Advertisement

ನನ್ನ ಯಶಸ್ಸಿಗೆ ನಾನೇ ಕಾರಣ: ಶಮಿ

09:32 AM Jun 29, 2019 | keerthan |

ಲಂಡನ್‌ : ಕ್ರಿಕೆಟಿಗರು ಉತ್ತಮ ನಿರ್ವಹಣೆಯ ಮೂಲಕ ಗೆಲುವಿನ ರೂವಾರಿಯಾಗಿ ಮೂಡಿಬಂದಾಗ ತಮ್ಮ ಯಶಸ್ಸನ್ನು ಹೆಂಡತಿಗೆ, ದೇಶಕ್ಕೆ, ಯೋಧರಿಗೆ ಅರ್ಪಿಸುವುದುಂಟು. ಆದರೆ ವೆಸ್ಟ್‌ ಇಂಡೀಸ್‌ ವಿರುದ್ಧ ಅದ್ಭುತ ಬೌಲಿಂಗ್‌ ಮಾಡಿದ ಮೊಹಮ್ಮದ್‌ ಶಮಿ ತನ್ನ ಯಶಸ್ಸನ್ನು ತನಗೇ ಅರ್ಪಿಸಿಕೊಂಡಿದ್ದಾರೆ.

Advertisement

ತನ್ನ ಯಶಸ್ಸಿಗೆ ತಾನೇ ಕಾರಣ ಎಂದಿದ್ದಾರೆ. “ಯಶಸ್ಸನ್ನು ನನಗಲ್ಲದೆ ಬೇರೆ ಯಾರಿಗೆ ಅರ್ಪಿಸಲಿ? ನನ್ನ ಯಶಸ್ಸಿನ ಎಲ್ಲ ಕ್ರೆಡಿಟ್‌ ನನಗೇ ಸಲ್ಲುತ್ತದೆ’ ಎಂದಾಗ ಅಚ್ಚರಿಗೊಳಗಾಗುವ ಸರದಿ ಪತ್ರಕರ್ತರದ್ದಾಗಿತ್ತು. ಹೆಂಡತಿ ಜತೆಗಿನ ಕಿತ್ತಾಟ, ಟ್‌ನೆಸ್‌ ಸಮಸ್ಯೆ, ವೈವಾಹಿಕ ಹಿಂಸಾಚಾರದ ಆರೋಪ ಗಳ ಸರಮಾಲೆ… ಹೀಗೆ ಒಂದೂವರೆ ವರ್ಷ ಇನ್ನಿಲ್ಲದ ಸಂಕಟ ಅನುಭವಿಸಿದ
ಹಿನ್ನೆಲೆಯಲ್ಲಿ ಶಮಿ ತನ್ನ ಯಶಸ್ಸಿನ ರೂವಾರಿ ತಾನೇ ಎಂದು ಹೇಳಿಕೊಂಡಿದ್ದಾರೆ.

ಒಂದೂವರೆ ವರ್ಷಗಳ ಸಂಕಟ “18 ತಿಂಗಳು ನಾನು ಅನುಭವಿಸಿದ ಸಂಕಟ ನನಗೊಬ್ಬನಿಗೇ ಗೊತ್ತು. ಎಲ್ಲವನ್ನೂ ನಾನು ಸಹಿಸಿಕೊಂಡಿದ್ದೇನೆ. ಹೀಗಾಗಿ
ಇಂದಿನ ಯಶಸ್ಸಿನ ಶ್ರೇಯಸ್ಸು ಕೂಡ ನನಗೆ ಸಲ್ಲಬೇಕು’ ಎಂದಿದ್ದಾರೆ ಶಮಿ.

“ಕೌಟುಂಬಿಕ ಸಮಸ್ಯೆಗಳಿಂದ ಹಿಡಿದು ಫಿಟ್‌ನೆಸ್‌ ಸಮಸ್ಯೆ ತನಕ ಎಲ್ಲದರ ವಿರುದ್ಧ ಹೋರಾಡುವ ಶಕ್ತಿ ನೀಡಿದ್ದಕ್ಕಾಗಿ ದೇವರಿಗೆ ಕೃತಜ್ಞತೆ ಹೇಳುತ್ತೇನೆ. ಈಗ ನನ್ನ ಗುರಿಯಿರುವುದು ದೇಶಕ್ಕಾಗಿ ಆಡುವುದು ಮಾತ್ರ’ ಎಂದು ಹ್ಯಾಟ್ರಿಕ್‌ ಸಹಿತ 2 ಪಂದ್ಯಗಳಲ್ಲಿ 8 ವಿಕೆಟ್‌ ಕಿತ್ತಿರುವ ಶಮಿ ಹೇಳಿದರು.

ಎಲ್ಲವೂ ಎಣಿಸಿದಂತೆ ಆಗುತ್ತಿದೆ “ಯೋ ಯೋ ಪರೀಕ್ಷೆಯಲ್ಲಿ ಫೇಲಾದದ್ದು ಮಾತ್ರವಲ್ಲ, ನನ್ನ ಲಯವೂ ತಪ್ಪಿತ್ತು.ಫಿಟ್‌ನೆಸ್‌ಗಾಗಿ ಬಹಳ ಬೆವರು ಹರಿಸಬೇಕಾಯಿತು. ಈಗ ತೂಕ ಇಳಿಸಿಕೊಂಡ ಬಳಿಕ ಲಯವೂ ಸಿಕ್ಕಿದೆ ಮತ್ತು ಎಲ್ಲವೂ ನಾನೆಣಿಸಿದಂತೆ ಆಗುತ್ತಿದೆ. ಈಗ ಪಥ್ಯ ಮತ್ತು ಅಭ್ಯಾಸವನ್ನು ಕಠಿನವಾಗಿ ಪಾಲಿಸುತ್ತಿದ್ದೇನೆ. ಹೀಗಾಗಿ ಬೇಗ ಆಯಾಸವಾಗುವುದಿಲ್ಲ. ವೇಗವೂ ವೃದ್ಧಿಸಿದೆ. ಬೌಲಿಂಗ್‌ ಕೌಶಲದ ಕುರಿತು ಹೇಳುವುದಾದರೆ ಮೈದಾನದಲ್ಲಿ ಉತ್ತಮ ನಿರ್ವಹಣೆ ನೀಡಬಲ್ಲೆ ಎಂಬ ವಿಶ್ವಾಸ ಇತ್ತು. ಆದರೆ ನನ್ನ ಆತ್ಮವಿಶ್ವಾಸವನ್ನು ಅಹಂಕಾರ ಎಂದು ತಪ್ಪಾಗಿ ಭಾವಿಸುವ ಅಪಾಯವೂ ಇತ್ತು’ ಎಂದಿದ್ದಾರೆ ಶಮಿ.

Advertisement

ಯಶಸ್ಸನ್ನು ನನಗಲ್ಲದೆ ಬೇರೆ ಯಾರಿಗೆ ಅರ್ಪಿಸಲಿ? ನನ್ನ ಯಶಸ್ಸಿನ ಎಲ್ಲ ಶ್ರೇಯಸ್ಸು ನನಗೇ ಸಲ್ಲುತ್ತದೆ-ಶಮಿ

Advertisement

Udayavani is now on Telegram. Click here to join our channel and stay updated with the latest news.

Next