲ್ಪಿಸಿಕೊಡಿ ಎಂದರೆ ಬಿಟ್ಟುಕೊಡುತ್ತೇನೆ. ಕೆಪಿಸಿಸಿ ಅಧ್ಯಕ್ಷರಾಗಲು ಪಕ್ಷದಲ್ಲಿ ಸಾಕಷ್ಟು ಜನ ಆಕಾಂಕ್ಷಿಗಳಿದ್ದಾರೆ ಎಂದು ಹೇಳಿದರು.

ಸ್ಟೀಲ್‌ ಬ್ರಿಡ್ಜ್ ವಿಚಾರದಲ್ಲಿ ಸರ್ಕಾರ ಜನರ ಅಭಿಪ್ರಾಯಕ್ಕೆ ಮನ್ನಣೆ ನೀಡಿ ತೀರ್ಮಾನ ಕೈಗೊಂಡಿದೆ. ಬೆಂಗಳೂರಿನ ಜನರಿಗೆ ಸ್ಟೀಲ್‌ ಬ್ರಿಡ್ಜ್ ಬೇಡಾ ಅಂತಾದರೆ, ನಮಗೂ ಬೇಡ. ಸರ್ಕಾರ ಎಲ್ಲ ಆಯಾಮದಲ್ಲೂ ಆಲೋಚನೆ ಮಾಡಿದೆ. ಬಿಜೆಪಿಯವರು ಹೇಳಿದ ತಕ್ಷಣ ಸ್ಟೀಲ್‌ ಬಿಡ್ಜ್ ಯೋಜನೆ ಕೈ ಬಿಟ್ಟಿಲ್ಲ. ಜನರ ಭಾವನೆಗಳಿಗೆ ಸ್ಪಂದಿಸಿದ್ದೇವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next