Advertisement

ನಾನು-ಬಿಎಸ್‌ವೈ ಗಂಡ ಹೆಂಡತಿಯಂತೆ: ಈಶ್ವರಪ್ಪ

10:49 AM May 28, 2017 | Harsha Rao |

ಅಥಣಿ: ತಮ್ಮ ಮತ್ತು ಬಿ.ಎಸ್‌.ಯಡಿಯೂರಪ್ಪ ಅವರದ್ದು ಗಂಡ ಹೆಂಡಿರ ಸಂಬಂಧ ಇದ್ದಂತೆ. ಗಂಡ ಹೆಂಡತಿ ನಡುವೆ
ಜಗಳ ಸಹಜ. ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ಬಹುಮತ ಸಾಧಿಸಿ ಯಡಿಯೂರಪ್ಪನವರೇ
ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಕೆ.ಎಸ್‌. ಈಶ್ವರಪ್ಪ ಹೇಳಿದರು. ತಾಲೂಕಿನ ದರೂರ ಗ್ರಾಮದಲ್ಲಿ
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮಿಬ್ಬರ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ, ರಾಷ್ಟ್ರನಾಯಕರ ಮಾತಿಗೆ ಗೌರವ ಕೊಟ್ಟು ರಾಯಣ್ಣ ಬ್ರಿಗೇಡ್‌ ನಿಂದ ದೂರ ಉಳಿಯುತ್ತಿದ್ದೇನೆ. ಇದರಲ್ಲಿ ಯಾವುದೆ ಗೊಂದಲವಿಲ್ಲ ಎಂದರು. ಕೇಂದ್ರ ಸರ್ಕಾರದ ಮೂರು ವರ್ಷದ ಸಾಧನೆ ಸಂಪೂರ್ಣ ತೃಪ್ತಿದಾಯಕವಾಗಿದ್ದು, ಕಾಂಗ್ರೆಸ್‌ನವರು 70 ವರ್ಷಗಳಲ್ಲಿ ಮಾಡದ ಸಾಧನೆಯನ್ನು ಪ್ರಧಾನಿ ಮಾಡಿದ್ದಾರೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next