ನಿಖಿಲ್ ಅಡ್ವಾಣಿ ನಿರ್ದೇಶನದ ಬಾಲಿವುಡ್ ನಟ ಅಕ್ಷಯ್ ಕುಮಾರ್ ಅಭಿನಯದ ಬಹುನಿರೀಕ್ಷಿತ ಚಿತ್ರ “ಬೆಲ್‌ಬಾಟಂ’ ಚಿತ್ರವು ಮುಂದಿನ ವರ್ಷ ಏಪ್ರಿಲ್ 2 ರಂದು ಬಿಡುಗಡೆಯಾಗಲಿದೆ. ಅಲ್ಲದೇ ಅಕ್ಕಿಗೆ ಜೋಡಿಯಾಗಿ ವಾಣಿ ಕಪೂರ್ ನಟಿಸಿದ್ದು, ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ವೊಂದನ್ನು ಮಾಡಿದ್ದಾರೆ. “ಸೂಪರ್ ಸೂಪರ್ ಥ್ರಿಲ್ ಹಾಗೂ ಎಕ್ಸೈಟ್ ಆಗಿದ್ದೇನೆ. ಅಕ್ಷಯ್ ಕುಮಾರ್ ಸರ್ ಜೊತೆ ಅಭಿನಯಿಸುತ್ತಿದ್ದೇನೆ. “ಬೆಲ್‌ಬಾಟಂ’ ಚಿತ್ರೀಕರಣ ಆರಂಭಕ್ಕೆ ಕಾಯುತ್ತಿದ್ದೇನೆ’ ಎಂದು ತಮ್ಮ ಖುಷಿಯನ್ನು ಹಂಚಿಕೊಂಡಿದ್ದಾರೆ.
ವಾಣಿ ಕಪೂರ್ ಹಾಗೂ ಅಕ್ಷಯ್‌ಕುಮಾರ್ ಮೊದಲ ಬಾರಿಗೆ ನಟಿಸುತ್ತಿದ್ದು, ವಶು ಭಗ್ನನಿ, ಜಾಕಿ ಭಗ್ನಾನಿ, ದೀಪ್‌ಶಿಖಾ ದೇಶ್‌ಮುಖ್ , ಮೊನೀಶಾ ಅಡ್ವಾಣಿ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಅಲ್ಲದೇ ಚಿತ್ರವು ಜುಲೈ ತಿಂಗಳಲ್ಲಿ ಸೆಟ್ಟೇರಬೇಕಿತ್ತು. ಆದರೆ ಕೋವಿಡ್ 19ನಿಂದ ಚಿತ್ರೀಕರಣವನ್ನು ಮುಂದೂಡಲಾಗಿದೆ.
ಇನ್ನು ಕಳೆದ ನವೆಂಬರ್‌ನಲ್ಲಿ ಚಿತ್ರದ ಮೊದಲ ಪೋಸ್ಟರನ್ನು ಚಿತ್ರತಂಡ ಹಂಚಿಕೊಂಡಿದ್ದು, ರೆಟ್ರೋ ಲುಕ್‌ನಲ್ಲಿ ಕೆಂಪು ಕಾರಿನ ಮುಂದೆ ಬೆಲ್‌ಬಾಟಂ ಉಡುಪು ಧರಿಸಿ ಅಕ್ಷಯ್ ಫೋಸ್ ಕೊಟ್ಟಿದ್ದನ್ನು ಸ್ಮರಿಸಬಹುದು. ಹಾಗೂ ಅಕ್ಷಯ್ ಅಭಿನಯದ ಮತ್ತೊಂದು ಚಿತ್ರ “ಬಚ್ಚನ್ ಪಾಂಡೆ’ ಮುಂದಿನ ವರ್ಷ ಜನವರಿಯಲ್ಲಿ ತೆರೆಗೆ ಬರಲು ಸಿದ್ಧವಾಗಿದೆ.