Advertisement

ನನ್ನ ತಲೆ ಕತ್ತರಿಸಿಬಿಡಿ: ಸಿಎಂ ಮಮತಾ ದೀದಿ ಆವಾಜ್‌

12:52 AM May 25, 2020 | Sriram |

ಕೋಲ್ಕತಾ: ಪಶ್ಚಿಮ ಬಂಗಾಳದಲ್ಲಿ ಅಂಫಾನ್‌ ಚಂಡಮಾರುತ ಸೃಷ್ಟಿಸಿರುವ ಅಲ್ಲೋಲ ಕಲ್ಲೋಲಗಳನ್ನು ಸರಿಪಡಿಸಲು ಇನ್ನೂ ಕೆಲವು ದಿನಗಳು ಬೇಕಾಗುತ್ತದೆ. ಅದಕ್ಕಾಗಿ ನಾನೂ ಶತಾಯಗತಾಯ ಪ್ರಯತ್ನಿಸುತ್ತಿದ್ದೇನೆ. ಆದರೆ, ನನ್ನ ಕೆಲಸದ ಬಗ್ಗೆ ನಿಮಗೆ ಅಸಮಾಧಾನವಿದ್ದರೆ ನನ್ನ ತಲೆಯನ್ನು ಕತ್ತರಿಸಿಬಿಡಿ ಎಂದು ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ, ರಾಜ್ಯದ ಜನತೆಯನ್ನುದ್ದೇಶಿಸಿ ಹೇಳಿದ್ದಾರೆ. ಪರಿಹಾರ ಕಾರ್ಯಗಳು ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಕೋಲ್ಕತಾದಲ್ಲಿ ಅನೇಕ ಸಾರ್ವಜನಿಕರು ಬೀದಿಗಿಳಿದು ಪ್ರತಿಭಟನೆ ನಡೆಸಿರುವ ಹಿನ್ನೆಲೆಯಲ್ಲಿ ಹೀಗೆ ಹೇಳಿದ್ದಾರೆ.

Advertisement

ಸೇವೆ ವ್ಯತ್ಯಯಕ್ಕೆ ಕಂಗೆಟ್ಟ ಜನತೆ: ವಿನಾಶಕಾರಿ ಅಂಫಾನ್‌ ಚಂಡ ಮಾರುತ ಸೃಷ್ಟಿಸಿರುವ ಭೀಕರ ಹಾನಿಯಿಂದ ಪಶ್ಚಿಮ ಬಂಗಾಳ ಜನರು ಜೀವನ ಅಸ್ತವ್ಯಸ್ತವಾಗಿದೆ. ಸೇನಾ ತಂಡಗಳು, ರಾಷ್ಟ್ರೀಯ ವಿಪತ್ತು ನಿರ್ವಹಣೆ ಪಡೆಗಳು (ಎನ್‌ಡಿಆರ್‌ಎಫ್), ಪೊಲೀಸರು, ಅರಣ್ಯ ಸಿಬ್ಬಂದಿ, ಸ್ವಯಂ ಸೇವಕರು ನಿರಂತರವಾಗಿ ಪರಿಹಾರ ಕಾರ್ಯಾ ಚರಣೆಯಲ್ಲಿ ತೊಡಗಿದ್ದಾರೆ. ಕೋಲ್ಕತಾ ಸೇರಿದಂತೆ ಉತ್ತರ ಹಾಗೂ ದಕ್ಷಿಣ 25 ಪರಗಣ ಜಿಲ್ಲೆಗಳು ಚಂಡಮಾರುತಕ್ಕೆ ತತ್ತರಿಸಿವೆ. ರಸ್ತೆ ಸಂಚಾರ, ಜನಜೀವನ ಅಸ್ತವ್ಯಸ್ತವಾಗಿವೆ.

 

Advertisement

Udayavani is now on Telegram. Click here to join our channel and stay updated with the latest news.

Next