Advertisement

Sumalatha Ambareesh ಮಂಡ್ಯದಲ್ಲಿ ಚುನಾವಣೆ ಪ್ರಚಾರಕ್ಕೆ ನನ್ನನ್ನು ಕರೆದಿಲ್ಲ

11:28 PM Apr 26, 2024 | Team Udayavani |

ಮಂಡ್ಯ: ಮೈತ್ರಿ ಅಭ್ಯರ್ಥಿ ಎಚ್‌.ಡಿ. ಕುಮಾರಸ್ವಾಮಿ ಅವರು ಮನೆಗೆ ಬಂದು ಹೋದ ಬಳಿಕ ನನಗೆ ಒಂದೂ ಫೋನ್‌ ಕರೆಯನ್ನೂ ಮಾಡಿಲ್ಲ ಹಾಗೂ ಪ್ರಚಾರಕ್ಕೆ ಕರೆದಿಲ್ಲ. ಗೆದ್ದ ಸೀಟನ್ನೇ ತ್ಯಾಗ ಮಾಡಿಯೂ ನನ್ನನ್ನು ಕರೆಯಲಿಲ್ಲ ಎನ್ನುವ ಬೇಸರ ಇದೆ ಎಂದು ಸಂಸದೆ ಸುಮಲತಾ ಅಸಮಾಧಾನ ಹೊರ ಹಾಕಿದರು.

Advertisement

ಮದ್ದೂರು ತಾಲೂಕಿನ ದೊಡ್ಡರಸಿ ನಕೆರೆ ಗ್ರಾಮದಲ್ಲಿ ಮತದಾನ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ನಾನಿಲ್ಲದೆ ಚುನಾವಣೆ ಮಾಡಿಕೊಳ್ಳುತ್ತೇವೆಂಬ ಭಾವನೆ ಅವರಲ್ಲಿ ಇರಬಹುದು. ದೇವೇ ಗೌಡರು ಹೇಳಿಕೆ ನೀಡಿದ ಬಳಿಕ ನನಗೆ ಒಂದಷ್ಟು ಕರೆಗಳು ಬಂದಿದೆ. ಆದರೆ ಜೆಡಿಎಸ್‌ನವರು ನನ್ನನ್ನು ಯಾವುದೇ ಪ್ರಚಾರಕ್ಕಾಗಲಿ, ಸಭೆ-ಸಮಾರಂಭಗಳಿಗಾ ಗಲಿ ಕರೆದಿಲ್ಲ. ಕೆಲವರು ಸೋತ ಸೀಟನ್ನೇ ಬಿಡುವು ದಿಲ್ಲ. ಅಂಥದ್ದರಲ್ಲಿ ನಾನು ಗೆದ್ದ ಸೀಟು ಬಿಟ್ಟು ಕೊಟ್ಟಿದ್ದೀನಿ. ಹಾಗಿದ್ದರೆ ನಾನು ಗೆದ್ದ ಸ್ಥಾನ ಬಿಟ್ಟು ಕೊಟ್ಟಿದ್ದು ತಪ್ಪಾ ಎಂದು ಪ್ರಶ್ನಿಸಿದರು.

ಮಂಗಳೂರಿಗೆ ಹೋಗಿದ್ದ ನಾನು ಮಂಡ್ಯಕ್ಕೆ ಬರುತ್ತಿರಲಿಲ್ವ?
ಅವರ (ಕುಮಾರಸ್ವಾಮಿ) ಮನಸ್ಸಿನಲ್ಲಿ ಏನಿದೆ ಎಂಬುದು ನನಗೆ ಗೊತ್ತಿಲ್ಲ. ಆದರೆ ಅವರು ನನ್ನ ಪ್ರಚಾರಕ್ಕೆ ಕರೆದಿಲ್ಲ. ಮಂಗಳೂರಿಗೂ ಹೋಗಿದ್ದ ನಾನು ಮಂಡ್ಯಕ್ಕೆ ಬರುತ್ತಿರಲಿಲ್ವ? ಆ ದಿನ ನನ್ನ ಸೀಟನ್ನು ಬಿಟ್ಟು ಕೊಟ್ಟಾಗಲೂ ಬೇಸರವಾಗಿರಲಿಲ್ಲ. ಆದರೆ ದೇವೇಗೌಡರ ಹೇಳಿಕೆ ನನಗೆ ಬೇಸರ ತರಿಸಿದೆ ಎಂದರು.

ಮತದಾನ ಮಾಡುವುದು ಕರ್ತವ್ಯ. ಅದನ್ನು ನಿರ್ವಹಿಸಿದ್ದೇನೆ. ದೇವೇಗೌಡರ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡಲ್ಲ. ಅವರು ದೊಡ್ಡವರು. ಅವರಿಗೆ ಸರಿಯಾದ ಮಾಹಿತಿ ಕೊಡದೆ ಆ ರೀತಿ ಹೇಳಿದ್ದಾರೆ. ಅವರಿಂದ ಅಂತಹ ಹೇಳಿಕೆ ನಿರೀಕ್ಷಿಸಿರಲಿಲ್ಲ.
-ಸುಮಲತಾ ಅಂಬರೀಶ್‌, ಸಂಸದೆ

Advertisement

Udayavani is now on Telegram. Click here to join our channel and stay updated with the latest news.

Next