Advertisement
ಕರ್ನಾಟಕ ಮಾಧ್ಯಮ ಅಕಾಡೆಮಿ,ಉಡುಪಿ ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ಉಡುಪಿಯ ಐಎಂಎ ಭವನದಲ್ಲಿ ನಡೆಯುತ್ತಿರುವ “ಕರಾವಳಿ ಸಮಸ್ಯೆಗಳು-ಪರಿಹಾರ’ ಮಾಧ್ಯಮಗಳ ಪಾತ್ರದ ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
ಅಭಿವೃದ್ಧಿಯ ಹೆಸರಿನಲ್ಲಿ ಕೃಷಿ ಭೂಮಿ, ಕಾಡು ನಾಶವಾಗುತ್ತಿದೆ. ಕೈಗಾರೀಕರಣ, ನಗರೀಕರಣವೇ ಅಭಿವೃದ್ಧಿ ಎನ್ನುವಂತಾಗಿ ಬಿಟ್ಟಿದೆ. ಹೀಗೆಯೇ ಮುಂದುವರಿದರೆ ನಮ್ಮ ಬದುಕೇ ಮುಂದೆ ನಾಶವಾಗ ಬಹುದು. ಕರಾವಳಿಯು ಸೂಕ್ಷ್ಮ ವಲಯವಾಗಿದೆ. ಇದನ್ನು ಉಳಿಸಿಕೊಳ್ಳದಿದ್ದರೆ ಅಪಾಯಕ್ಕೆ ಸಿಲುಕುತ್ತೇವೆ. ಮೂಲಸೌಕರ್ಯ ಕೊರತೆ ಇಲ್ಲದ ಕಾರಣ ಬೃಹತ್ ಕೈಗಾರಿಕೆಗಳು ಕರಾವಳಿಯ ಮೇಲೆ ಕಣ್ಣಿಟ್ಟಿವೆ. ಪರಿಸರ ಮತ್ತು ಅಭಿವೃದ್ಧಿ ಒಂದೇ ಅಲ್ಲ. ಒಂದೇ ನಾಣ್ಯದ 2 ಮುಖಗಳೂ ಅಲ್ಲ. ಅವುಗಳು ವಿರುದ್ಧ ಮುಖಗಳು ಎಂದು ಶರತ್‌ಚಂದ್ರ ಅವರು ತಿಳಿಸಿದರು.
Related Articles
Advertisement
ಕೋಶಾಧಿಕಾರಿ ರಾಜೇಶ್ ಶೆಟ್ಟಿ ಸ್ವಾಗತಿಸಿದರು. ನಾಗರಾಜ್ ರಾವ್ ಕಾರ್ಯಕ್ರಮ ನಿರೂಪಿಸಿದರು. “ಕರಾವಳಿ ಅಭಿವೃದ್ಧಿ ಸಮಸ್ಯೆಗಳ ಕುರಿತು ಮಾಧ್ಯಮಗಳ ಪಾತ್ರ’ ಮತ್ತು “ಮತೊÕéàದ್ಯಮ ಸಮಸ್ಯೆ- ಸವಾಲು’ ಇವುಗಳು ಕುರಿತು ಹಿರಿಯ ಪತ್ರಕರ್ತರಿಂದ ವಿಷಯ ಮಂಡನೆ ನಡೆಯಿತು. ಉಡುಪಿಯ ಮಾಧ್ಯಮದ ಸದಸ್ಯರಿಂದ “ನಳ ಕಾರ್ಕೋಟಕ’ ಯಕ್ಷಗಾನ ಮತ್ತು ಸೆಕೆಂಡ್‌ಹ್ಯಾಂಡ್ ಸದಾಶಿವ ನಾಟಕ ಪ್ರದರ್ಶನಗೊಂಡಿತು.
ನೈಸರ್ಗಿಕ, ಸಾಮಾಜಿಕ ಸಮಸ್ಯೆ: ಡಿಸಿಜಿಲ್ಲಾಧಿಕಾರಿ ಟಿ. ವೆಂಕಟೇಶ್ ಅವರು ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿ, ಕರಾವಳಿಯಲ್ಲಿ ನೈಸರ್ಗಿಕವಾಗಿ ಕಡಲ್ಕೊರೆತ, ಮತ್ಸé ಸಂಪತ್ತು ನಾಶದ ಸಮಸ್ಯೆ ಇದ್ದರೆ ಸಾಮಾಜಿಕವಾಗಿ ವಲಸೆ ಕಾರ್ಮಿಕರಿಗೆ ಶಿಕ್ಷಣ, ವಸತಿ ಸಮಸ್ಯೆ ಇದೆ. ಇದನ್ನು ಮಾಧ್ಯಮಗಳು ಬಿತ್ತರಿಸಬೇಕು. ಕೆಟ್ಟ ವಿಚಾರಗಳಿಗೆ ಮಾಧ್ಯಮಗಳು ಆದ್ಯತೆಯನ್ನು ನೀಡದೆ ಸಮಾಜಮುಖೀ, ಅಭಿವೃದ್ಧಿಪರ ಚಿಂತನೆಯೊಂದಿಗೆ ಕೆಲಸ ಮಾಡಬೇಕು ಎಂದು ಹೇಳಿದರು. ಮಹಿಳಾ ಪತ್ರಕರ್ತರ ಸಮಾವೇಶ: ಸಿದ್ಧರಾಜು
ರಾಜ್ಯ ಮಾಧ್ಯಮ ಅಕಾಡೆಮಿ ಅಧ್ಯಕ್ಷ ಎಂ. ಸಿದ್ಧರಾಜು ಅವರು ಮಾತನಾಡಿ, ಮಹಿಳಾ ಪತ್ರಕರ್ತರ ರಾಜ್ಯಮಟ್ಟದ ಸಮಾವೇಶವನ್ನು ವಿಜಯಪುರದಲ್ಲಿ ನಡೆಸಲು ಚಿಂತಿಸಲಾಗಿದೆ. ಸ್ನಾತಕೋತ್ತರ ಪತ್ರಿಕೋದ್ಯಮದ ಆಯ್ದ ವಿದ್ಯಾರ್ಥಿಗಳಿಗೆ ರಾಜ್ಯಮಟ್ಟದ ಪ್ರಮುಖ ಪತ್ರಿಕೆಗಳಲ್ಲಿ ತರಬೇತಿ ನೀಡುವ ಕುರಿತಾಗಿ 10 ತಿಂಗಳು ತಲಾ 10,000 ರೂ. ಶಿಷ್ಯವೇತನ ನೀಡಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.