Advertisement

ನಾನು ಯಾವುದೇ ಹುದ್ದೆಗೆ ಅಂಟಿಕೊಂಡವನಲ್ಲ: ಭೀಮಣ್ಣ ನಾಯ್ಕ

03:27 PM Apr 14, 2022 | Team Udayavani |

ಶಿರಸಿ:  ನಾನು ಯಾವುದೇ ಹುದ್ದೆಗೆ ಅಂಟಿಕೊಂಡವನಲ್ಲ. ಪಕ್ಷದಲ್ಲಿ ಕೆಲಸ ಮಾಡಿದವರನ್ನು ಅಂಥ ಹುದ್ದೆಗಳಲ್ಲಿ ನೋಡುವಂಥವನು ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ನಾಯ್ಕ ಪ್ರತಿಪಾದಿಸಿದ್ದಾರೆ.

Advertisement

‘ಉದಯವಾಣಿ’ಯೊಂದಿದೆ ಮಾತನಾಡಿದ ಅವರು, ಪಕ್ಷದಲ್ಲಿ ಸಾಮಾಜಿಕ ನ್ಯಾಯ ನೋಡಿ ಹುದ್ದೆ ಕೊಡಬೇಕು. ಜಿಲ್ಲಾ ವರಿಷ್ಠರ, ಹಿರಿಯರ, ಪದಾಧಿಕಾರಿಗಳ ಜೊತೆ ಸಮಾಲೋಚಿಸಿ ಎಲ್ಲ ವರ್ಗದವರ ವಿಶ್ವಾಸ ಪಡೆದು ಕೆಲಸ ಮಾಡಬೇಕು. ಪಕ್ಷದಲ್ಲಿ ಕೆಲಸ ಮಾಡಿದ ಹಿರಿಯರಿಗೆ, ಸಕ್ರಿಯರಿಗೆ ಹುದ್ದೆ ನೀಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಅವರಿಗೆ ಪತ್ರ ಬರೆಯುವುದಾಗಿ ಹೇಳಿದರು.

ನನಗೆ ನನ್ನನ್ನೂ ಕೇಳದೇ ಕೆಪಿಸಿಸಿ ಕಾರ್ಯದರ್ಶಿ ಹುದ್ದೆ ನೀಡಿದ್ದಾರೆ. ಇದರ ಬಗ್ಗೆ ಅಸಮಧಾನ ಇಲ್ಲ. ಆದರೆ, ಕೆಲಸ ಮಾಡಿದ ಬ್ರಾಹ್ಮಣ, ಮರಾಠ ವರ್ಗಕ್ಕೂ ನ್ಯಾಯ ಕೊಡಬೇಕಿತ್ತು. ಕೇವಲ ಒಂದೇ ಕಡೆ ನೀಡುವುದು ಸರಿಯಲ್ಲ ಎಂದರು.

ನಾನು ಜನ ಸಾಮಾನ್ಯರ ಜೊತೆ ಬೆಳೆದವ. ಜಿಲ್ಲಾ ಪಂಚಾಯತ್‍ನಲ್ಲೂ ಕೆಲಸ‌ ಮಾಡಿದ್ದೇನೆ. ಪಕ್ಷದ ಹುದ್ದೆ ಇರಲಿ, ಬಿಡಲಿ ಸದಾ ಜನರ ಜೊತೆ ಕೆಲಸ ಮಾಡುವೆ. ನಾನು ಈ ಜಾಗದಲ್ಲಿ ಕುಳಿತು ಕೊಳ್ಳುವದಕ್ಕಿಂತ ಇನ್ನೊಬ್ಬನ್ನು ನೋಡಲು ಆಸೆ ಪಡುವೆ, ಸ್ವಾರ್ಥದ ರಾಜಕಾರಣಿ ನಾನಲ್ಲ ಎಂದರು.

ಇದನ್ನೂ ಓದಿ:ಬ್ಯಾರಿಗೇಟ್ ಹತ್ತಿ ಪೊಲೀಸರ ಮೇಲೆ ಬಿದ್ದ ಡಿ.ಕೆ. ಶಿವಕುಮಾರ್

Advertisement

ಪಕ್ಷದ ಬೆಳವಣಿಗೆಗೆ, ಕಾರ್ಯಕರ್ತರ ಪ್ರಶ್ನೆಗೆ ಉತ್ತರ ಕೊಡುವಂತಿದ್ದರೆ ಎಲ್ಲರೂ ಕೈ ಜೋಡಿಸುತ್ತಾರೆ. ಜಿಲ್ಲೆಯಲ್ಲಿ ಮಾಜಿ ಶಾಸಕರು, ವಿಧಾನ ಪರಿಷತ್ ಸದಸ್ಯರಾಗಿದ್ದರು, ವಿವಿಧ ಹಂತದ ಜನಪ್ರತಿನಿಧಿಗಳೂ ಇದ್ದಾರೆ. ಎಲ್ಲರ ವಿಶ್ವಾಸ ಪಡೆದು ನೇಮಕಾತಿ ಆದರೆ ಪಕ್ಷದ ಬಲವರ್ಧನೆ ಹೆಚ್ಚು ಆಗುತ್ತದೆ ಎಂದರು.

ಬದಲಾವಣೆ V/S ಮುಂದುವರಿಕೆ!

ಜಿಲ್ಲಾ ಕಾಂಗ್ರೆಸ್ ನ್ನು ಕಳೆದ ಮೂರು ಅವಧಿಗೂ ಹೆಚ್ಚುಕಾಲ ಸಕ್ರೀಯವಾಗಿ ಮುನ್ನಡೆಸಿಕೊಂಡು ಬಂದ ಜಿಲ್ಲಾ ಅಧ್ಯಕ್ಷ ಭೀಮಣ್ಣ ಅವರ‌ ಬದಲಿಸಿ ಆ ಸ್ಥಾನಕ್ಕೆ ವೆಂಕಟೇಶ ಹೆಗಡೆ ಹೊಸಬಾಳೆ, ಸಾಯಿ ಗಾಂವಕರ್, ಶಿವಾನಂದ ಕಡತೋಕ, ರವೀಂದ್ರ ನಾಯ್ಕ ಹೆಸರು ಪ್ರಸ್ತಾಪ ಇದೆ. ಇನ್ನೊಂದು‌ ಮೂಲದ ಪ್ರಕಾರ‌ ಬರಲಿರುವುದು ತಾ.ಪಂ., ಜಿ.ಪಂ, ಶಾಸನ ಸಭೆಗಳ ಚುನಾವಣೆ ಆಗಿರುವದರಿಂದ ಅನುಭವಿ ಭೀಮಣ್ಣ‌ ಅವರನ್ನೇ ಮುಂದುವರಿಸುತ್ತಾರೆ ಎಂಬ ಮಾಹಿತಿ ಕೂಡ ಇದೆ. ಆದರೆ, ರಾಜ್ಯ ಕಾರ್ಯದರ್ಶಿ ನೀಡಿದ್ದೇ ಬದಲಾಯಿಸಲು ಎಂಬ ಮಾತೂ ಕೇಳಿ ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next