Advertisement
ಕೊರಟಗೆರೆ ಪಟ್ಟಣದ ರಾಜೀವ ಭವನದ ಆವರಣದಲ್ಲಿ ಬ್ಲಾಕ್‌ಕಾಂಗ್ರೆಸ್ ಸಮಿತಿ, ಯುವ ಕಾಂಗ್ರೆಸ್ ಮತ್ತು ಡಾ.ಜಿ.ಪರಮೇಶ್ವರ ಅಭಿಮಾನಿ ಬಳಗದ ಡಾ.ಜಿ.ಪರಮೇಶ್ವರ ಅವರ 73 ನೇ ಹುಟ್ಟುಹಬ್ಬದ ಪ್ರಯುಕ್ತ ವತಿಯಿಂದ ಭಾನುವಾರ ಏರ್ಪಡಿಸಲಾಗಿದ್ದ ರಕ್ತದಾನ ಶಿಬಿರ ಮತ್ತು ಆರೋಗ್ಯ ಶಿಬಿರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
Related Articles
Advertisement
ಇದನ್ನೂ ಓದಿ: ಕಾಡು ಹಂದಿ ಬೇಟೆಗೆ ಇಟ್ಟಿದ್ದ ಸಜೀವ ಬಾಂಬ್ ಪತ್ತೆ: ಬಾಂಬ್ ನಿಷ್ಕ್ರೀಯ ದಳದಿಂದ ಕಾರ್ಯಾಚರಣೆ
ಗೃಹಸಚಿವ ಡಾ.ಜಿ.ಪರಮೇಶ್ವರ 73 ನೇ ಹುಟ್ಟುಹಬ್ಬದ ಪ್ರಯುಕ್ತ ಕೊರಟಗೆರೆ ಯುವಕಾಂಗ್ರೆಸ್ ವತಿಯಿಂದ ಸಾರ್ವಜನಿಕ ಆಸ್ಪತ್ರೆಯ ಒಳರೋಗಿಗಳಿಗೆ ಹಣ್ಣು-ಬ್ರೇಡ್ ವಿತರಣೆ. ಕೊರಟಗೆರೆ ಪಟ್ಟಣದ ರಾಜೀವ ಭವನದಲ್ಲಿ ರಕ್ತದಾನ ಶಿಬಿರ ನಡೆಯಿತು. ಕೊರಟಗೆರೆ ಕ್ಷೇತ್ರದ ಜನತೆಗೆ ಸಿಹಿಯೂಟ ಮತ್ತು 10 ಸಾವಿರಕ್ಕೂ ಅಧಿಕ ಲಾಡುಗಳ ವಿತರಣೆ ಮಾಡಲಾಯಿತು. ನೂರಾರು ಜನ ಅಭಿಮಾನಿಗಳು ಮತ್ತು ಕಾರ್ಯಕರ್ತರು ಸಿಹಿಹಂಚಿ ಸಂಭ್ರಮಿಸಿದರು. ಕಾಂಗ್ರೆಸ್ ಕಾರ್ಯಕರ್ತರಿಗೆ ಅಭಿನಂದನೆ
ವಿಧಾನಸಭಾ ಚುನಾವಣೆ ವೇಳೆ ಕಾಂಗ್ರೆಸ್ ಪಕ್ಷದ ಹೆಚ್ಚು ಸದಸ್ಯತ್ವ ಮಾಡಿದ ಮುಖಂಡರು ಮತ್ತು ಬೂತ್‌ನಲ್ಲಿ ಅತಿಹೆಚ್ಚು ಮತಗಳ ಲೀಡ್ ನೀಡಿದ ಬೂತ್ ಅಧ್ಯಕ್ಷರು ಮತ್ತು ಸದಸ್ಯರಿಗೆ ಸನ್ಮಾನ ಮಾಡುತ್ತೇನೆ. ಕೊರಟಗೆರೆ ಕ್ಷೇತ್ರದಲ್ಲಿ ನನ್ನ ವಿಜಯೋತ್ಸವ ಮತ್ತು ಮತದಾರ ಪ್ರಭುಗಳಿಗೆ ಅಭಿನಂದನಾ ಕಾರ್ಯಕ್ರಮವು ಮುಂದಿನ ದಿನಗಳಲ್ಲಿ ಅದ್ದೂರಿಯಿಂದ ನಡೆಯಲಿದೆ. ಜಿಪಂ-ತಾಪಂ ಚುನಾವಣೆಗೆ ಸಜ್ಜಾಗಿ..
