Advertisement

ಐ ಬೋರ್ಡ್ ಡ್ರೋಣ್ ಹುಡುಕಾಟದ ವರದಿ; ಟ್ರಕ್ ನದಿಯಲ್ಲಿ ಇರುವುದು ಖಚಿತ; ಜಿಲ್ಲಾಧಿಕಾರಿ

06:03 PM Jul 27, 2024 | Team Udayavani |

ಕಾರವಾರ: ಐ ಬೋರ್ಡ್ ಡ್ರೋಣ್ ಹುಡುಕಾಟ ಹಾಗೂ ನೇವಿಯ ಸೋನಾರ್ ಇಮೇಜ್ , ಮ್ಯಾಗ್ನೆಡ್ ಲೈನರ್  ವರದಿಗಳನ್ನು ಪುಣೆಯ ಸಂಸ್ಥೆಯೊಂದರ ತಜ್ಞರು ವಿಶ್ಲೇಷಣೆ ಮಾಡಿ ವರದಿ ಸಲ್ಲಿಸಿದ್ದಾರೆ. ಟ್ರಕ್ ನದಿಯಲ್ಲಿ ಇರುವುದು ಖಚಿತವಾಗಿದೆ ಎಂದು ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಹೇಳಿದರು.

Advertisement

ಶಿರೂರುನಲ್ಲಿ ಮಾಧ್ಯಮಗಳ ಜೊತೆ‌ ಮಾತನಾಡಿದ ಅವರು, ದೆಹಲಿಯ ಕ್ವಿಕ್ ಪೇ ಪ್ರೈವೇಟ್ ಲಿಮಿಟೆಡ್ ನವರು ಗಂಗಾವಳಿ ನದಿಯಲ್ಲಿನ ಅವಶೇಷಗಳ ಬಗ್ಗೆ ಅಡ್ವಾನ್ಸ್ಡ್ ಐ ಬೋರ್ಡ್ ಡ್ರೋಣ್ ಬಳಸಿ ಮಾಡಿದ ಅಧ್ಯಯನದ ವರದಿ ಬಂದಿದೆ ಎಂದಿದ್ದಾರೆ.

ಈಗ ನದಿಯಾಳದಲ್ಲಿರುವ ಟ್ರಕ್ ತಲುಪುವುದು ಹೇಗೆ ಎಂಬ ಚಿಂತನೆ ನಡೆದಿದೆ. ನದಿಯಲ್ಲಿ ಬಿದ್ದ ಕಲ್ಲು ಮಣ್ಣಿನ ರಾಶಿ ಪಕ್ಕದಲ್ಲಿ ನಾಲ್ಕು ಅವಶೇಷಗಳಿವೆ . ನದಿಯ ದಡದಿಂದ 132 ಮೀಟರ್ ದೂರದಲ್ಲಿ ಟ್ರಕ್ ಇದೆ. ಅದರಲ್ಲಿ ಅರ್ಜುನ್ ಸಹ ಇರಬಹುದು. 110 ಮೀಟರ್ ದೂರದಲ್ಲಿ ಒಂದು ಮೆಟಲ್ ವಸ್ತು , 65 ಮೀಟರ್ ದೂರದಲ್ಲಿ ಒಂದು ಟ್ಯಾಂಕರ್ ಚಸ್ಸಿ, 165 ಮೀಟರ್ ದೂರದಲ್ಲಿ ಒಂದು ರೇಲಿಂಗ್ ಇದೆ. ಇವುಗಳನ್ನು ಮೇಲೆತ್ತಲು‌ ನದಿಯ ನೀರಿನ ವೇಗ ಅಡ್ಡಿಯಾಗಿದೆ ಎಂದು ಜಿಲ್ಲಾಧಿಕಾರಿ ವಿವರಿಸಿದರು.

