Advertisement

ಬ್ಯಾಟಿಂಗ್ ಮಾಡುವಾಗ ನಾನೂ ಒತ್ತಡ, ಭಯ ಅನುಭವಿಸಿದ್ದೇನೆ: ಧೋನಿ

03:33 PM May 08, 2020 | keerthan |

ಚೆನ್ನೈ: ಯಾವುದೇ ಕ್ರೀಡೆ ಆಗಿರಲಿ ಕೋಚ್‌ ಹಾಗೂ ಕ್ರೀಡಾಪಟು ನಡುವೆ ಮುಕ್ತವಾದ ಸಂವಾದ ಮುಖ್ಯವಾಗುತ್ತದೆ, ಇದರಿಂದ ಮಾತ್ರ ಒತ್ತಡದಿಂದ ಹೊರಬಂದು ಕ್ರೀಡಾಪಟು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯ’ ಎಂದು ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಎಂ.ಎಸ್‌.ಧೋನಿ ತಿಳಿಸಿದ್ದಾರೆ.

Advertisement

“ಒತ್ತಡ ಎಲ್ಲರಿಗೂ ಇರುತ್ತದೆ, ಆದರೆ ಅದನ್ನು ಹೇಳಿಕೊಳ್ಳುವುದಿಲ್ಲ, ನಾನೂ ಬ್ಯಾಟಿಂಗ್‌ಗೆ  ಕ್ರೀಸ್‌ಗೆ ಇಳಿದಾಗ ಆರಂಭದ 5ರಿಂದ 10 ಎಸೆತಗಳನ್ನು ಎದುರಿಸುವಾಗ ಹೆಚ್ಚು ಒತ್ತಡಕ್ಕೆ ಒಳಗಾಗುತ್ತೇನೆ. ನಾನೊಬ್ಬನೇ ಅಲ್ಲ ಎಲ್ಲರು ಕೂಡ ಒಂದಲ್ಲ ಒಂದು ರೀತಿಯಲ್ಲಿ ಇಂತಹ ಒತ್ತಡಗಳನ್ನು ಅನುಭವಿಸಿರುತ್ತಾರೆ. ಅದನ್ನು ನಾವು ಮಾನಸಿಕ ಸ್ಥಿತಿ ನಿರ್ವಹಣಾ ತರಬೇತುದಾರರ ಜತೆ ನಾವು ಎಷ್ಟೋ ಸಲ ಚರ್ಚಿಸಲು  ಹಿಂದೇಟು ಹಾಕುತ್ತೇವೆ, ಇದಕ್ಕೆ ಕಾರಣ ಭಾರತದಲ್ಲಿ ಇನ್ನೂ ಮಾನಸಿಕ ಒತ್ತಡವನ್ನು ಮುಕ್ತವಾಗಿ ಜನ ಹಂಚಿಕೊಳ್ಳುತ್ತಿಲ್ಲ.

ಕ್ರೀಡಾಪಟು ಮಾನಸಿಕ ಆರೋಗ್ಯ ಕಾಪಾಡಿ ಕೊಳ್ಳಲು ಆಟಗಾರರು ಹಾಗೂ ತರಬೇತುದಾರನ ನಡುವಿನ ಉತ್ತಮ ಸ್ನೇಹದಿಂದ ಮಾತ್ರ ಸಾಧ್ಯವಾಗುತ್ತದೆ. ಕೋಚ್‌ ಜತೆಗಿದ್ದಾಗ ಆಟಗಾರ ಯಾವ ವಲಯದಲ್ಲಿ ಹೆಚ್ಚು ಒತ್ತಡಕ್ಕೆ ಒಳಗಾಗುತ್ತಾನೆ ಎನ್ನುವುದನ್ನು ಕಂಡು ಹಿಡಿದು ಅದಕ್ಕೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುತ್ತದೆ’ ಎಂದು ಧೋನಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next