Advertisement

Maharastra: ಹೊತ್ತಿ ಉರಿಯುತ್ತಿದ್ದ ಬಸ್ಸಿನ ಕಿಟಕಿಯ ಗಾಜು ಒಡೆದು ನಾನು ಪಾರಾದೆ, ಆದರೆ…

02:13 PM Jul 01, 2023 | Team Udayavani |

ಮಹಾರಾಷ್ಟ್ರ: ಮಹಾರಾಷ್ಟ್ರದ ಬುಲ್ಧಾನಾ ಜಿಲ್ಲೆಯಲ್ಲಿ ಶನಿವಾರ ಮುಂಜಾನೆ 25 ಪ್ರಯಾಣಿಕರ ಸಾವಿಗೆ ಕಾರಣವಾದ ದುರದೃಷ್ಟಕರ ಬಸ್ಸಿನಲ್ಲಿ ಬದುಕುಳಿದ ಪ್ರಯಾಣಿಕನೊಬ್ಬ ಅಪಘಾತದ ನಡೆದ ಸಂದರ್ಭವನ್ನು ವಿವರಿಸಿದ್ದಾನೆ.

Advertisement

ಮಹಾರಾಷ್ಟ್ರದ ಬುಲ್ಧಾನಾದ ಸಿಂಧಖೇಡ್ರಾಜ ಬಳಿ ಸಮೃದ್ಧಿ ಎಕ್ಸ್‌ಪ್ರೆಸ್‌ವೇಯಲ್ಲಿ ನಾಗ್ಪುರದಿಂದ ಪುಣೆಗೆ ತೆರಳುತ್ತಿದ್ದ ಖಾಸಗಿ ಪ್ರಯಾಣಿಕರ ಬಸ್ಸೊಂದು ಮಧ್ಯರಾತ್ರಿ 1:30 ರ ಸುಮಾರಿಗೆ ಬಸ್ಸಿನ ಟಯರ್ ಸ್ಪೋಟಗೊಂಡು ಡಿವೈಡರ್ ಗೆ ಡಿಕ್ಕಿ ಹೊಡೆದು ಬಸ್ಸಿಗೆ ಬೆಂಕಿ ಹೊತ್ತಿಕೊಂಡ ಘಟನೆಯಲ್ಲಿ ಸುಮಾರು 26 ಮಂದಿ ಸಜೀವ ದಹನಗೊಂಡ ಘಟನೆ ನಡೆದಿದೆ ಈ ವೇಳೆ ಬಸ್ಸಿನಲ್ಲಿ 33 ಮಂದಿ ಪ್ರಯಾಣಿಸುತ್ತಿದ್ದರು ಇದರಲ್ಲಿ ಬದುಕುಳಿದ ಓರ್ವ ಪ್ರಯಾಣಿಕ ತಾನು ಬದುಕಿ ಬಂದ ಘಟನೆಯನ್ನು ವಿವರಿಸಿದ್ದಾರೆ.

ಮಧ್ಯ ರಾತ್ರಿ 1:30 ರ ಸುಮಾರಿಗೆ ಪ್ರಯಾಣಿಕರೆಲ್ಲರೂ ಸುಖ ನಿದ್ರೆಯಲ್ಲಿ ಇದ್ದ ಸಂದರ್ಭ ಬಸ್ಸಿನ ಟಯರ್ ಪಂಚರ್ ಆಗಿ ನಿಯಂತ್ರಣ ತಪ್ಪಿದ ಬಸ್ಸು ಡಿವೈಡರ್ ಗೆ ಡಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡಿದೆ ಈ ವೇಳೆ ನಾನು ಮತ್ತು ನನ್ನ ಪಕ್ಕದಲ್ಲಿ ಕುಳಿತ್ತಿದ್ದ ಪ್ರಯಾಣಿಕ ಕಿಟಕಿಯ ಗಾಜನ್ನು ಒಡೆಯುವ ಪ್ರಯತ್ನ ಮಾಡಿದೆವು ಆದರೆ ಅದು ಸಾಧ್ಯವಾಗಲಿಲ್ಲ ಬಳಿಕ ಬಸ್ಸಿನ ಹಿಂಬದಿಗೆ ತೆರಳಿ ಹಿಂಬದಿಯ ಗಾಜನ್ನು ಒಡೆದು ಹೊರ ಜಿಗಿದೆವು ಆ ಬಳಿಕ ಬೆಂಕಿ ಮತ್ತೆ ಇಬ್ಬರು ಬಸ್ಸಿನಿಂದ ಜಿಗಿದು ಜೀವ ಉಳಿಸಿಕೊಂಡೆವು, ಅಷ್ಟೋತ್ತಿಗಾಗಲೇ ಬಸ್ಸಿಗೆ ಹತ್ತಿದ ಬೆಂಕಿಯ ಪ್ರಮಾಣ ಮತ್ತಷ್ಟು ಹೆಚ್ಚಾಗಿದೆ.

