ಚೆಲುವೆ, ನಿನ್ನನ್ನು ಏನೆಂದು ಕರೆಯಬೇಕೋ ಗೊತ್ತಾಗುತ್ತಿಲ್ಲ. ಹೇಗೆಂದರ್ಹಾಗೆ ಕರೆಯುವುದಕ್ಕೆ ನೀ ನನ್ನ ಹೆಂಡತಿಯಲ್ಲ! ಎಲ್ಲರಂತೆ ಹೆಸರಿನಿಂದಲೇ ನಿನ್ನ ಗುರುತಿಸುವುದಕ್ಕೆ ನೀನು ಕೇವಲ ಸ್ನೇಹಿತೆಯಲ್ಲ. ನೀನು ನನ್ನನ್ನು ಸ್ನೇಹಿತನೆಂದು ಭಾವಿಸಿದ್ದರೂ ನಾನು ನಿನ್ನಿಂದ ಸ್ನೇಹವನ್ನು ಮಾತ್ರವೇ ಬಯಸುತ್ತಿಲ್ಲ. ಆ ಸ್ನೇಹದ ಜೊತೆಗೆ ನಿನ್ನ ಪ್ರೀತಿಯನ್ನೂ ಬೇಡುತ್ತಿದ್ದೇನೆ. ನನಗೆ ನಿನ್ನ ಮೇಲಿರುವುದು ಸ್ವತ್ಛಂದ ಪ್ರೀತಿಯೇ ಹೊರತು ಬೇರೇನೂ ಅಲ್ಲ. ನಾನು ನಿನ್ನನ್ನು ಪ್ರೀತಿಸುತ್ತಿರುವುದು ನಿನಗೆ ತಿಳಿದ ಹಳೇ ವಿಚಾರ.
ಆದರೂ ನೀನು ನನ್ನ ಪ್ರೇಮದ ಗುಲಾಬಿಯನ್ನು ಕಿರುಗಣ್ಣಲ್ಲೂ ನೋಡದೆ ಕೇವಲ ನನ್ನ ಸ್ನೇಹವನ್ನು ಮಾತ್ರ ಬಯಸುತ್ತಿದ್ದೀಯಾ! ಹಾಗಾಗಿ ನನ್ನನ್ನ, ಒಂಥರಾ ಒನ್ ಸೈಡ್ ಲವರ್ ಅಂತಾರಲ್ಲಾ; ಆ ಕೆಟಗರಿಗೆ ಸೇರಿಸಬಹುದು. ಈಗ್ಲೆà ಇನ್ನೂ ಒಂದ್ಮಾತು ಹೇಳಿಬಿಡ್ತೀನಿ ಕೇಳಿಸ್ಕೋ: ನಿನ್ನನ್ನು ನಾನು ಪ್ರೀತಿಸುತ್ತಿದ್ದರೂ ನಿನ್ನಿಂದ ಪ್ರೇಯಸಿಯನ್ನಷ್ಟೇ ಬಯಸುತ್ತಿಲ್ಲ, ಬದಲಾಗಿ ನನ್ನ ಜೀವನದ ಸಂಗಾತಿಯಾಗಿಯೇ ನಿನ್ನನ್ನು ನೋಡ ಬಯಸುತ್ತೇನೆ.
ನಿಜ! ಏಕೆಂದರೆ ನನಗೆ ಬರೀ ಪ್ರೀತಿಯ ಮೇಲೆ ನಂಬಿಕೆ ಇಲ್ಲ! ಏಕೆಂದರೆ, ಪ್ರೇಮಗಳು ಮದುವೆಯವರೆಗೂ ಹೋಗುತ್ತವೋ, ಇಲ್ಲವೋ ಎಂದು ಸ್ವತಃ ಪ್ರೇಮಿಗಳಿಗೇ ಗೊತ್ತಿರುವುದಿಲ್ಲ. ಪ್ರೇಮ ವಿವಾಹಗಳಾದರೂ ಮದುವೆಯ ನಂತರ ಅವರಿಬ್ಬರ ನಡುವೆ ಪ್ರೀತಿ ಇರುತ್ತದೋ? ಇಲ್ಲವೋ? ಎಂದು ಹೇಳಲಿಕ್ಕೂ ಆಗುವುದಿಲ್ಲ. ಅರೇಂಜ್ಡ್ ಮ್ಯಾರೇಜ್‌ನಲ್ಲಿಯೇ ನನಗೆ ನಂಬಿಕೆ ಜಾಸ್ತಿ.
ಏಕೆಂದರೆ, ಮನೆಯ ಹಿರಿಯರೆಲ್ಲರೂ ಸೇರಿ ಈ ಹುಡುಗನೂ, ಆ ಹುಡುಗಿಯೂ ಒಂದಾದರೆ ಮುಂದಿನ ಜೀವನ ಹೇಗಿರುತ್ತದೆ ಎಂದು ಮೊದಲೇ ಲೆಕ್ಕಾಚಾರ ಮಾಡಿ ನಮ್ಮ ಜೋಡಿ ಸರಿಯಾದುದೆಂದು ತೀರ್ಮಾನಿಸಿದರೆ, ಇಬ್ಬರ ಮಧ್ಯೆ ಸಣ್ಣ ಪುಟ್ಟ ಸಮಸ್ಯೆಗಳು, ಪರಸ್ಪರ ಭಿನ್ನಾಭಿಪ್ರಾಯಗಳು ಬಂದರೆ ಹಿರಿಯರೇ ಮಧ್ಯಸ್ಥಿಕೆ ವಹಿಸಿ ಮತ್ತೆ ನಮ್ಮನ್ನು ಒಂದು ಮಾಡುತ್ತಾರೆ.
ಹಾಗಾಗಿಯೇ, ನಿನ್ನ ಮೇಲೆ ನನಗೆ ಆಕಾಶದಷ್ಟು ಪ್ರೀತಿಯಿದ್ದರೂ ನಿನ್ನ ಒಪ್ಪಿಗೆಯ ಜೊತೆಗೆ ನಿನ್ನ ಪೋಷಕರ ಒಪ್ಪಿಗೆಯನ್ನೂ ಪಡೆದ ಮೇಲೆಯೇ ನಿನ್ನನ್ನು ವರಿಸಬೇಕೆಂದುಕೊಂಡಿದ್ದೇನೆ. ಒಟ್ಟಾರೆ ಎಂದೆಂದಿಗೂ ನಿನ್ನೊಂದಿಗೇ ಬಾಳುವಾಸೆ ನನ್ನದು. ಅದೂ ಕೂಡ, ನೀನು ಒಪ್ಪಿಗೆ ನೀಡಿದರೇ ಮಾತ್ರ! ನೀನು ಒಪ್ಪಿಗೆ ನೀಡುತ್ತೀಯಾ, ನನ್ನ ಪ್ರೀತಿಯನ್ನು ಅಥೆìçಸಿಕೊಳ್ಳುತ್ತೀಯಾ ಎಂದು ಆಶಿಸುತ್ತಿದ್ದೇನೆ.
ಇತಿ,
ನಿನ್ನ ಒಪ್ಪಿಗೆಯ ನಿರೀಕ್ಷಕ,
ಗಿರೀಶ್ ಚಂದ್ರ ವೈ.ಆರ್.