Advertisement

ಸತ್ತರೂ ಲಾಬಿ ಮಾಡಲ್ಲ, ಮಂತ್ರಿ ಆಗು ಅಂದ್ರೆ ಆಗುತ್ತೇನೆ: ಹೊರಟ್ಟಿ

06:00 AM Nov 22, 2018 | |

ಶಿರಸಿ: “ನಾನು ಸತ್ತರೂ ಲಾಬಿ ಮಾಡುವುದಿಲ್ಲ. ನನ್ನ ಸಾಮರ್ಥ್ಯ ಏನು ಅಂತ ಸರ್ಕಾರಕ್ಕೆ ಗೊತ್ತಿದೆ. ಲಾಬಿ ಮಾಡುವ ಅಗತ್ಯವೇ ಇಲ್ಲ. ಸಭಾಪತಿ ಆಗು ಅಂದರು ಆದೆ, ಮಂತ್ರಿ ಆಗು ಅಂದರೆ ವಹಿಸಿಕೊಳ್ಳುವೆ. ಯಾವುದೂ ಬೇಡ ಎಂದರೆ ಎಂಎಲ್‌ಸಿ ಆಗಿರುವೆ’ ಎಂದು ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.

Advertisement

ನಗರದಲ್ಲಿ ಬುಧವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, “ಇಂತದ್ದೇ ಸ್ಥಾನ ಕೊಡಿ ಎಂದು ಯಾರಿಗೂ ಹೇಳುವುದಿಲ್ಲ. ಸರ್ಕಾರದಲ್ಲಿ ಜಂಟಿಯಾಗಿ ನಿರ್ವಹಿಸುವ ಜವಾಬ್ದಾರಿ ಇದೆ. ಅವರದ್ದೇ ಆದ ಸಮಸ್ಯೆಗಳೂ ಇವೆ. ಅವಕಾಶವಾದಿಯೂ ನಾನಲ್ಲ, ಅಂತಹ ಆಸೇನೂ ಇಲ್ಲ. ಉತ್ತರ ಕರ್ನಾಟಕಕ್ಕೆ ಆದ್ಯತೆ ಕೊಡಬೇಕು. ಇಲ್ಲಿ 96 ಶಾಸಕರು ಇದ್ದಾರೆ ಎಂದರು.

“ಶಿಕ್ಷಣ ಇಲಾಖೆಯ ಸಮಸ್ಯೆ ಇತ್ಯರ್ಥ ಮಾಡುವುದು ದೊಡ್ಡ ಕೆಲಸ ಅಲ್ಲ. ಹೆಚ್ಚುವರಿ ಶಿಕ್ಷಕರು, ಸರ್ಕಾರಿ ಶಾಲೆ ದಾಖಲಾತಿ, ವರ್ಗಾವಣೆ ತಲೆ ಬೇನೆ, ಮಕ್ಕಳಿಗೆ ಪಠ್ಯ ಪೂರೈಕೆ, ಸೈಕಲ್‌ ವಿತರಣೆ ಆಗದೆ ಇರುವುದು ಸೇರಿದಂತೆ ಹಲವು ಸಮಸ್ಯೆಗಳಿವೆ. 2007ರ ನಂತರ ಪ್ರತಿವರ್ಷ ಒಂದಲ್ಲ ಒಂದು ಸಮಸ್ಯೆ ಬರುತ್ತಿದೆ. ಅಧಿಕಾರಿಗಳೂ ಸಚಿವರ ಬಳಿ ಮಾಹಿತಿ ಕೊಡದೆ ಇರುವುದು ಸಮಸ್ಯೆ ಆಗಬಹುದು. ಏಳನೇ ತರಗತಿಗಳಿರುವ ಶಾಲೆಗೆ ಕಡ್ಡಾಯವಾಗಿ ದೈಹಿಕ ಶಿಕ್ಷಕರು ಇರಬೇಕು. ಕೇರಳ ಮಾದರಿಯಂತೆ ತರಗತಿಗೊಬ್ಬ ಶಿಕ್ಷಕರನ್ನು ನೇಮಕ ಮಾಡಬೇಕು. ಇದಕ್ಕೆ ಇಚ್ಛಾಶಕ್ತಿ ಇರಬೇಕು. ನಾನು ಸಚಿವನಾಗಿದ್ದಾಗ ಮೇ 15ರೊಳಗೆ ಎಲ್ಲವೂ ಲಭ್ಯ ಇರುತ್ತಿತ್ತು. ಶಿಕ್ಷಣಕ್ಕೆ ಸಮಸ್ಯೆ ಆಗುತ್ತಿರಲಿಲ್ಲ. ತನ್ವೀರ್‌ ಸೇಠ್ ಇದ್ದಾಗಲೂ ಸಮಸ್ಯೆ ಇತ್ತು’ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next