Advertisement

“ಎಸ್‌’ಅಕ್ಷರ ದ್ವೇಷಿಗೆ ಹಾರ್ವರ್ಡ್‌ ವಿವಿಯಲ್ಲಿ ಸೀಟು! 2025ನೇ ವರ್ಷಕ್ಕೆ ಸಿಗಲಿದೆ ಪ್ರವೇಶ

11:39 PM May 14, 2021 | Team Udayavani |

ಕೇಂಬ್ರಿಡ್ಜ್: ಅಬಿಗೈಲ್‌ ಮ್ಯಾಕ್‌ ಎಂಬ 18ರ ಯುವತಿ ಬರೆದಿದ್ದ ಇಂಗ್ಲೀಷ್‌ನ “ಎಸ್‌’ ಅಕ್ಷರವನ್ನು ದ್ವೇಷಿಸುವ 1,64,777 ಪದಗಳ ಪ್ರಬಂಧವೊಂದು ಪ್ರತಿಷ್ಠಿತ ಹಾರ್ವರ್ಡ್‌ ವಿಶ್ವವಿದ್ಯಾಲಯದಲ್ಲಿ ಸೀಟು ಪಡೆಯಲು ಸಹಾಯ ಮಾಡಿದೆ. ಈಕೆಯ ಪ್ರಬಂಧವನ್ನು ಮೆಚ್ಚಿಕೊಂಡಿರುವ ಆಕ್ಸ್‌ಫ‌ರ್ಡ್‌ ವಿವಿಯ ತಜ್ಞರು, ಈಕೆಗೆ 2025ರ ಶೈಕ್ಷಣಿಕ ವರ್ಷಕ್ಕೆ ತನ್ನಲ್ಲಿ ಪ್ರವೇಶ ನೀಡಿದ್ದಾರೆ.

Advertisement

ಇತ್ತೀಚೆಗೆ, ಆಕ್ಸ್‌ಫ‌ರ್ಡ್‌ ವಿವಿಯ ಐವಿ ಕಾಲೇಜಿನಲ್ಲಿ ವ್ಯಾಸಂಗಕ್ಕಾಗಿ ಎಲ್ಲಾ ವಿದ್ಯಾರ್ಥಿಗಳಂತೆಯೇ ಅರ್ಜಿ ಸಲ್ಲಿಸಿದ್ದ ಅಬಿಗೈಲ್‌, ಆನಂತರ ತನ್ನ ಪಾಡಿಗೆ ತನ್ನ ಚಟುವಟಿಕೆಗಳಲ್ಲಿ ನಿರತರಾಗಿದ್ದಳು. ಕೆಲ ದಿನಗಳ ತರುವಾಯ, “ಎಸ್‌’ ಅಕ್ಷರವನ್ನು ದ್ವೇಷಿಸುವ ಪ್ರಬಂಧವನ್ನು ಬರೆದು ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಳಲ್ಲದೆ, ಅದರ ಬಗ್ಗೆ ಮಾಹಿತಿಯುಳ್ಳ ಸಂಕ್ಷಿಪ್ತ ವಿಡಿಯೋವನ್ನೂ ಮಾಡಿ ಅದನ್ನೂ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಳು.

ಇದನ್ನೂ ಓದಿ:ಐಆರ್‌ಸಿಟಿಸಿಯ “ವರ್ಕ್‌ ಫ್ರಂ ಹೋಟೆಲ್‌’ : ಆತಿಥ್ಯ ಕ್ಷೇತ್ರದ ಹೊಸ ಟ್ರೆಂಡಿಂಗ್‌ ಕೊಡುಗೆ

ಇಡೀ ಪ್ರಬಂಧದಲ್ಲಿ ತಾನೇಕೆ ಎಸ್‌ ಅಕ್ಷರವನ್ನು ದ್ವೇಷಿಸುತ್ತೇನೆ ಎಂಬುದನ್ನು ಆಕೆ, ಹೃದಯಸ್ಪರ್ಶಿಯಾಗಿ ಹೇಳಿದ್ದಾಳೆ. “ಕ್ಯಾನ್ಸರ್‌ನಿಂದಾಗಿ ನನ್ನೊಬ್ಬ ಪೋಷಕರನ್ನು ಕಳೆದುಕೊಂಡಿದ್ದೇನೆ. ಹಾಗಾಗಿ, ನನಗೆ “ಸಿಂಗಲ್‌ ಪೇರೆಂಟ್‌’ ಇದ್ದಾರೆ. ಅರ್ಜಿ ಭರ್ತಿ ಮಾಡುವಾಗ ಪೋಷಕರ ಮಾಹಿತಿಯನ್ನು “ಪೇರೆಂಟ್ಸ್‌’ ಎಂಬ ಹೆಸರಿನಲ್ಲಿ ಕೇಳಲಾಗುತ್ತದೆ. ನನ್ನ ವಿಚಾರದಲ್ಲಿ ಅಲ್ಲಿ, ಪೇರೆಂಟ್ಸ್‌ ಬದಲು ಪೇರೆಂಟ್‌ ಎಂದಿರಬೇಕು. ಹಾಗಾಗಿ, ಪೇರೆಂಟ್ಸ್‌ನ ಕಡೆಯ ಅಕ್ಷರ ಎಸ್‌ ನೋಡಿದಾಗ ಬೇಸರವಾಗುತ್ತದೆ, ಅದರ ಬಗ್ಗೆ ದ್ವೇಷ ಹುಟ್ಟಿಸುತ್ತದೆ. ಇನ್ನು, ನನ್ನ ಗೆಳತಿಯರು ತಮ್ಮ ಹೆತ್ತವರೊಡನೆ ಹೋಟೆಲ್‌ಗೆ ಹೋಗುತ್ತಾರೆ. ನಾನು ಮಾತ್ರ ನನ್ನ ಸಿಂಗಲ್‌ ಪೇರೆಂಟ್‌ ಜೊತೆಗೆ ಹೋಟೆಲ್‌ಗೆ ತೆರಳುತ್ತೇನೆ. ಇದೆಲ್ಲವೂ ನನ್ನನ್ನು ಎಸ್‌ ಎಂಬ ಅಕ್ಷರವನ್ನು ದ್ವೇಷಿಸುವಂತೆ ಮಾಡಿದೆ’ ಎಂದಿದ್ದಾಳೆ.

Advertisement

Udayavani is now on Telegram. Click here to join our channel and stay updated with the latest news.

Next