ಸ್ಟಾರ್ ಸುವರ್ಣ ವಾಹಿನಿಯ ಜನಪ್ರಿಯ “ಹರ ಹರ ಮಹಾದೇವ’ ಧಾರಾವಾಹಿಯಲ್ಲಿ ಸತಿಯ ಪುನರಾಗಮನ ವೀಕ್ಷಕರ ಮೆಚ್ಚುಗೆಗೆ ಪಾತ್ರವಾಗಿತ್ತು. ಅದರ ಬೆನ್ನಲ್ಲೇ ವಾಹಿನಿ ವೀಕ್ಷಕರಿಗೆ ಮತ್ತೂಂದು ಸಂತಸದ ಸುದ್ದಿ ಕೊಡಲು ಮುಂದಾಗಿದೆ. ಈಗಾಗಲೇ 360 ಕಂತುಗಳನ್ನು ಪೂರೈಸಿ ಹೆಚ್ಚು ಹೆಚ್ಚು ವೀಕ್ಷಕರನ್ನು ಆಕರ್ಷಿಸುತ್ತಿರುವ ಈ ಪೌರಾಣಿಕ ಧಾರವಾಹಿಯ ಹೈಲೈಟ್ ಆಗಿದ್ದವರು ಸತಿಯ ಪಾತ್ರ ನಿರ್ವಹಿಸುತ್ತಿದ್ದ ಸಂಗೀತ.
ಈಗ ವೀಕ್ಷಕರ ಒತ್ತಾಯದ ಮೇರೆಗೆ ಕತೆಯಲ್ಲಿ ಬರುವ ಪಾರ್ವತಿ ಪಾತ್ರವನ್ನೂ ಸಂಗೀತ ಅವರಿಂದಲೇ ಮಾಡಿಸುವ ನಿರ್ಧಾರವನ್ನು ವಾಹಿನಿ ಕೈಗೊಂಡಿದೆ. ಹೀಗಾಗಿ ಇನ್ನು ಮುಂದೆ ಎರಡೆರಡು ಪಾತ್ರಗಳಲ್ಲಿ ಪ್ರಿಯಾಂಕಾ ಅವರನ್ನು ವೀಕ್ಷಕರು ಕಣ್ತುಂಬಿಕೊಳ್ಳಬಹುದು.
ಚಾನೆಲ್: ಸ್ಟಾರ್ ಸುವರ್ಣ
ಯಾವಾಗ?: ಸೋಮ- ಶುಕ್ರ, ಸಂಜೆ 7.30