ಗೋವಾದಿಂದ ಪ್ಯಾಂಟೋನ್ ಬರಬೇಕಿತ್ತು. ಅದು ತಾಂತ್ರಿಕ ಕಾರಣದಿಂದ ಬರಲು ತಡವಾಗಿದೆ. ಶನಿವಾರ ರಾತ್ರಿ ಅದು ತಲುಪಬಹುದು.‌ ಅದು ಬಂದ ನಂತರ ನೇವಿ ಮತ್ತೆ ಕಾರ್ಯಾಚರಣೆ ಮಾಡಲಿದೆ. ಕೋಸ್ಟ್ ಗಾರ್ಡ್ ಹೆಲಿಕಾಪ್ಟರ್ ಗೆ ಸಹ ಮನವಿ ಮಾಡಲಾಗಿದೆ ಎಂದು ಹೇಳಿದ್ದಾರೆ.

ಅಲ್ಲಿಯ ತನಕ ಮಲ್ಪೆಯ ಈಶ್ವರ್ ಹಾಗೂ ಗೆಳೆಯರ ತಂಡ ಟ್ರಕ್ ಹಾಗೂ ಅದರೊಳಗೆ ಇರಬಹುದಾದ‌ ಅರ್ಜುನನ್ನು ತರಲು ಪ್ರಯತ್ನಿಸಲಿದೆ. ಬಂದರು ಇಲಾಖೆಯ ಟಗ್ ತರಲು ಪ್ರಯತ್ನ‌ ನಡೆದಿದೆ ಎಂದರು.‌ ಕಾರ್ಯಾಚರಣೆ ಮುಂದವರಿಯಲಿದೆ ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದರು.‌

Advertisement

ಸೇನಾಪಡೆಯ ಮೇಜರ್ ಅಭಿಷೇಕ ಕಶ್ಯಪ, ನೌಕಾಪಡೆಯ ಲೆಫ್ಟಿನೆಂಟ್  ಶಾಶ್ವತ ಸಿಂಗ್ , ಎನ್ ಡಿ ಆರ್ ಎಫ್ ನ ಅರುಣ್ ದ್ವೀವೇದಿ ಜಿಲ್ಲಾಧಿಕಾರಿಯ ಜೊತೆಗೆ ಇದ್ದರು.

ಮುಳುಗು ತಜ್ಞ ಈಶ್ವರ್ ಮಲ್ಪೆ ತಂಡದ ಸದಸ್ಯನಿಗೆ ಗಾಯ:

ಅಂಕೋಲಾ: ಶಿರೂರು ಗುಡ್ಡ ಕುಸಿತ (Shiroor Hill Slide) ಸ್ಥಳಕ್ಕೆ ಕಾರ್ಯಾಚರಣೆ ಆಗಮಿಸಿದ ಮುಳುಗು ತಜ್ಞರ ಈಶ್ವರ ಮಲ್ಪೆ ತಂಡದ ಓರ್ವ ಸದಸ್ಯನಿಗೆ ಕಾರ್ಯಾಚರಣೆ ವೇಳೆ ಬಿದ್ದು ಗಾಯಗಳಾದ ಘಟನೆ ನಡೆದಿದೆ.

ಈಶ್ವರ ಮಲ್ಪೆ ತಂಡದ ದೀಪು ಎನ್ನುವರಿಗೆ ಗಾಯಗಳಾಗಿದೆ. ಇವರು ಶಿರೂರಿನ ಗುಡ್ಡ ಕುಸಿತ ಸ್ಥಳದಲ್ಲಿ ಡೈವಿಂಗ್ ಕಾರ್ಯಚರಣೆ ಮಾಡುವ ಸಂದರ್ಭದಲ್ಲಿ ಕಾಲು ಜಾರಿ ಬಿದ್ದು ಗಾಯಗೊಂಡಿದ್ದಾನೆ. ತಕ್ಷಣ ಈತನನ್ನು ಆಂಬ್ಯುಲೆನ್ಸ ಮೂಲಕ ತಾಲೂಕಾಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next