Advertisement

ನಾನು ಚುನಾವಣೆ ಗೆಲ್ಲಿಸಿಕೊಟ್ಟೆ, ಗೆಹ್ಲೋಟ್ ಸಿಎಂ ಆದರು! ಬೇಜಾರಿದೆ ಆದರೆ ಬಿಜೆಪಿ ಸೇರಲ್ಲ

11:54 AM Jul 15, 2020 | keerthan |

ಜೈಪುರ: ರಾಜಸ್ಥಾನದ ರಾಜಕೀಯ ರಂಗು ದಿನದಿಂದ ದಿನಕ್ಕೆ ಬದಲಾಗುತ್ತಿದೆ. ರಾಜ್ಯ ಕಾಂಗ್ರೆಸ್ ಅಧ್ಯಕ್ಷ , ರಾಜಸ್ಥಾನ ಸರ್ಕಾರದ ಉಪ ಮುಖ್ಯಮಂತ್ರಿಯಾಗಿದ್ದ ಸಚಿನ್ ಪೈಲಟ್ ಬಂಡಾಯ ಎದ್ದ ನಂತರ ಹಲವು ಬೆಳವಣಿಗೆಗಳು ನಡೆಯುತ್ತಿದೆ. ಇದೀಗ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಮತ್ತು ಡಿಸಿಎಂ ಸ್ಥಾನದಿಂದ ಪೈಲಟ್ ರನ್ನುಉಚ್ಛಾಟಿಸಲಾಗಿದೆ. ಇಷ್ಟೆಲ್ಲಾ ಘಟನೆಗಳಾದ ಬಳಿಕ ಸಚಿನ್ ಪೈಲಟ್ ಖಾಸಗಿ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ್ದು, ಕೆಲ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

Advertisement

ಸಿಎಂ ಅಶೋಕ್ ಗೆಹ್ಲೋಟ್ ವಿರುದ್ಧ ನನಗೆ ಯಾವುದೇ ವೈಯಕ್ತಿಕ ಕೋಪವಿಲ್ಲ. ಅಥವಾ ಯಾವುದೇ ವಿಶೇಷ ಸ್ಥಾನಮಾನವನ್ನು ಕೇಳುತ್ತಿಲ್ಲ. ಆದರೆ ನಾವು ಚುನಾವಣಾ ಪೂರ್ವದಲ್ಲಿ ಜನತೆಗೆ ನೀಡಿದ್ದಆಶ್ವಾಸನೆಗಳನ್ನು ಈಡೆಸುವಂತೆ ಕೇಳಿದ್ದೆ. ಬಿಜೆಪಿಯ ವಸುಂಧರಾ ರಾಜೆ ಅವರ ಸರಕಾರದ ಗಣಿ ಅವ್ಯವಹಾರಗಳ ಕುರಿತು ಜನತೆಗೆ ತಿಳಿಸುತ್ತಾ ನಾವು ಚುನಾವಣೆ ಎದುರಿಸಿದ್ದೇವೆ. ಆದರೆ ಈಗ ಸಿಎಂ ಗೆಹ್ಲೋಟ್ ಅದೇ ಅವ್ಯವಹಾರಗಳನ್ನು ಮುಂದುವರಿಸುತ್ತಿದ್ದಾರೆ ಎಂದು ಪೈಲಟ್ ಹೇಳಿದ್ದಾರೆ.

ಸಿಎಂ ಗೆಹ್ಲೋಟ್ ಅವರು ಬಿಜೆಪಿ ನಾಯಕರನ್ನು ಅನುಕರಿಸುವಲ್ಲಿ ನಿರತರಾಗಿದ್ದರು. ನನಗೆ ಮತ್ತು ನನ್ನ ಬೆಂಬಲಿಗರಿಗೆ ರಾಜ್ಯದ ಅಭಿವೃದ್ದಿಗೆ ಯಾವುದೇ ಕೆಲಸ ಮಾಡಲು ಅವಕಾಶ ನೀಡಲಿಲ್ಲ. ನನ್ನ ಆದೇಶವನ್ನು ಪಾಲಿಸದಂತೆ ಶಾಸಕರಿಗೆ ತಿಳಿಸಲಾಗಿತ್ತು. ಯಾವುದೇ ಫೈಲ್ ಗಳು ನನ್ನ ಬಳಿ ಬರುತ್ತಿರಲಿಲ್ಲ.  ನನಗೆ ತಿಳಿಯದಂತೆ ಕ್ಯಾಬಿನೆಟ್ ಮತ್ತು ಶಾಸಕಾಂಗ ಸಭೆಯನ್ನು ನಡೆಸಲಾಗುತ್ತಿತ್ತು. ಇಷ್ಟೆಲ್ಲಾ ಆಗುವಾಗ ನನ್ನ ಹುದ್ದೆಯ ಅವಶ್ಯಕತೆಯೇನು? ಜನತಗೆ ನೀಡಿದ ಮಾತನ್ನು ನಡೆಸಿಕೊಳ್ಳಲು ಅವಕಾಶ ಇರದ ಹುದ್ದೆಯ ಅಗತ್ಯವೇನು ಎಂದು ಪೈಲಟ್ ಹೇಳಿಕೊಂಡಿದ್ದಾರೆ.

