Advertisement

ಉದಯವಾಣಿ ಸಂದರ್ಶನ : ನಾನು ಯಾರ ಜತೆಗೂ ಪೈಪೋಟಿಗೆ ಇಳಿದಿಲ್ಲ

12:47 AM Oct 17, 2020 | mahesh |

ರಾಜ್ಯದಲ್ಲಿ ಎರಡು ಕ್ಷೇತ್ರಗಳ ಉಪ ಚುನಾವಣ ಕಣ ಸಿದ್ಧವಾಗಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರಿಗೆ ಇದು ಮೊದಲ ಚುನಾವಣ ಪರೀಕ್ಷೆ… ಚುನಾವಣೆ ಎದುರಿಸುವುದರಿಂದ ಹಿಡಿದು, ಸಿದ್ದರಾಮಯ್ಯ ಹಾಗೂ ತಮ್ಮ ನಡುವಿನ ಸಂಬಂಧ, ಫ‌ಲಿತಾಂಶದಿಂದ ರಾಜ್ಯ ರಾಜಕಾರಣದಲ್ಲಿ ಆಗುವ ಬದಲಾವಣೆ ಬಗ್ಗೆ ಉದಯವಾಣಿ ಜತೆ ಡಿ.ಕೆ.ಶಿವಕುಮಾರ್‌ ಮಾತನಾಡಿದ್ದಾರೆ.

Advertisement

ಸಿದ್ದರಾಮಯ್ಯ ನಿಮ್ಮ ನಡುವೆ ಹೊಂದಾಣಿಕೆನೇ ಆಗ್ತಿಲ್ವಂತೆ… ಹೌದಾ?
ನೀವು ಮಾಧ್ಯಮದವರು ಬರೀ ಹುಳಿ ಹಿಂಡೋದ್ರಲ್ಲೇ ಇರಿ¤àರಾ? ಎಲ್ಲಿದೆ ಗೊಂದಲ, ಎಂಥವರನ್ನೆಲ್ಲ, ಯಾವುದ್ಯಾವುದೋ ಪಕ್ಷದವರ ಜತೆ ಸೇರಿಕೊಂಡು ಸರಕಾರ ಮಾಡಿದ್ದೇವೆ. ಇನ್ನು ಅವರ ಜತೆೆ ಹೊಂದಿಕೊಂಡು ಹೋಗಲು ನನಗೇನು ಸಮಸ್ಯೆ? ನಾನು ಅಧ್ಯಕ್ಷನಾಗಿದ್ದರೂ, ಪಕ್ಷದ ಕಾರ್ಯಕರ್ತ. ಅವರ ಕೈ ಕೆಳಗೆ ಕೆಲಸ ಮಾಡಿದ್ದೇನೆ.

2023ಗೆ ಸಿಎಂ ಆಗೋದಕ್ಕೆ ಇಬ್ಬರೂ ಪೈಪೋಟಿ ನಡೆಸುತ್ತಿದ್ದೀರಂತೆ?
ಅದೆಲ್ಲವನ್ನು ನಮ್ಮ ಪಕ್ಷದ ಹೈಕಮಾಂಡ್‌ ತೀರ್ಮಾನ ಮಾಡುತ್ತದೆ. ನಾನು ಯಾರ ವಿರುದ್ಧವೂ ಸ್ಪರ್ಧೆ ನಡೆಸಲು ಇಷ್ಟ ಪಡುವುದಿಲ್ಲ. ಸ್ಪರ್ಧೆಯನ್ನೂ ಮಾಡುವುದಿಲ್ಲ.

ಕಳೆದ ಲೋಕಸಭೆ ಚುನಾವಣೆಯಲ್ಲಿ ಕುಮಾರಸ್ವಾಮಿ ಜತೆೆ ಜೋಡೆತ್ತು ಅಂತ ಹೇಳಿಕೊಂಡಿದ್ದೀರಿ, ಈಗ ಹಾವು ಮುಂಗುಸಿ ಥರಾ ಆಗಿದ್ದೀರಾ ಯಾಕೆ?
ನಾನು ಯಾರ ಜತೆೆಯೂ ಹಾವೂ ಅಲ್ಲ, ಮುಂಗುಸಿಯೂ ಅಲ್ಲ. ನನಗೇಕೆ ಬೇರೆಯವರ ಬಗ್ಗೆ ಕನ್‌ಫ್ರಂಟೆಷೇನ್‌ ಬೇಕು. ನನಗೆ ಯಾವುದೇ ಅಗತ್ಯವಿಲ್ಲ. ಮತದಾರರ ಪ್ರೀತಿ ವಿಶ್ವಾಸ ಗಳಿಸುವುದು ನನ್ನ ಕೆಲಸ.

ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಏಕೆ ನಿಮ್ಮ ವಿರುದ್ಧ ತಿರುಗಿ ಬಿದ್ದಿದ್ದಾರೆ?
ಅವರೆಲ್ಲಿ ನನ್ನ ವಿರುದ್ಧ ಮಾತನಾಡಿದ್ದಾರೆ? ಎಲ್ಲವೂ ಮಾಧ್ಯಮಗಳ ಸೃಷ್ಟಿ. ಅವರು ಎಲ್ಲಿಯೂ ನನ್ನ ವಿರುದ್ಧ ಮಾತನಾಡಿಲ್ಲ. ನಾವೂ ಯಾರನ್ನೂ ಸೆಳೆಯೋದು, ಎಳೆಯೋದು ಮಾಡುತ್ತಿಲ್ಲ.

Advertisement

ಕುಮಾರಸ್ವಾಮಿ, ಯಡಿಯೂರಪ್ಪ ಇಬ್ಬರಲ್ಲಿ ಯಾರ ಜತೆೆ ನಿಮ್ಮ ಸ್ನೇಹ?
ಯಾರ ಜತೆೆಯೂ ಸ್ನೇಹವಿಲ್ಲ. ಇಬ್ಬರೂ ಮುಖ್ಯಮಂತ್ರಿಗಳಾದವರು. ಅವರ ಪಕ್ಷದ ಕೆಲಸ ಅವರು ಮಾಡುತ್ತಿದ್ದಾರೆ. ನಮ್ಮ ಪಕ್ಷದ ಕೆಲಸ ನಾವು ಮಾಡುತ್ತೇವೆ. ರಾಜಕಾರಣದಲ್ಲಿ ಯಾರ ಜತೆೆಯೂ ಸಾಫ್ಟ್ ಕಾರ್ನರ್‌ ಇಲ್ಲ. ಅವರ ಅನುಭವಕ್ಕೆ, ಅವರ ರಾಜಕೀಯ ಚತುರತೆಗೆ ನಾಡಿನ ಒಬ್ಬ ಪ್ರಜೆಯಾಗಿ ಎಷ್ಟು ಗೌರವ ಕೊಡಬೇಕೋ ಅಷ್ಟು ಕೊಡುತ್ತೇನೆ.

ಜೆಡಿಎಸ್‌, ಬಿಜೆಪಿ ಆಂತರಿಕ ಒಪ್ಪಂದ ಮಾಡಿಕೊಂಡಿದ್ದಾರೆ ಅಂತ ಅನಿಸುತ್ತಾ ನಿಮಗೆ? ನೀವು ಯಾರ ಜತೆೆ ಒಳ ಒಪ್ಪಂದ ಮಾಡಿಕೊಂಡಿದ್ದೀರಾ?
ಬೇರೆ ಪಕ್ಷದವರು ಯಾರ ಜತೆೆ ಒಳ ಒಪ್ಪಂದ ಮಾಡಿಕೊಂಡಿದ್ದಾರೋ ಇಲ್ಲವೋ ನನಗೆ ಗೊತ್ತಿಲ್ಲ. ಕೆಲವು ಹೇಳಿಕೆಗಳನ್ನು ಜನರು ಗಮನಿಸುತ್ತಿದ್ದಾರೆ. ನಾವು ಯಾರ ಜತೆೆಯೂ ಒಳ ಒಪ್ಪಂದ ಮಾಡಿಕೊಂಡಿಲ್ಲ. ಎರಡೂ ಕ್ಷೇತ್ರಗಳಲ್ಲಿ ನಾವು ಸ್ವತಂತ್ರವಾಗಿ ಸ್ಪರ್ಧೆ ಮಾಡಿದ್ದೇವೆ. ಎರಡೂ ಸ್ಥಾನ ನಾವೇ ಗೆಲ್ಲುತ್ತೇವೆ.

