Advertisement

ನಿನ್ನನ್ನು ತುಂಬಾ ಹಚ್ಕೊಂಡಿದ್ದೆ ಹುಚ್ಚನ ಥರಾ…

06:00 AM Aug 21, 2018 | |

ಹಾಯ್‌ ಮೈ ಡಿಯರ್‌ ಗೌರಮ್ಮ
ಎಲ್ಲಿಂದ ಶುರುಮಾಡಲಿ ನಮ್ಮ ಪ್ರೀತಿಯ ಓಲೆಯನ್ನು? ಪ್ರೀತಿ-ಪ್ರೇಮ, ಒಲವು ಮೊದಲಾದ ಶಬ್ದಗಳಿಗೆ ಕೊನೆಯೇ ಇಲ್ಲ. ಅದು ನಿತ್ಯನೂತನ, ಚಿರಾಯು.

Advertisement

ಈ ಓಲೆಯನ್ನು ಕೊನೆ ಅಕ್ಷರದವರೆಗೂ ಮತ್ತೆಮತ್ತೆ ನೀನು ಓದುತ್ತೀಯಾ ಅಲ್ವಾ? ಮನದಲ್ಲಿ ಸಾವಿರ ಕನಸನ್ನು ಕಟ್ಟಿಕೊಂಡಿರುವವನ ಬಗ್ಗೆ ನಿನಗೆ ಪ್ರೀತಿ ತುಂಬಿದ ತಿರಸ್ಕಾರ ಇದೆ ಅಲ್ವಾ? ಪ್ರತಿ ಹೃದಯ ಬಡಿತದಲ್ಲೂ, ಉಸಿರಲ್ಲೂ ಆವರಿಸಿಕೊಂಡಿರುವ ನಿನ್ನಿಂದ ಇಂದು ನಾನು ಮಾನಸಿಕ ರೋಗಿಯಾಗಿದ್ದೇನೆ. ಅದೇಕೋ ಗೊತ್ತಿಲ್ಲ, ನಿನ್ನೊಂದಿಗೇ ಬಾಳಬೇಕೆಂಬ ಅತೀವ ಹಂಬಲ. ಅಂದು ನಿನ್ನ ಧ್ವನಿಯಿಂದ ಬಂದ ಮಮತೆಯ ನಾದ ಇಂದಿಗೂ ನನ್ನೆದೆಯಲ್ಲೇ  ಝೇಂಕರಿಸುತ್ತಿದೆ. ಅದಕ್ಕೆ ಈ ಮೂರು ವರ್ಷದ ಸವಿನೆನಪುಗಳೇ ಸಾಕ್ಷಿ.

ನಿನ್ನ ತುಂಬಾ ಹಚ್ಕೊಂಡಿದ್ದೆ ಹುಚ್ಚನ ಥರ. ನಾವಿಬ್ಬರೂ ದೂರಾಗಿ ಮೂರು ವರ್ಷ ಆಯ್ತು. ಆದರೂ ನನ್ನ ಮನಸ್ಸು ಇಂದಿಗೂ ನಿನ್ನನ್ನೇ ಬಯಸುತ್ತಿದೆ. ಯಾಕೆ ಅಂತ ಗೊತ್ತಾ? ನೀನು ಯಾವತ್ತೂ, ನಿನ್ನ ಸಂಬಳ ಎಷ್ಟು? ನಿನ್ನತ್ರ ಕಾರ್‌, ಬೈಕ್‌ ಇದೆಯಾ? ಆಸ್ತಿ ಎಷ್ಟಿದೆ? ಅಕೌಂಟಲ್ಲಿ ದುಡ್ಡು ಎಷ್ಟಿದೆ?…ಅಂತೆಲ್ಲಾ ಕೇಳದೆಯೇ ನನ್ನನ್ನು ಪ್ರೀತಿಸಿದೆ. ನಮ್ಮ ಪ್ರೀತಿಗೆ ನಿನ್ನ ಇಷ್ಟ ದೇವರು ವಿನಾಯಕನೇ ಸಾಕ್ಷಿಯಾಗಿದ್ದ.

ನಾವಿಬ್ಬರೂ ದೂರ ಆಗೋಕೆ ನಾನು ಕಾರಣಾನಾ, ನೀನಾ? ಎಂಬುದು ಇಂದಿಗೂ ಯಕ್ಷ ಪ್ರಶ್ನೆಯಾಗಿದೆ. ಬದುಕಿನ ಅರಮನೆಯಲ್ಲಿ ಹೃದಯದ ಬಾಗಿಲ ಮೇಲೆ ನೀನು ಬಿಡಿಸಿದ ಭಾವನೆಗಳ ಚಿತ್ರ, ನಿನ್ನನ್ನು ಮರೆಯಲಾಗದಂತೆ ಕಟ್ಟಿ ಹಾಕಿದೆ. ನೀನೇ ಬಿಡಿಸಿಕೊಟ್ಟ ಕೃಷ್ಣ-ರುಕ್ಮಿಣಿಯ ಭಾವಚಿತ್ರ, ಅದು ಇಂದಿಗೂ ನನ್ನ ಬಳಿಯಿದೆ.

ಮಾತುಗಳ ಜೊತೆಗೆ ನೋಟ ಬೆರೆಸಿ ಸೆಳೆದೆ ನಿನ್ನ ಹತ್ರ ಹುಚ್ಚು ಮನಸಿನ ಸಾಗರದಲ್ಲಿ ಉಳಿದಿದ್ದು ನಿನ್ನ ನೆನಪುಗಳು ಮಾತ್ರ, ನೆನಪುಗಳು ಹಾಯುತ್ತಿದ್ದಾಗ ಮತ್ತೆ-ಮತ್ತೆ ಕಂಡಿದ್ದು ನಿನ್ನ ಹೆಜ್ಜೆ ಗುರುತುಗಳು ಮಾತ್ರ.. 

Advertisement

ನೀನು ಎಲ್ಲಿದ್ದೀಯಾ? ಹೇಗಿದ್ದೀಯಾ? ನನಗೆ ನಿಜವಾಗಿಯೂ ಗೊತ್ತಿಲ್ಲ. ಆದರೆ ಒಂದೇ ಒಂದು ಸಲ ನನ್ನೆದುರಿಗೆ ಬಾ. 

ಬಿ.ಕೆ

Advertisement

Udayavani is now on Telegram. Click here to join our channel and stay updated with the latest news.

Next