ಈ ವಿಚಾರಗಳನ್ನು ಈ ಮೊದಲೇ ಕಾಂಗ್ರೆಸ್ ನಾಯಕರಲ್ಲಿ ಹೇಳಿಕೊಂಡಿದ್ದೆ. ಗೆಹ್ಲೋಟ್ ಬಳಿಯೂ ಚರ್ಚೆ ನಡೆಸಿದ್ದೆ. ಆದರೆ ಯಾರೂ ಇದಕ್ಕೆ ಸೊಪ್ಪು ಹಾಕಲಿಲ್ಲ. ಹೀಗಾಗಿ ಬಹಿರಂಗವಾಗಿ ಹೇಳಿಕೊಂಡೆ ಎಂದಿದ್ದಾರೆ.

ಜು.13ರಂದು ನಡೆದ ಸಿಎಲ್ ಪಿ ಸಭೆಗೆ ಗೈರಾದ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಸಚಿನ್ ಪೈಲಟ್, ನನಗೆ ಬೇಸರವಾಗಿದೆ. ಅಧಿವೇಶನದಲ್ಲಿದ್ದಾಗ ಮಾತ್ರ ವಿಪ್ ಅನ್ವಯವಾಗುತ್ತದೆ. ಸಿಎಂ ತನ್ನ ನಿವಾಸದಲ್ಲಿ ಸಭೆ ಕರೆದಿದ್ದರು, ಪಕ್ಷದ ಕಚೇರಿಯಲ್ಲಿ ಅಲ್ಲ ಎಂದರು.

Advertisement

ಬಿಜೆಪಿಯೊಂದಿಗೆ ಸೆರಿ ಸರ್ಕಾರ ಉರುಳಿಸುವ ಕೆಲಸಕ್ಕೆ ಪೈಲಟ್ ಕೈಹಾಕಿದ್ದಾರೆ ಎಂಬ ಗೆಹ್ಲೋಟ್ ಆರೋಪ ಶುದ್ಧ ಸುಳ್ಳು. ನಾನು ರಾಜಸ್ಥಾನದಲ್ಲಿ ಕಾಂಗ್ರೆಸ್ ಸರಕಾರ ಬರುಲು ಬಹಳಷ್ಟು ಕಷ್ಟಪಟ್ಟಿದ್ದೇನೆ, ಈಗ ತನ್ನದೇ ಸರಕಾರದ ವಿರುದ್ಧ ಯಾಕೆ ಕೆಲಸ ಮಾಡಲಿ ಎಂದಿದ್ದಾರೆ.

ನನ್ನನ್ನು ಪಕ್ಷದ ಅಧ್ಯಕ್ಷ ಸ್ಥಾನದಿಂದ ತೆಗೆಯಲಾಗಿದ್ದರೂ ನಾನಿನ್ನೂ ಕಾಂಗ್ರೆಸ್ ಕಾರ್ಯಕರ್ತ. ಆದರೆ ನಾನು ಬಿಜೆಪಿಗೆ ಸೇರಲಾರೆ. ನನ್ನ ಕಾರ್ಯಕರ್ತರ ಜೊತೆಗೆ ಚರ್ಚಿಸುತ್ತೇನೆ. ಮುಂದಿನ ದಿನಗಳಲ್ಲಿ ಅವರ ಜೊತೆಗೆ ಕೆಲಸ ಮಾಡುತ್ತೇನೆ ಎಂದು ಸಚಿನ್ ಪೈಲಟ್ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next