ಆರ್‌.ಆರ್‌. ನಗರ ಕ್ಷೇತ್ರದಲ್ಲಿ ಲೇಡಿ ಕ್ಯಾಂಡಿಡೇಟ್‌ ಹಾಕಿದ್ರೆ ಗೆಲ್ತಿರಾ ಅಂತ ಜ್ಯೋತಿಷಿ ಹೇಳಿದ್ರಂತೆ?
ನೋಡಿ, ನಮಗೆ ನಮ್ಮದೇ ಆದ ಚುನಾವಣ ಅನುಭವ ಇದೆ. ನಾವು ಬಹಳ ದೂರದೃಷ್ಟಿಯಿಂದ ಆಲೋಚನೆ ಮಾಡುತ್ತೇವೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್‌ ಪಕ್ಷ ಹೊಸ ಮುಖಗಳನ್ನು ನೋಡುತ್ತದೆ.

ಎರಡೂ ಕ್ಷೇತ್ರಗಳ ಚುನಾವಣೆ ನಿಮ್ಮ ಸಾಮರ್ಥ್ಯ ಸಾಬೀತು ಪಡಿಸಲು ವೇದಿಕೆ ಆಗುತ್ತಾ?
ಈ ಚುನಾವಣೆಯಿಂದ ಯಡಿಯೂರಪ್ಪ ಅವರನ್ನು ಇಳಿಸಲು ಆಗುವುದಿಲ್ಲ. ಮೋದಿಯನ್ನೂ ಇಳಿಸಲು ಆಗುವುದಿಲ್ಲ. ನಮ್ಮ ರಾಜ್ಯದಲ್ಲಿ ಭ್ರಷ್ಟಾಚಾರ ಪೀಕ್‌ಗೆ ಹೋಗಿದೆ. ಭ್ರಷ್ಟಾಚಾರ ಡೈಜೆಸ್ಟ್‌ ಮಾಡಿಕೊಳ್ಳಲು ಆಗುತ್ತಿಲ್ಲ. ಶ್ರಮಿಕರು, ಉದ್ಯೋಗದಾತರು, ವಿದ್ಯಾರ್ಥಿಗಳಿಗೆ, ಮಹಿಳೆಯರಿಗೆ ಯಾರಿಗೂ ನ್ಯಾಯ ದೊರೆತಿಲ್ಲ. 20 ಲಕ್ಷ ಕೋಟಿ ಕೊಡುತ್ತಿದ್ದೇವೆ ಎಂದು ಕೇಂದ್ರ ಹಣಕಾಸು ಸಚಿವರು ಹೇಳಿದ್ದಾರೆ. ಅದು ಯಾರಿಗಾದರೂ ತಲುಪಿತಾ ಎಂದು ಒಂದು ಪಟ್ಟಿ ಕೊಡಿ ಎಂದು ಕೇಳಿದೆ. ಒಂದೂ ಮಾಹಿತಿ ಕೊಡಲಿಲ್ಲ.

ಭ್ರಷ್ಟ ಸರಕಾರ ಅಂತೀರಾ.. ಇದು ಇನ್ನೂ ಮೂರು ವರ್ಷ ಇರಬೇಕು ಅಂತ ಹೇಳ್ತಿರಾ ?
ಅದಕ್ಕೆ …ಈ ಸರಕಾರಕ್ಕೆ ಒಂದು ಸಂದೇಶ ಹೋಗಬೇಕು. ನಿಮ್ಮ ಸರಕಾರ ಸರಿಯಿಲ್ಲ ಎಂದು ಜನರು ತೀರ್ಪು ನೀಡುವಂತೆ ಕೇಳುತ್ತೇನೆ.

