Advertisement

ಪ್ರೀತಿಸಿದೆ, ಪ್ರೇಮಿಸಿದೆ ಏತಕೋ ನಾನರಿಯೇ…

07:19 PM Sep 30, 2019 | mahesh |

ಪ್ರೀತಿ ಅಂದರೆ ಏನು?
ಇಷ್ಟು ಕಾಲ, ಪ್ರೀತಿಸುವವರ ಜೊತೆಗೂಡಿ ಬಾಳುವುದೇ ಪ್ರೀತಿ ಅಂದುಕೊಂಡಿದ್ದೆ. ಆದರೆ, ಈಗ ತಿಳಿಯುತ್ತಿದೆ: ಪ್ರೀತಿ ಎಂದರೆ, ನಾವು ಪ್ರೀತಿಸುವವರ ಜೊತೆಗೂಡಿ ಬದುಕುವುದಲ್ಲ, ಅವರ ಜೊತೆ ಬಿಟ್ಟು ಬೇರೆಯವರ ಜೊತೆ ಬಾಳಲಿಕ್ಕೆ ಆಗದಿರುವುದೆಂದು.

Advertisement

ನನಗೆ ತಿಳಿದ ಮಟ್ಟಿಗೆ ಪ್ರೀತಿ ಎಂದರೆ ಸಂತೋಷ ಅಥವಾ ದುಃಖ. ಅದು ಹೇಗೆಂದರೆ, ನಾನು ಒಬ್ಬಳು ಹುಡುಗಿಯನ್ನು ಪ್ರೀತಿಸಿದ್ದೆ. ಆದರೆ ನನಗಾಗ ಸರಿಯಾಗಿ ಗೊತ್ತಿರಲಿಲ್ಲ ನನ್ನದು ಪ್ರೀತಿಯೋ? ಆಕರ್ಷಣೆಯೋ? ಎಂದು! ಅವಳು ನನ್ನ ಜೊತೆ ಮಾತನಾಡುತ್ತಿದ್ದಾಗ ಪ್ರಪಂಚವನ್ನೇ ಜಯಿಸಿದಷ್ಟು ಸಂತೋಷವಾಗುತ್ತಿತ್ತು.

ನಂತರ ಅವಳ ಮೇಲಿನ ನನ್ನ ಭಾವನೆಗಳನ್ನು ತಾಳಲಾರದೇ, ಧೈರ್ಯ ಮಾಡಿ ಒಂದು ದಿನ ಅವಳಿಗೆ ನನ್ನ ಅಭಿಪ್ರಾಯವನ್ನು ತಿಳಿಸಿಯೇ ಬಿಟ್ಟೇ.

ಅವಳು ಮುಲಾಜಿಲ್ಲದೆ ನನ್ನನ್ನು ತಿರಸ್ಕರಿಸಿದಳು. ಆಗ, ಸತ್ತೇ ಹೋಗಬೇಕೆಂಬ ನಿರ್ಧಾರಕ್ಕೆ ಬರುವಷ್ಟು ದುಃಖ ಅನುಭವಿಸಿದೆ.

ಈ ಪ್ರಸಂಗದ ಬಳಿಕ ನನಗೆ ಅರ್ಥವಾದುದೇನೆಂದರೆ, ನಾವು ಪ್ರೀತಿಸಿದವರು ನಮ್ಮನ್ನು ಒಪ್ಪಿಕೊಂಡರೇ ಜೀವನ ಪೂರ್ತಿ ಸಂತೋಷವಾಗಿರಬಹುದು. ಹಾಗೆಯೇ, ನಮ್ಮನ್ನು ತಿರಸ್ಕರಿಸಿದರೆ, ಜೀವನ ಪೂರ್ತಿ ಅದೇ ನೋವಿನಲ್ಲಿ ಬದುಕಬೇಕಾಗುತ್ತದೆ. ಆ ನೋವನ್ನು ಅನುಭವಿಸುವಷ್ಟು ದೃಢ ಮನಸ್ಸು ನಮ್ಮದಾಗಿರಬೇಕಷ್ಟೇ.

Advertisement

ನಾನು ಪ್ರೀತಿಸಿದವಳು, ನನ್ನನ್ನು ತಿರಸ್ಕರಿಸಿ ನನ್ನ ಜೀವನದ ದುಃಖಕ್ಕೆ ಕಾರಣವಾಗಿರಬಹುದು. ಆದರೆ, ಅವಳ ಜೀವನದ ಸಂತೋಷಕ್ಕೆ ಅಡ್ಡಿಯಾಗಲು ನನಗೆ ಮನಸ್ಸಿಲ್ಲ. ಅವಳು ಎಲ್ಲೇ ಹೇಗೇ ಇರಲಿ,ಯಾವಾಗಲೂ ನಗುನಗುತಿರಲಿ ಅನ್ನುವುದೇ ನನ್ನ ಪ್ರಾರ್ಥನೆ.

ಗಿರೀಶ್‌ ಚಂದ್ರ ವೈ.ಆರ್‌.

Advertisement

Udayavani is now on Telegram. Click here to join our channel and stay updated with the latest news.

Next