ಸಹಾಯಕ್ಕೆ ಬಾರದ ಹೆದ್ದಾರಿ ಹೋಕರು :
ಬಸ್ಸಿನಿಂದ ಜಿಗಿದು ಹೆದ್ದಾರಿ ಬದಿಯಲ್ಲಿ ನಿಂತು ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಅನೇಕ ವಾಹನಗಳನ್ನು ಸಹಾಯಕ್ಕೆ ಕೈಚಾಚಿದೆವು ಆದರೆ ಯಾರೊಬ್ಬರೂ ಸಹಾಯಕ್ಕೆ ಬರಲಿಲ್ಲ ಅಷ್ಟು ಮಾತ್ರವಲ್ಲದೆ ಹೆದ್ದಾರಿಯಲ್ಲಿ ಬಸ್ಸು ಹೊತ್ತಿಕೊಂಡು ಉರಿಯುತ್ತಿದ್ದರೂ ವಾಹನ ಸವಾರರು ದೂರದಿಂದಲೇ ನೋಡಿಕೊಂಡು ಹೋಗುತಿದ್ದರು ಆದರೆ ಯಾರೊಬ್ಬರೂ ಸಹಾಯಕ್ಕೆ ಬರಲಿಲ್ಲ.

ಸ್ಥಳಕ್ಕೆ ದೌಡಾಯಿಸಿದ್ದ ಪೊಲೀಸರು ಅಗ್ನಿಶಾಮಕ ಸಿಬ್ಬಂದಿಗಳು:
ಘಟನೆ ನಡೆದು ಕೆಲ ಹೊತ್ತು ಆಗುವಷ್ಟರಲ್ಲಿ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿಗಳು ಘಟನಾ ಸ್ಥಳಕ್ಕೆ ದೌಡಾಯಿಸಿದ್ದಾರೆ ಆದರೆ ಅಷ್ಟೋತ್ತಿಗಾಗಲೇ ಬೆಂಕಿಯ ಕೆನ್ನಾಲಿಗೆ ಇಡೀ ಬಸ್ಸನ್ನೇ ಆವರಿಸಿ ಬಿಟ್ಟಿದೆ ಕೆಲವೊಂದಷ್ಟು ಮಂದಿ ಬಸ್ಸಿನಿಂದ ಹೊರ ಬರಲು ಪ್ರಯತ್ನಿಸಿದ ವೇಳೆ ನೂಕು ನುಗ್ಗಲು ಉಂಟಾಗಿ ಬಸ್ಸಿನೊಳಗೆ ಸಿಲುಕಿಕೊಂಡು ಸಜೀವ ದಹನಗೊಂಡಿದ್ದಾರೆ, ಕಣ್ಣೆದುರಿಗೆ ಪ್ರಯಾಣಿಕರು ಸಜೀವ ದಹನವಾಗುದನ್ನು ಅರಗಿಸಿಕೊಳ್ಳಲೂ ಸಾಧ್ಯವಾಗುತ್ತಿಲ್ಲ ಎಂದು ಪ್ರಯಾಣಿಕ ಹೇಳಿಕೊಂಡಿದ್ದಾನೆ.

Advertisement

ಇದನ್ನೂ ಓದಿ: ತಡವಾಗಿ ಬಂದ ಬಸ್ :ರಸ್ತೆ ಮಧ್ಯೆಯೇ ಬಸ್ ನಿಲ್ಲಿಸಿ ಚಾಲಕನಿಗೆ ಮಹಿಳೆಯರ ಕ್ಲಾಸ್…

Advertisement

Udayavani is now on Telegram. Click here to join our channel and stay updated with the latest news.

Next