Advertisement

ನಾನು ಬಿಜೆಪಿ ತೊರೆಯುವುದಿಲ್ಲ: ಎ.ಎಸ್.ಪಾಟೀಲ ನಡಹಳ್ಳಿ

04:59 PM Jul 22, 2021 | Team Udayavani |

ವಿಜಯಪುರ: ನಾನು ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಮರಳುತ್ತೇನೆ ಎಂಬುದು ಊಹಾಪೋಹ. ಬಿಜೆಪಿ ಬಿಡುವ ಮಾತೇ ಇಲ್ಲ, ಇಂಥ ವದಂತಿ ಹಬ್ಬಿಸಲಾಗುತ್ತದೆ ಎಂದು ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಯಮದ ಅಧ್ಯಕ್ಷರಾದ ಮುದ್ದೇಬಿಹಾಳ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಸ್ಪಷ್ಟಪಡಿಸಿದ್ದಾರೆ.

Advertisement

ಇದನ್ನೂ ಓದಿ:2 ತಿಂಗಳ ಹಿಂದೆಯೇ ನಿರ್ಧರಿಸಿದ್ದೆ, ಸಿಎಂ ಸ್ಥಾನಕ್ಕೆ ಯಾರನ್ನೂ ಶಿಫಾರಸ್ಸು ಮಾಡಲ್ಲ:ಬಿಎಸ್ ವೈ

ಗುರುವಾರ ಮುದ್ದೇಬಿಹಾಳ ತಾಲೂಕ ರಕ್ಕಸಗಿ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾನು ಬಿಜೆಪಿ ತೊರೆದು ಕಾಂಗ್ರೆಸ್ ಸೇರುತ್ತೇನೆ ಎಂದು ಕೆಲವರು ಅಪಪ್ರಚಾರ ಮಾಡುತ್ತಿದ್ದು, ಇಂಥದ್ದಕ್ಕೆಲ್ಲ ಕ್ಷೇತ್ರದ ಮತದಾರರು ಕಿವಿಗೊಡಬೇಡಿ ಎಂದು ಮನವಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next