Advertisement

‘ಬಿಜೆಪಿ ಸ್ನೇಹಿತರಿಗೆ ಧನ್ಯವಾದಗಳು’: ಬಂಧನದ ಬಳಿಕ ಡಿಕೆಶಿ ಮೊದಲ ಟ್ವೀಟ್

09:39 AM Sep 04, 2019 | Hari Prasad |

ನವದೆಹಲಿ: ಕರ್ನಾಟಕ ಕಾಂಗ್ರೆಸ್ ನ ಪವರ್ ಫುಲ್ ಲೀಡರ್ ಮತ್ತು ಪಕ್ಷದ ಟ್ರಬಲ್ ಶೂಟರ್ ಎಂದೇ ಖ್ಯಾತರಾಗಿದ್ದ ಬಲಿಷ್ಠ ಒಕ್ಕಲಿಗ ನಾಯಕ ಡಿ. ಕೆ. ಶಿವಕುಮಾರ್ ಅವರು ಇಂದು ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೊಳಗಾಗಿದ್ದಾರೆ.

Advertisement

ತೆರಿಗೆ ವಂಚನೆ ಹಾಗೂ ಹವಾಲಾ ಜಾಲದ ಮೂಲಕ ಹಣ ಸಾಗಾಟದಂತಹ ಗಂಭೀರ ಪ್ರಕರಣಗಳು ಡಿಕೆಶಿ ಅವರ ಮೇಲೆ ದಾಖಲಾಗಿದೆ. ಕಳೆದ ನಾಲ್ಕು ದಿನಗಳಿಂದ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಶಿವಕುಮಾರ್ ಅವರನ್ನು ವಶಕ್ಕೆ ಪಡೆದುಕೊಂಡು ತೀವ್ರ ವಿಚಾರಣೆ ನಡೆಸಿದ್ದರು. ಮತ್ತು ಅವರು ವಿಚಾರಣೆಗೆ ಸರಿಯಾಗಿ ಸಹಕರಿಸುತ್ತಿಲ್ಲ ಎಂಬ ಕಾರಣ ನೀಡಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಶಿವಕುಮಾರ್ ಅವರನ್ನು ಇಂದು ರಾತ್ರಿ ಬಂಧಿಸಿದ್ದಾರೆ.

ತನ್ನ ಬಂಧನದ ಬಳಿಕ ಮೊದಲ ಟ್ವೀಟ್ ಮಾಡಿದ ಕಾಂಗ್ರೆಸ್ ಮುಖಂಡ ಡಿ ಕೆ ಶಿವಕುಮಾರ್ ಅವರು ‘ನನ್ನನ್ನು ಬಂಧಿಸುವ ಬೃಹತ್ ಯೋಜನೆಯಲ್ಲಿ ಕೊನೆಗೂ ಯಶಸ್ವಿಯಾದ ನನ್ನಲ್ಲಾ ಬಿಜೆಪಿ ಸ್ನೇಹಿತರಿಗೆ ಧನ್ಯವಾದಗಳು. ನನ್ನ ಮೇಲೆ ಹಾಕಲಾಗಿರುವ ಐಟಿ ಹಾಗೂ ಇಡಿ ಪ್ರಕರಣಗಳು ಸಂಪೂರ್ಣವಾಗಿ ರಾಜಕೀಯ ಪ್ರೇರಿತವಾಗಿರುವಂತದ್ದು ಹಾಗೂ ಬಿಜೆಪಿಯ ರಾಜಕೀಯ ಸೇಡು ಮತ್ತು ದ್ವೇಷದ ಬಲಿಪಶು ನಾನಾಗಿದ್ದೇನೆ’ ಎಂದು ಅವರು ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.

‘ನಾನೆನೂ ಕಾನೂನು ಬಾಹಿರವಾಗಿರುವ ಕೆಲಸವನ್ನು ಮಾಡಿಲ್ಲದ ಕಾರಣ ನನ್ನ ಬೆಂಬಲಿಗರು ಮತ್ತು ಪಕ್ಷದ ಕಾರ್ಯಕರ್ತರು ಎದೆಗುಂದಬಾರದು. ನಾನು ದೇವರ ಮೇಲೆ ಹಾಗೂ ಈ ನೆಲದ ಕಾನೂನಿನ ಮೇಲೆ ಪೂರ್ತಿಯಾದ ನಂಬಿಕೆಯನ್ನು ಇರಿಸಿದ್ದೇನೆ. ಮತ್ತು ನನಗೆ ನ್ಯಾಯ ಸಿಗುತ್ತದೆ ಎಂಬ ಭರವಸೆ ಇದೆ ಮಾತ್ರವಲ್ಲದೇ ಈ ರಾಜಕೀಯ ಸಂಚನ್ನು ಗೆದ್ದು ಬರುತ್ತೇನೆ ಎಂಬ ವಿಶ್ವಾಸ ನನಗಿದೆ’ ಎಂದು ಶಿವಕುಮಾರ್ ಅವರು ಇನ್ನೊಂದು ಟ್ವೀಟ್ ನಲ್ಲಿ ಬರೆದುಕೊಂಡಿದ್ದಾರೆ.

Advertisement

I appeal to my party cadre, supporters and well-wishers to not be disheartened as I have done nothing illegal.

I have full faith in God & in our country’s Judiciary and am very confident that I will emerge victorious both legally and politically against this vendetta politics.

— DK Shivakumar (@DKShivakumar) September 3, 2019

Advertisement

Udayavani is now on Telegram. Click here to join our channel and stay updated with the latest news.

Next