ಚೆನ್ನೈ: ಭಾರತೀಯ ಚಿತ್ರರಂಗದ ಸೂಪರ್ ಸ್ಟಾರ್ ರಜಿನಿಕಾಂತ್ ಅವರು ನಾನು ಮತ್ತೆ ರಾಜಕೀಯಕ್ಕೆ ಮರಳುವುದಿಲ್ಲ ಎಂದು ಸ್ಟಷ್ಟಪಡಿಸಿದ್ದಾರೆ. ಇದರೊಂದಿಗೆ ತಮ್ಮ ರಜಿನಿ ಮಕ್ಕಳ್ ಮುಂದ್ರಂ ಪಕ್ಷವನ್ನು ವಿಸರ್ಜಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇನ್ನು ಮುಂದೆ ರಜಿನಿ ಮಕ್ಕಳ್ ಮುಂದ್ರಂ ಅಭಿಮಾನಿಗಳ ಕಲ್ಯಾಣ ಸಂಘವಾಗಿ ಮುಂದುವರಿಯಲಿದೆ ಎಂದಿದ್ದಾರೆ.
ಇದನ್ನೂ ಓದಿ:ಶಾಸಕ ಸುನೀಲ್ ಕುಮಾರ್ ಸೇರಿ BJP ಮುಖಂಡರ ವಿರುದ್ಧ ಮಾನನಷ್ಟ ಮೊಕದ್ದಮೆ: ರಾಧಾಕೃಷ್ಣ ಹಿರ್ಗಾನ
ರಜನಿಕಾಂತ್ ಅವರು ಡಿಸೆಂಬರ್ 29, 2020 ರಂದು ರಾಜಕೀಯಕ್ಕೆ ಬರುವುದಿಲ್ಲ ಮತ್ತು ಈ ಮೊದಲೇ ಘೋಷಿಸಿದಂತೆ ಪಕ್ಷವನ್ನು ಪ್ರಾರಂಭಿಸುವುದಿಲ್ಲ ಎಂದು ಘೋಷಿಸಿದ್ದರು. ಆದಾಗ್ಯೂ, ರಜನಿಕಾಂತ್ ಅವರ ಸಹವರ್ತಿ ಮತ್ತು ಗಾಂಧಿಯಾ ಮಕ್ಕಳ್ ಐಕ್ಯಂ ಸಂಸ್ಥಾಪಕ ತಮಿಳರುವಿ ಮಣಿಯನ್ ಅವರು ಎಂದಿಗೂ ರಾಜಕೀಯಕ್ಕೆ ಪ್ರವೇಶಿಸುವುದಿಲ್ಲ ಎಂದು ರಜಿನಿಕಾಂತ್ ಹೇಳಲಿಲ್ಲ, ಅವರು ಈಗ ಮತದಾನದ ಕಣಕ್ಕೆ ಇಳಿಯುವುದಿಲ್ಲ ಎಂದು ಹೇಳಿದರು ಮತ್ತು ಅವರು ರಜನಿ ಮಕ್ಕಳ್ ಮಂದ್ರವನ್ನು (ಆರ್‌ಎಂಎಂ) ವಿಸರ್ಜಿಸಿಲ್ಲ ಎಂದು ಹೇಳಿದ್ದರು. ಹೀಗಾಗಿ ಸೂಪರ್ ಸ್ಟಾರ್ ನಟ ಇಂದು ಸ್ಪಷ್ಟನೆ ನೀಡಿದ್ದಾರೆ.
‘ಅಣ್ಣಾತ್ತೆ’ ಚಿತ್ರದ ಶೂಟಿಂಗ್ ಮುಗಿದ ನಂತರ ರಜಿನಿ ತಮ್ಮ ಮೆಡಿಕಲ್ ಚೆಕಪ್ಗೋಸ್ಕರ ಅಮೆರಿಕಾಗೆ ತೆರಳಿದ್ದರು. ಅಲ್ಲಿ ಅವರ ದೇಹದ ಸಂಪೂರ್ಣ ತಪಾಸಣೆ ನಡೆದಿದ್ದು ರಿಪೋರ್ಟ್ಗಳೆಲ್ಲ ನಾರ್ಮಲ್ ಅಗಿವೆಯೆಂದು ಅವರ ಕುಟುಂಬದ ಮೂಲಗಳು ತಿಳಿಸಿದ್ದವು. ಅವರು ತಮ್ಮ ಮಗಳು ಐಶ್ವರ್ಯ ಜತೆಗೆ ಕಳೆದ ವಾರವಷ್ಟೇ ಅಮೆರಿಕಾದಿಂದ ಹಿಂತಿರುಗಿದ್ದರು.