ರಾಜ್ಯದಲ್ಲಿ ಜಿಪಂ ಮತ್ತು ತಾಪಂ ಚುನಾವಣೆಯು ಅತಿ ಶಿರ್ಘದಲ್ಲಿ ನಡೆಯಲಿದೆ. ಕೊರಟಗೆರೆ ಕ್ಷೇತ್ರದ 6 ಜಿಪಂ ಮತ್ತು 16 ತಾಪಂ ಕ್ಷೇತ್ರಕ್ಕೆ ಸ್ಪರ್ಧಿಸುವ ಕಾಂಗ್ರೆಸ್ ಪಕ್ಷದ ಆಕಾಂಕ್ಷಿ ಅಭ್ಯರ್ಥಿಗಳು ಚುನಾವಣೆಗೆ ಸಜ್ಜಾಗಬೇಕಿದೆ. ಜನರ ಆರ್ಶಿವಾದ ಮತ್ತು ಅವರ ನಡುವೆ ಇರುವ ಮುಖಂಡರಿಗೆ ಜಿಪಂ ಮತ್ತು ತಾಪಂ ಚುನಾವಣೆಯಲ್ಲಿ ಮಣೆ ಹಾಕುತ್ತೇವೆ. ಅಭ್ಯರ್ಥಿಯ ಆಯ್ಕೆಯ ತಿರ್ಮಾನ ನಮ್ಮ ಕಾಂಗ್ರೆಸ್ ಪಕ್ಷದ ವರಿಷ್ಟರಿಗೆ ಬಿಟ್ಟಿದ್ದು. ಅಭಿಮಾನಿ ದೇವರುಗಳ ಪ್ರೀತಿ ಮತ್ತು ಅಭಿಮಾನಕ್ಕೆ ನಾನು ಚಿರಾಋಣಿ. ಕರ್ನಾಟಕ ರಾಜ್ಯ ಮತ್ತು ತುಮಕೂರು ಜಿಲ್ಲೆಯಲ್ಲಿ ನನ್ನ ಹುಟ್ಟುಹಬ್ಬದ ಸಂಭ್ರಮ ಮನೆಮಾಡಿದೆ. ನನ್ನ ಸ್ವಕ್ಷೇತ್ರ ಕೊರಟಗೆರೆಯಲ್ಲಿ ಅಭಿಮಾನಿ ಬಳಗಗಳಿಂದ ನನ್ನ ಹೆಸರಿನಲ್ಲಿ ದೇವರಿಗೆ ಅಭಿಷೇಕ, ರಕ್ತದಾನ ಶಿಬಿರ ಮತ್ತು ಆರೋಗ್ಯ ಶಿಬಿರ ನಡೆದಿವೆ. ಯಾವ ಜನ್ಮದ ಪುಣ್ಯವೂ ನನಗೇ ಗೋತ್ತಿಲ್ಲ ನಿಮ್ಮೆಲ್ಲರ ಋಣವನ್ನ ತೀರಿಸ್ತೀನಿ.
– ಡಾ.ಜಿ.ಪರಮೇಶ್ವರ. ಗೃಹಸಚಿವ. ಕರ್ನಾಟಕ. ಇದನ್ನೂ ಓದಿ: Yogi Adityanath ವಿರುದ್ಧ ಕಾಮೆಂಟ್ ಮಾಡಿದ್ದಕ್ಕಾಗಿ ವಾಟ್ಸಾಪ್ ಗ್ರೂಪ್ ಅಡ್ಮಿನ್ ಬಂಧನ