Advertisement

ನಾನು ಯಾವುದೇ ಭ್ರಷ್ಟಾಚಾರದಲ್ಲಿ ಭಾಗಿಯಾಗಿಲ್ಲ: ಡಿಕೆಶಿ

03:53 PM Nov 22, 2020 | Mithun PG |

ಚಿತ್ರದುರ್ಗ: ನಾನು ಯಾವುದೇ ಭ್ರಷ್ಟಾಚಾರದಲ್ಲಿ ಭಾಗಿಯಾಗಿಲ್ಲ. ಕಳೆದ 30 ವರ್ಷದ ರಾಜಕಾರಣ ಹಾಗೂ‌ ಮಂತ್ರಿಯಾದಾಗಲೂ ನನ್ನ ಮೇಲೆ ಆರೋಪಗಳಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.

Advertisement

ಚಿತ್ರದುರ್ಗದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ನನ್ನ ಮೇಲೆ ಯಾವ ಕಮಿಷನ್ ತನಿಖೆಯೂ‌ ನಡೆದಿಲ್ಲ. ಮಾಡಿರುವ ತನಿಖೆಗಳೆಲ್ಲವೂ ಕೂಡಾ ಮುಗಿದಿವೆ ಎಂದರು.

ಆದಾಯಕ್ಕಿಂತ ಆಸ್ತಿ ಜಾಸ್ತಿಯಾಗಿದೆ ಎಂದು ಕರ್ನಾಟಕದಲ್ಲಿ ಒಂದೇ ಒಂದು ಕೇಸ್ ಸಿಬಿಐಗೆ ನೀಡಿದ್ದಾರೆ. ಈ ‌ಕಾರಣಕ್ಕೆ ದಾಳಿ ಮಾಡಿದ್ದರು, ಈಗ ಸಮನ್ಸ್ ನೀಡಿದ್ದಾರೆ, ಕಾನೂನಿಗೆ ಗೌರವ ನೀಡಿ ಉತ್ತರಿಸುತ್ತೇನೆ ಎಂದು ಹೇಳಿದರು.

ಇದನ್ನೂ ಓದಿ: BSY ಒತ್ತಡಕ್ಕೆ ಮಣಿದು ಅಂದು ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ನೀಡಲಾಗಿತ್ತು: ರೇಣುಕಾಚಾರ್ಯ

ಪ್ರಹ್ಲಾದ್ ಜೋಶಿಗೆ ತಿರುಗೇಟು:

Advertisement

ಕಾಂಗ್ರೆಸ್ ದೇಶ ವಿರೋಧಿ ಎಂಬ ಪ್ರಹ್ಲಾದ್ ಜೋಷಿ ಹೇಳಿಕೆಗೆ ಪ್ರತಿಕ್ರಿಯಿಸಿ, ಹೆಗಲ ಮೇಲಿನ ಶಾಲು ತೋರಿಸಿ ಇದು  ಬಾವುಟ. ಕಾಂಗ್ರೆಸ್ ನವರಿಗೆ ಮಾತ್ರ ಇದು ಇರುವುದು ಬೇರೆ ಯಾರಿಗೂ ಇಲ್ಲ. ಇದೊಂದೆ ಉತ್ತರ ಎಂದು ತಿರುಗೇಟು ನೀಡಿದರು.

ಈ ಸಂದರ್ಭದಲ್ಲಿ ಬೆಳಗಾವಿ ಲೋಕಸಭಾ ಕ್ಷೇತ್ರದ ಕೈ ಟಿಕೇಟ್ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಲು ನಿರಾಕರಿಸಿದರು‌.

ಈ ವೇಳೆ ಶಾಸಕ ಟಿ. ರಘುಮೂರ್ತಿ, ಮಾಜಿ ಶಾಸಕ ಡಿ. ಸುಧಾಕರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ‌.ಕೆ.ತಾಜಪೀರ್, ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಜಿ.ಎಸ್. ಮಂಜುನಾಥ್ ಮತ್ತಿತರರಿದ್ದರು.

ಇದನ್ನೂ ಓದಿ: ರಾಜಕೀಯ ಖೈದಿ: ಸೌದಿಯ ಮಹಿಳಾ ಹಕ್ಕು ಹೋರಾಟಗಾರ್ತಿ ಲೌಜೈನ್ ಅಲ್-ಹಥ್ಲೌಲ್ ರ ಬಗ್ಗೆ ಗೊತ್ತಾ?

Advertisement

Udayavani is now on Telegram. Click here to join our channel and stay updated with the latest news.

Next