ಆರ್‌. ಆರ್‌.ನಗರದಲ್ಲಿ ಕಾರ್ಯಕರ್ತರಿಗೆ ಅನ್ಯಾಯವಾದರೂ ಗಾಂಧಾರಿ ಥರ ಕುಳಿತಿದ್ದೆ ಅಂತ ಹೇಳಿದ್ದೀರಿ, ಇದು ನೀವೇ ಅನ್ಯಾಯ ಮಾಡಿದ ಹಾಗಲ್ವಾ ?
ಖಂಡಿತಾ, ನಾನು ಇಲ್ಲ ಅಂತ ಹೇಳುವುದಿಲ್ಲ. ನನಗೆ ಬೇಕಾದಷ್ಟು ದೂರುಗಳು ಬಂದಿದ್ದವು. ಯಡಿಯೂರಪ್ಪನವರೇ ಅವರ ಅಭ್ಯರ್ಥಿ (ಮುನಿರತ್ನ) ವಿರುದ್ಧ ಹಿಂದೆ ಟ್ವೀಟ್‌ ಮಾಡಿದ್ದರು. ದೇವೇಗೌಡರೇ ಫೇಕ್‌ ಓಟರ್‌ ಐಡಿ ವಿರುದ್ಧ ಧರಣಿ ನಡೆಸಿದ್ದರು. ರಾಜೀನಾಮೆ ಕೊಟ್ಟ ಮೇಲೂ 200 ಕೋಟಿ ರೂ. ಅವ್ಯವಹಾರ ಮಾಡಿದ್ದಾರೆ ಅಂತ ಅಲ್ಲಿನ ಸಂಸದ (ಡಿ.ಕೆ. ಸುರೇಶ್‌) ಅವರ (ಮುನಿರತ್ನ) ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ. ಮೂರೂ ಪಕ್ಷದವರು ಅವರು ಸರಿಯಿಲ್ಲ ಅಂತ ಹೇಳುತ್ತಿದ್ದಾರೆ ಎಂದರೆ, ಜನರೇ ತೀರ್ಪು ನೀಡಬೇಕು.

ನಿಮ್ಮ ಮನೆ ಮೇಲೆ ಸಿಬಿಐ ದಾಳಿ ಟಾರ್ಗೆಟೆಡ್‌ ಅನಿಸುತ್ತಾ ?
ನಾನು ಕೆಪಿಸಿಸಿ ಅಧ್ಯಕ್ಷನಾದ ಮೇಲೆ ನನಗೆ ನೋಟಿಸ್‌ ನೀಡಿಲ್ಲ. ನನ್ನನ್ನು ವಿಚಾರಣೆಗೂ ಕರೆಯಲಿಲ್ಲ. ನನ್ನ ಮನೆ ಮೇಲೆ ಈಗ ದಾಳಿ ಮಾಡಿ ತಪಾಸಣೆ ಮಾಡಿದ್ದಾರೆ. ಅವರಿಗೆ ಏನು ಬೇಕೋ ಅದನ್ನು ಮಾಡಲಿ. ನನಗೆ ಕಾನೂನಿನ ಮೇಲೆ ನಂಬಿಕೆ ಇದೆ. ಕಾನೂನು ಹೋರಾಟ ಮಾಡುತ್ತೇನೆ. ನೋಡಿ ಎಲ್ಲದಕ್ಕೂ ಕಾಲ ಪಕ್ವ ಆಗಬೇಕು. ಸಮಯ ಬರಬೇಕು. ಟೈಮು, ಘಳಿಗೆ ಎಲ್ಲವೂ ಬರಬೇಕು.

ಈಗಿನ ಪರಿಸ್ಥಿತಿ ನೋಡಿದರೆ, ರಾಜ್ಯದಲ್ಲಿ ಮಧ್ಯಾಂತರ ಚುನಾವಣೆ ನಡೆಯಬೇಕು ಅನಿಸುತ್ತಾ?
ಇದಕ್ಕೆ ಬಿಜೆಪಿಯವರೇ ಉತ್ತರ ನೀಡುತ್ತಾರೆ. ಅವರ ಪಕ್ಷದವರು ಏನು ಬೇಕಾದರೂ ತೀರ್ಮಾನ ತೆಗೆದುಕೊಳ್ಳಬಹುದು. ಎಷ್ಟೊ ಜನ ಸಚಿವರು ಮಾತನಾಡುತ್ತಿದ್ದಾರೆ. ಅವರೇ ಮಧ್ಯಾಂತರ ಚುನಾವಣೆಯ ಬಗ್ಗೆ ಮಾತನಾಡುತ್ತಿರುವಾಗ ನಾನೇಕೆ ಮಾತನಾಡಲಿ?

ಶಂಕರ ಪಾಗೋಜಿ

Advertisement

Udayavani is now on Telegram. Click here to join our channel and stay updated with the latest news.

Next