Advertisement
ಸುದ್ದಿಗಾರರೊಂದಿಗೆ ಮಾತನಾಡಿ, ಪಕ್ಷದ ಸಾಮಾನ್ಯ ಕಾರ್ಯಕರ್ತಳಾಗಿ ಸಂಘಟನೆಯಲ್ಲಿ ತೊಡಗಿಕೊಂಡಿದ್ದೇನೆ. ಹಲವು ವರ್ಷಗಳ ಕಾಲ ಪಕ್ಷಕ್ಕಾಗಿ ದುಡಿದಿದ್ದೇನೆ. ಇದ್ದಕ್ಕಿದ್ದಂತೆ ಬಂದು ಅಧಿಕಾರ ಪಡೆದಿಲ್ಲ. ಮಹಿಳಾ ಶಾಸಕರಲ್ಲಿ ಹಿರಿಯಳಾಗಿರುವುದರಿಂದ ಸಚಿವ ಸ್ಥಾನ ನೀಡಿದ್ದಾರೆ. ಪಕ್ಷದ ಹಿರಿಯ ಮುಖಂಡರು, ಕಾರ್ಯಕರ್ತರ ಆಶೀರ್ವಾದದಿಂದ ಈ ಅವಕಾಶ ದೊರೆತಿದೆ. ಪಕ್ಷಕ್ಕೆ ಪ್ರಾಮಾಣಿಕವಾಗಿದ್ದು, ಪಕ್ಷ ಹೇಳಿದಂತೆಯೇ ಬದ್ಧಳಾಗಿರುವುದರಿಂದ ಸಚಿವ ಸ್ಥಾನದಿಂದ ಕೈಬಿಡುತ್ತಾರೆ ಎನ್ನುವುದು ಕೇವಲ ವದಂತಿ. ಮನೆಯ ಜಗಳ ಮನೆಯ ಹಿರಿಯರೇ ಕುಳಿತು ಬಗೆಹರಿಸುತ್ತಾರೆ ಎಂದರು.
Advertisement
ನನ್ನನ್ನು ಸಚಿವ ಸ್ಥಾನದಿಂದ ಕೈ ಬಿಡಲು ಸಾಧ್ಯವಿಲ್ಲ: ಜೊಲ್ಲೆ
10:06 PM Jun 01, 2020 | Sriram |
Advertisement
Udayavani is now on Telegram. Click here to join our channel and stay updated with the latest news.