ಶಿವಮೊಗ್ಗ: ನಾನು ಡಿ.ಕೆ.ಸುರೇಶ್ ಅವರನ್ನು ಗುಂಡಿಕ್ಕಿ ಕೊಲ್ಲಿ ಎಂದು ಹೇಳಿಲ್ಲ. ಹೊಸ ಕಾನೂನು ತನ್ನಿ ಎಂದಿದ್ದಷ್ಟೆ. ಸದ್ಯ ನನ್ನ ಪುಣ್ಯ ನಾನು ದೇಶದ್ರೋಹಿ ಎಂದು ಯಾರು ಹೇಳಿಲ್ಲ ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದರು.
ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಗೃಹ ಸಚಿವರೇ ಈ ಬಗ್ಗೆ ಗಮನಹರಿಸಿ ಕೇಸ್ ದಾಖಲಿಸಿ. ನಾನು ಕೇಂದ್ರ ಗೃಹಮಂತ್ರಿಗೆ ನಾನು ಪತ್ರ ಬರೆಯುತ್ತೇನೆ. ಗುಂಡಿಕ್ಕಿ ಕೊಲ್ಲುವ ಕಾನೂನು ತನ್ನಿಯೆಂದು ನಾನು ಪತ್ರ ಬರೆಯುತ್ತೇನೆ. ಪ್ರಧಾನಿ ಹಾಗೂ ಗೃಹ ಸಚಿವರಿಗೆ ಪತ್ರ ಬರೆಯುತ್ತೇನೆ. ಕೇಂದ್ರಕ್ಕೆ ಪತ್ರ ಬರೆಯಲು ಪರಮೇಶ್ವರ್ ಹೇಳಿದ್ದಾರೆ, ಹಾಗಾಗಿ ಕೇಂದ್ರಕ್ಕೆ ನಾನು ಪತ್ರ ಬರೆಯುತ್ತೇನೆ ಎಂದರು.
ನೋಟಿಸ್ ಜಾರಿ: ದಾವಣಗೆರೆಯಲ್ಲಿ ನಡೆದಿದ್ದ ಬಿಜೆಪಿ ಜಿಲ್ಲಾಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ರಾಷ್ಟ್ರ ದ್ರೋಹಿಗಳ ಗುಂಡಿಕ್ಕಿ ಕೊಲ್ಲುವ ಕಾನೊನು ತರುವಂತೆ ಹೇಳಿಕೆ ನೀಡಿದ್ದ ಈಶ್ವರಪ್ಪ ವಿರುದ್ಧ ದಾವಣಗೆರೆಯಲ್ಲಿ ಪ್ರಕರಣ ದಾಖಲಾಗಿತ್ತು. ಹೀಗಾಗಿ ಇಂದು ದಾವಣಗೆರೆ ಪೊಲೀಸರಿಂದ ಈಶ್ವರಪ್ಪ ಅವರಿಗೆ ನೋಟಿಸ್ ಜಾರಿ ಮಾಡಿದ್ದಾರೆ.
ಶಿವಮೊಗ್ಗದ ಈಶ್ವರಪ್ಪ ಅವರ ನಿವಾಸಕ್ಕೆ ಬಂದಿದ್ದ ದಾವಣಗೆರೆ ಬಡಾವಣೆ ಪೊಲೀಸರು ನೋಟಿಸ್ ನೀಡಿದ್ದಾರೆ.
ಈ ಬಗ್ಗೆ ಮಾತನಾಡಿದ ಈಶ್ವರಪ್ಪ, ದಾವಣಗೆರೆ ಪೊಲೀಸರು ನೋಟಿಸ್ ಕೊಟ್ಟಿರುವುದು ಹೌದು. ಎಫ್ ಐಆರ್ ಹಾಕಿರುವುದು ಸತ್ಯ. ನನ್ನ ಮೇಲೆ ನೂರು ಎಫ್ಐಆರ್ ಹಾಕಿದರೂ ಕೂಡಾ ಹೆದರುವುದಿಲ್ಲ. ಎಫ್ಐಆರ್ ಹಾಕಿದರೂ ನಾನು ಈವರೆಗೂ ಒಂದು ರೂಪಾಯಿ ಫೈನ್ ಕಟ್ಟಿಲ್ಲ ಎಂದರು.
ಪ್ರಿಯಾಂಕಾ ಖರ್ಗೆ ವಿರುದ್ಧ ಕಿಡಿಕಾರಿದ ಈಶ್ವರಪ್ಪ ಅವರು, ಮಲ್ಲಿಕಾರ್ಜುನ ಖರ್ಗೆ ಹೊಟ್ಟೆಯೊಳಗೆ ಇಂತಹ ಕೆಟ್ಟ ಹುಳ ಹುಟ್ಟಿದೆ. ಅವನಿಗೆ ತಳಬುಡ ಗೊತ್ತಿಲ್ಲ. ಏನೇನು ಮಾತಾನಾಡುತ್ತಾನೆ. ಪ್ರಿಯಾಂಕಾ ಖರ್ಗೆಯನ್ನು ಕಾಂಗ್ರೆಸ್ ನಾಯಕನೆಂದು ಕರೆಯಲು ಇಷ್ಟಪಡುವುದಿಲ್ಲ ಎಂದರು.