Advertisement

ನನಗೆ ಝಿರೋ ಟ್ರಾಫಿಕ್‌ ವ್ಯವಸ್ಥೆ ಬೇಡ : ಗೃಹ ಸಚಿವ ಎಂಬಿಪಿ ಸೂಚನೆ 

11:12 AM Jan 04, 2019 | Team Udayavani |

ಬೆಂಗಳೂರು: ನನಗೆ ಝಿರೋ ಟ್ರಾಫಿಕ್‌ ವ್ಯವಸ್ಥೆ ಕಲ್ಪಿಸುವ ಮೂಲಕ ಸಾರ್ವಜನಿಕರಿಗೆ ತೊಂದರೆ ಕೊಡಬೇಡಿ ಎಂದು ಪೊಲೀಸ್‌ ಅಧಿಕಾರಿಗಳಿಗೆ ಗೃಹ ಸಚಿವ ಎಂ.ಬಿ.ಪಾಟೀಲ್‌ ಅವರು ಸೂಚನೆ ನೀಡಿದ್ದಾರೆ.

Advertisement

ನಾನು ಸಾರ್ವಜನಿಕರಂತೆಯೇ ಸಂಚಾರಿ ನಿಯಮಗಳನ್ನು ಪಾಲಿಸುತ್ತೇನೆ, ನನ್ನ ನಿವಾಸದ ಬಳಿ ಅನಾವಶ್ಯಕ ಭದ್ರತಾ ಸಿಬಂದಿ ನಿಯೋಜಿಸುವುದು ಬೇಡ ಎಂದು ಪೊಲೀಸ್‌ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಈ ಬಗ್ಗೆ ಗೃಹ ಇಲಾಖೆಯ ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿ ಕಮಲ್‌ ಪಂಥ್‌ ಅವರು ಎಲ್ಲಾ ಜಿಲ್ಲೆಗಳ ಎಸ್‌ಪಿಗಳಿಗೆ ಸಚಿವರು ಆಗಮಿಸುವ ವೇಳೆ ಝಿರೋ ಟ್ರಾಫಿಕ್‌ ವ್ಯವಸ್ಥೆ  ಮಾಡದಂತೆ ಸೂಚನೆ ನೀಡಿದ್ದಾರೆ.

ಎಂಬಿಪಿ ಅವರ ನಡೆ ಸಾರ್ವಜನಿಕ ವಲಯದಲ್ಲಿ ಪ್ರಶಂಸೆಗೆ ಪಾತ್ರವಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next