Advertisement
ಶ್ರೀ ಬಾರ್ಕೂರು ಮಹಾ ಸಂಸ್ಥಾನದಲ್ಲಿ ಶ್ರೀ ವಿಶ್ವ ಸಂತೋಷ ಭಾರತಿ ಶ್ರೀಪಾದರ ನೇತೃತ್ವದಲ್ಲಿ ನಡೆಯುತ್ತಿರುವ ಶ್ರೀ ನಾಗದೇವರ ಮತ್ತು ಮೂಲ ದೈವಗಳ ಪುನಃ ಪ್ರತಿಷ್ಠಾಪನೆ ಮತ್ತು ನಾಗಮಂಡಲೋತ್ಸವ ಪ್ರಯುಕ್ತ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.
Related Articles
Advertisement
ಆತ್ಮದೊಳಗೆ ಒಂದು ಇಟ್ಟುಕೊಂಡು ಇನ್ನೊಂದು ಮನಸ್ಸಿನಲ್ಲಿ ಮಂತ್ರ ಹೇಳಿದ್ರೆ ಪ್ರಯೋಜನವಿಲ್ಲ. ದೇವರ ಅನುಗ್ರಹ ಪಡೆಯಲು ಮಂತ್ರ ಕಲೀಬೇಕಾ? ಸಂಸ್ಕೃತ ಬೇಕಾ ? ಯಾವುದೂ ಬೇಡ ಎಂದರು.
ನಾನು ಯಾವುದೇ ದೇವಸ್ಥಾನಕ್ಕೆ ,ಧಾರ್ಮಿಕ ಕೇಂದ್ರಕ್ಕೆ ಯಾರಿಗೂ ವಿರುದ್ಧ ಇಲ್ಲ. ಮನುಷ್ಯತ್ವದಲ್ಲಿ ನಂಬಿಕೆ ಇಟ್ಟುಕೊಂಡವ. ಬಸವಣ್ಣ ಹೇಳಿದಂತೆ ಇವ ನಮ್ಮವ ,ನಮ್ಮವ ,ನಮ್ಮವ ಎನ್ನುವವ. ಕೆಲವರು ಇದನ್ನು ಹೇಳ್ತಾರೆ ಆ ಬಳಿಕ ಬದಿಗೆ ಕರೆದು ಇವ ಯಾವ ಜಾತಿ ಎಂದು ಕೇಳ್ತಾರೆ ಎಂದರು.
ಇವತ್ತು ನಾವು ಸಂಸತ್, ವಿಧಾನಸಭೆ ,ವಿಧಾನ ಪರಿಷತ್ ಎಂದು ಕರೆಯುತ್ತೇವೆಯೋ ಅದಕ್ಕೆಲ್ಲಾ ಮೂಲ ಬಸವಣ್ಣನ ಅನುಭವ ಮಂಟಪ ಎಂದರು.
ಎಲ್ಲಾ ಪದ್ದತಿಗಳನ್ನು ನಾವು ನಿರ್ಮಾಣ ಮಾಡಿಕೊಂಡಿರುವುದು. ದೇವರಿಗೂ ನಮಗೂ ನಡುವೆ ಒಂದು ಕಂದಕ ನಿರ್ಮಾಣ ಮಾಡಿರುವುದು,ಅದಕ್ಕೂ ಮಧ್ಯವರ್ತಿಗಳು.ಕೆಲವು ದೇವಸ್ಥಾನಗಳಿಗೆ ಕೆಲ ಜಾತಿಗಳಿಗೆ ಪ್ರವೇಶವಿಲ್ಲ. ಇನ್ನು ಕೆಲ ದೇವಸ್ಥಾನಗಳಿಗೆ ಮಹಿಳೆಯರಿಗೆ ಪ್ರವೇಶವಿಲ್ಲ ,ಅದು ಏಕೆ ಎಂದು ಪ್ರಶ್ನಿಸಿದರು.
ಎಲ್ಲಾ ಧರ್ಮಗಳು ಸಮಾನ. ದಯವೇ ಧರ್ಮದ ಮೂಲ ಹೊರತು ಬೇರೆನು ಅಲ್ಲ. ಧರ್ಮವನ್ನು ಜನರಿಗೆ ಅರ್ಥವಾಗುವ ಭಾಷೆಯಲ್ಲಿ ತಿಳಿಸಬೇಕು ,ದಾಸರು ,ಸಂತರು ಶರಣರು ,ಸೂಫಿಗಳು ಸರಳವಾದ ಭಾಷೆಯಲ್ಲಿ ಮನುಷ್ಯರನ್ನು ತಲುಪಿ ಎಲ್ಲರಿಗೂ ಅರ್ಥವಾದರು ಎಂದರು.
ಬಂಟ ಸಮಾಜವನ್ನು ಹೊಗಳಿದ ಸಿಎಂ ನಿಮ್ಮ ಸಮಾಜದಲ್ಲಿ ಪುರುಷ ಮಹಿಳೆ ಎಂಬ ಭೇದ ಇಲ್ಲ , ಸಾಹಸ ಪ್ರವೃತ್ತಿ ಇರುವವರು. ಹಾಗಾಗಿ ಯಾವುದೇ ಕ್ಷೇತ್ರದಲ್ಲಿ ಬದುಕಲು ಸಾಧ್ಯವಾಗಿದೆ ಎಂದರು.