Advertisement
ಶನಿವಾರ ತೆಲಂಗಾಣದ ರಾಮಗುಂಡಂ ನಲ್ಲಿ ನಡೆದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರ ವಿರುದ್ದ ಪರೋಕ್ಷವಾಗಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಭ್ರಷ್ಟಾಚಾರ ಮತ್ತು ರಾಜವಂಶದ ರಾಜಕೀಯ ಬೇಡ. ರಾಜ್ಯಕ್ಕೆ ಜನರೇ ಮೊದಲಾಗಬೇಕು, ಕುಟುಂಬ ಮೊದಲಾಗುವ ಸರ್ಕಾರ ಬೇಡ ಎಂದರು.
Related Articles
Advertisement
”ಕೆಸಿಆರ್ ಅವರ ಮೂಢ ನಂಬಿಕೆಗಳ ಬಗ್ಗೆ ಕಿಡಿಕಾರಿ, ಎಲ್ಲಾ ನಿರ್ಣಾಯಕ ನಿರ್ಧಾರಗಳು ಎಲ್ಲಿ ವಾಸಿಸಬೇಕು, ಕಚೇರಿ ಸ್ಥಳ, ಯಾರನ್ನು ಮಂತ್ರಿಯಾಗಿ ಆಯ್ಕೆ ಮಾಡಬೇಕು, ಯಾರನ್ನು ಕೈಬಿಡಬೇಕು ಇತ್ಯಾದಿ ಮೂಢನಂಬಿಕೆಯ ಆಧಾರದ ಮೇಲೆ ತೆಗೆದುಕೊಳ್ಳಲಾಗಿದೆ. ಇದು ಸಾಮಾಜಿಕ ನ್ಯಾಯಕ್ಕೆ ದೊಡ್ಡ ಅಡ್ಡಿಯಾಗಿದೆ” ಎಂದರು.
“ತೆಲಂಗಾಣವು ಮಾಹಿತಿ ತಂತ್ರಜ್ಞಾನದ ಕೇಂದ್ರವಾಗಿದೆ. ಆದರೆ ಈ ಆಧುನಿಕ ನಗರದಲ್ಲಿ ಮೂಢನಂಬಿಕೆಯನ್ನು ಉತ್ತೇಜಿಸಲಾಗುತ್ತಿದೆ, ಇದು ಅತ್ಯಂತ ದುಃಖಕರವಾಗಿದೆ. ತೆಲಂಗಾಣವನ್ನು ನಾವು ಹಿಂದುಳಿದಿರುವಿಕೆಯಿಂದ ಮೇಲೆತ್ತಬೇಕಾದರೆ, ಮೊದಲು ನಾವು ಮೂಢನಂಬಿಕೆಯನ್ನು ಇಲ್ಲಿಂದ ತೆಗೆದುಹಾಕಬೇಕು” ಎಂದರು.
‘ತಮ್ಮ ವಿರುದ್ಧ ಏಜೆನ್ಸಿಗಳಿಂದ ಭ್ರಷ್ಟಾಚಾರದ ತನಿಖೆಗಳ ಭಯದಿಂದ ವಿರೋಧ ಪಕ್ಷಗಳು ಒಕ್ಕೂಟವನ್ನು ರಚಿಸಲು ಪ್ರಯತ್ನಿಸುತ್ತಿವೆ. ತೆಲಂಗಾಣ ನಾಯಕತ್ವವು ಕೇಂದ್ರದ ಕಲ್ಯಾಣ ಯೋಜನೆಗಳನ್ನು ಜನರಿಗೆ ತಲುಪಲು ಬಿಡುತ್ತಿಲ್ಲ’ ಎಂದು ಪ್ರಧಾನಿ ಆರೋಪಿಸಿದರು.